ತುಮಕೂರು: ಬಕ್ರಿದ್ ಹಬ್ಬದ ಪ್ರಯುಕ್ತ ತುಮಕೂರಿನಲ್ಲಿ ಲಕ್ಷ ಲಕ್ಷಕ್ಕೆ ಕುರಿ, ಮೇಕೆಗಳ ಭರ್ಜರಿ ಮಾರಾಟ ಮಾಡಲಾಗುತ್ತಿದೆ.
ಬಕ್ರೀದ್ ಹಬ್ಬ ಎಂದರೆ ಮುಸ್ಲಿಂಮರಿಗೆ ಶ್ರೇಷ್ಠ ಹಬ್ಬ, ದಾನ ಧರ್ಮ ಮಾಡುವ ಮುಸ್ಲಿಂ ಜನಾಂಗ ದೇವರ ಕೃಪೆ ಹೊಂದಲು ಬಡವರಿಗೆ ವಸ್ತು, ಹಣ, ಬಟ್ಟೆ, ಧಾನ್ಯ ದಾನ ಮಾಡುವರು, ಜೊತೆಗೆ ಕುರಿ, ಮೇಕೆ ಮಾಂಸ ಹಂಚಿ ಒಬ್ಬರಿಗೊಬ್ಬರು ಶುಭಾಶಯ ಕೋರುವುದು ವಾಡಿಕೆಯಾಗಿದೆ. ಅದರಲ್ಲೂ ಶ್ರೀಮಂತರು ಎಷ್ಟೇ ಹಣ ವೆಚ್ಚವಾದರು ಚಿಂತೆ ಮಾಡದೆ ಕುರಿ ಮೇಕೆ ಖರೀದಿ ಮಾಡುತ್ತಾರೆ.
ಮುಸ್ಲಿಂಮರು ಸ್ವಂತವಾಗಿ ಕುರಿ, ಮೇಕೆ ಸಾಕುವುದು ಬಹಳ ವಿರಳ. ಆದ್ದರಿಂದ ಇಂತಹ ಬಕ್ರೀದ್, ರಂಜಾನ್ ಹಬ್ಬಗಳ ಸಮಯದಲ್ಲಿ ರೈತರಿಂದ ಕುರಿ, ಮೇಕೆ ದಾನ ಮಾಡುತ್ತಾರೆ. ನಗರದ ಬಟವಾಡಿ, ಧಾನ ಪ್ಯಾಲೇಸ್, ಗುಬ್ಬಿ ಗೇಟ್ ರಿಂಗ್ ರಸ್ತೆ ಸೇರಿ ಹಲವೆಡೆ ಕುರಿ, ಮೇಕೆ ಮಾರಾಟ ಭರ್ಜರಿಯಾಗಿ ನಡೆಯುತ್ತೆ.
ಇನ್ನು ಕೆಲವರು ಮೈಸೂರು, ಮಂಡ್ಯ, ಮದ್ದೂರುನಿಂದಲೂ ಕೊಬ್ಬಿದ, ಕುರಿ ಮೇಕೆ ತಂದು 50 ಸಾವಿರದಿಂದ 1 ಲಕ್ಷಕ್ಕೆ ಮಾರಾಟ ಮಾಡುತ್ತಾರೆ.
Comments are closed.