ಪಾವಗಡ: ಆಟವಾಡಲು ಸಹೋದರರೊಂದಿಗೆ ತೆರೆಳಿದ್ದ ಯುವಕ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಮಂಗಳವಾರ ಪಟ್ಟಣದ ಸಾಯಿಬಾಬ ಮಂದಿರದ ಬಳಿಯ ಅಗಸರ ಕುಂಟೆಯಲ್ಲಿ ನಡೆದಿದೆ.
ಉಜ್ವಲ್(13) ಮೃತಪಟ್ಟದು ದುರ್ದೈವಿ. ಮೂಲತಹ ಶಿವಮೊಗ್ಗ ಪಟ್ಟಣಕ್ಕೆ ಸೇರಿದ ರಮೇಶ್ ಬಿನ್ ಆರ್ಮುಗಂ ಎಂಬುವವರ ಮಗನಾಗಿದ್ದಾನೆ. ರಮೇಶ್ ಪ್ರಸ್ತುತ ಪಾವಗಡ ಪಟ್ಟಣದ ಸಾಯಿಬಾಬ ಮಂದಿರದ ಬಳಿಯ ಮನೆಯೊಂದರಲ್ಲಿ ಬಾಡಿಗೆದಾರರಾಗಿದ್ದು, ಕುಟುಂಬ ನಿರ್ವಹಣೆಗಾಗಿ ಜಲ್ಲಿ ಮತ್ತು ಇಟ್ಟಿಗೆ ಸರಬರಾಜು ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಉಜ್ವಲ್ ಆಂಧ್ರಾದ ಅನಂತಪುರ ಪಟ್ಟಣದಲ್ಲಿ 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದ, ಶಾಲೆಗೆ ರಜಾ ಇದ್ದ ಕಾರಣ ಪಾವಗಡದಲ್ಲಿ ಉಳಿದಿದ್ದ ಎನ್ನಲಾಗಿದೆ. ಮಂಗಳವಾರ ಬೆಳಿಗ್ಗೆ 11 ಗಂಟೆ ಸಮಯದಲ್ಲಿ ತನ್ನ ತಂಗಿ ನವ್ಯ ಹಾಗೂ ಸಹೋದರ ಚೇತಸ್ ರೊಂದಿಗೆ ಮನೆಯ ಬಳಿಯಿದ್ದ ಅಗಸರ ಕುಂಟೆಕೆರೆಯ ನೀರಿನಲ್ಲಿ ಆಟವಾಡುತ್ತಿದ್ದಾಗ ಕಾಲು ಜಾರಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವುದಾಗಿ ಪಾವಗಡ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Comments are closed.