ಸಹಕಾರ ಸಚಿವರ ವಿರುದ್ಧ ಅರ್ಚಕರ ಆಕ್ರೋಶ

ಸಚಿವ ಕೆ.ಎನ್.ರಾಜಣ್ಣ ದರ್ಪದ ಮಾತು ಆಡುವುದು ನಿಲ್ಲಿಸಲಿ

303

Get real time updates directly on you device, subscribe now.


ತುಮಕೂರು: ಸಹಕಾರಿ ಸಚಿವ ಕೆ.ಎನ್.ರಾಜಣ್ಣ ಅವರು ದಾವಣಗೆರೆಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಬ್ರಾಹ್ಮಣರು 1 ರೂ. ಹೂವು, 1 ರೂ. ಊದು ಬತ್ತಿ ತರುವುದಿಲ್ಲ ಎಂದು ತುಂಬು ಸಭೆಯಲ್ಲಿ ಹಾಸ್ಯಾಸ್ಪದವಾಗಿ ಮಾತನಾಡಿರುವುದು ಅರ್ಚಕರು, ಆಗಮಿಕರಿಗೆ ನೋವುನ್ನುಂಟು ಮಾಡಿದ್ದು ಕೂಡಲೇ ಸಚಿವರು ಅರ್ಚಕರ ಮತ್ತು ಆಗಮಿಕರ ಕ್ಷೇಮೆ ಯಾಚಿಸಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ರಾಜ್ಯ ಧಾರ್ಮಿಕ ದತ್ತಿ ದೇವಾಲಯ ಅರ್ಚಕರು ಮತ್ತು ಆಗಮಿಕರ ಸಂಘದ ವತಿಯಿಂದ ಸಚಿವ ರಾಜಣ್ಣ ಅವರು ಕ್ಷಮೆ ಕೋರುವಂತೆ ಒತ್ತಾಯಿಸಲಾಯಿತು.

ರಾಜ್ಯ ಧಾರ್ಮಿಕ ದತ್ತಿ ದೇವಾಲಯ ಅರ್ಚಕರ ಮತ್ತು ಆಗಮಿಕರ ಸಂಘದ ರಾಜ್ಯಾಧ್ಯಕ್ಷ ಎಂ.ಎಸ್.ವೆಂಕಟಚಾಲಯ್ಯ ಮಾತನಾಡಿ, ಅರ್ಚಕರನ್ನ ಅವಮಾನಿಸಿದ ಸಚಿವರಿಗೆ ಸಾಮಾನ್ಯ ಜ್ಞಾನವೂ ಇಲ್ಲ. ಪುರಾತನ ಕಾಲದಿಂದಲೂ ಭಾರತ ದೇಶದಲ್ಲಿ ದೇವಾಲಯಗಳಲ್ಲಿ, ಸರ್ವ ಜನಾಂಗದವರು ಪೂಜಾ ಕೈಂಕರ್ಯ ಮಾಡುತ್ತಿದ್ದು, ಸಾರ್ವಜನಿಕರು ಕೊಡಲಿ, ಬಿಡಲಿ ಪ್ರತಿನಿತ್ಯ ಪೂಜೆ ನಡೆಸಿಕೊಂಡು ಬರುತ್ತಿರುವ ನಮ್ಮಗಳಿಗೆ ಸಚಿವರು ಮಾಡಿದ ಅವಮಾನ ನಮಗೆ ಘಾಸಿಯಾಗಿದ್ದು ಈ ಕೂಡಲೇ ಕ್ಷಮೆಯಾಚನೆ ಮಾಡಬೇಕೆಂದು ಒತ್ತಾಯಿಸಿದರು.

ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕರಿಸುವಾಗ ರಾಗ ದ್ವೇಷ ಆಸೂಯೆ ಮಾಡದೆ ಎಲ್ಲರನ್ನೂ ಸಮಾನ ರೀತಿಯಲ್ಲಿ ನಿಷ್ಠೆಯಿಂದ ಪ್ರೀತಿಯಿಂದ ಸಚಿವನಾಗಿ ಕಾರ್ಯ ನಿರ್ವಹಿಸುತ್ತೇನೆಂದು ಬುದ್ಧ, ಬಸವ, ವಾಲ್ಮೀಕಿ ಇವರ ಮೇಲೆ ಪ್ರಮಾಣ ಮಾಡಿ ಅಧಿಕಾರ ಸ್ವೀಕರಿಸಿರುತ್ತೇನೆ ಎಂದು ಪ್ರಮಾಣ ವಚನ ಸ್ವೀಕರಿಸಿ ಈಗ ಗೌರವ ಯುತವಾಗಿರುವ ನಮಗೆ ನಿಂದನೆ ಮಾಡಿರುವುದು ಖಂಡನೀಯವಾಗಿದ್ದು, ರಾಜ್ಯಪಾಲರು ಇವರನ್ನ ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಎಂದರು.

ಕಾಡಿನಲ್ಲಿ ಅನ್ಯರನ್ನು ಕೊಂದು ತಿನ್ನುತ್ತಿದ್ದ ಬೇಟೆಗಾರನಿಗೆ ಜ್ಞಾನೋದಯ ಮಾಡಿಸಿ ವಾಲ್ಮೀಕಿ ಯನ್ನಾಗಿಸಿದ್ದು ಬ್ರಾಹ್ಮಣರು ಬುದ್ಧ, ಬಸವ, ವಾಲ್ಮೀಕಿ, ಅಂಬೇಡ್ಕರ್ ಹೆಸರಿನಲ್ಲಿ ಅಧಿಕಾರ ಹೊಂದಿರುವ ರಾಜಣ್ಣನವರ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದು ಅವರು ಮೊಂಡುತನ ಬಿಟ್ಟು ಕೂಡಲೇ ಕ್ಷಮೆಯಾಚಿಸಬೇಕು. ಇಲ್ಲವಾದರೆ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ನಡೆಸುತ್ತೇವೆ. ಕೂಡಲೇ ಇವರನ್ನು ಸಚಿವ ಸ್ಥಾನದಿಂದ ವಜಗೊಳಿಸಬೇಕು ಎಂದು ರಾಜ್ಯಪಾಲರು ಮತ್ತು ಸಭಾಧ್ಯಕ್ಷರಿಗೆ ಒತ್ತಾಯಿಸಿದರು.

ರಾಜ್ಯ ಮುಜರಾಯಿ ದೇವಾಲಯಗಳ ಅರ್ಚಕ ಮತ್ತು ಆಗಮಿಕರ ಸಂಘದ ಉಪಾಧ್ಯಕ್ಷ ಜಾನಕಿರಾಮ್ ಮಾತನಾಡಿ, ಸಚಿವ ಕೆ.ಎನ್.ರಾಜಣ್ಣ ಅವರು ಕೂಡಲೇ ಅರ್ಚಕರು ಮತ್ತು ಬ್ರಾಹ್ಮಣರ ಕ್ಷಮೆಯಾಚಿಸಬೇಕು. ರಾಜಣ್ಣನವರು ಯಾವ ದೇವಾಲಯಕ್ಕೆ ಹೂವು, ಊದುಬತ್ತಿ ಕೊಡಿಸಿದ್ದಾರೆ. ಅರ್ಚಕರು ದೇವಾಲಯಕ್ಕೆ ಯಾರು ಬರದಿದ್ದರೂ ಸ್ವಂತ ಖರ್ಚಿನಿಂದ ದೇವಾಲಯ ನಿರ್ವಹಣೆ ಮಾಡುತ್ತಿರುತ್ತಾರೆ. ಅಂತಹವರ ವಿರುದ್ಧ ಮನಸ್ಸಿಗೆ ಗಾಸಿಯಾಗುವಂತೆ ಮಾತನಾಡಿರುವುದು ಖಂಡನೀಯ ಎಂದರು.

ಚಿಕ್ಕನಾಯಕನಹಳ್ಳಿಯ ರಂಗನಾಥಸ್ವಾಮಿ ದೇವಾಲಯದ ಅರ್ಚಕ ಶ್ರೀನಿವಾಸ್ ಮಾತನಾಡಿ, ಸಚಿವ ಕೆ.ಎನ್.ರಾಜಣ್ಣ ಅವರು ವಿಶ್ರಾಂತಿ ತೆಗೆದುಕೊಳ್ಳುವ ದಿನದಲ್ಲಿ ನಾವುಗಳು ಮಾಡಿದ ಪೂಜಾ ಫಲದಿಂದಾಗಿ ಮತದಾರರಿಂದ ಓಟು ಪಡೆದು ಸಚಿವರಾಗಿದ್ದಾರೆ. ಬಡ ಅರ್ಚಕರ ಮೇಲೆ ದರ್ಪ ತೋರಿ ಚಪ್ಪಾಳೆ ಗಿಟ್ಟಿಸುವ ಬರದಲ್ಲಿ ನಮ್ಮಗಳನ್ನು ಹೀಯಾಳಿಸಿ ಮಾತನಾಡಿದ್ದಾರೆ. ಇದು ಅವರಿಗೆ ಶೋಭೆ ತರುವುದಿಲ್ಲ ಎಂದರು.
ಸಂಘಟನಾ ಕಾರ್ಯದರ್ಶಿ ಶ್ರೀನಿವಾಸ್ ಮಾತನಾಡಿ, ಸಚಿವಕೆ.ಎನ್.ರಾಜಣ್ಣ ನವರು ಯಾವುದಾದರೂ ಒಂದು ದೇವಾಲಯ ದತ್ತು ಪಡೆದು ಪೂಜೆ ಪುನಸ್ಕಾರ ನಡೆಸಿದ್ದರೆ ಅದರ ಅನುಭವ ಗೊತ್ತಿರುತ್ತಿತ್ತು. ಸಿಎಂ ಸಿದ್ದರಾಮಯ್ಯನವರನ್ನ ಮೆಚ್ಚಿಸಲು ದರ್ಪದ ಮಾತುಗಳನ್ನಾಡಿರುವುದು ಖಂಡನೀಯ. ಕೂಡಲೇ ಕ್ಷಮೆ ಕೇಳದೆ ಹೋದರೆ ಮುಜರಾಯಿ ಇಲಾಖೆ ಮತ್ತು ವಿಧಾನಸೌಧ ಮುತ್ತಿಗೆ ಹಾಕಿ ರಾಜ್ಯಾದ್ಯಾಂತ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದರು.

ಪ್ರತಿಭಟನೆ ವೇಳೆ ಅಪಾರ ಜಿಲ್ಲಾಧಿಕಾರಿ ಶಿವಾನಂದ ಬಿ ಕರಾಳೆ ಅವರಿಗೆ ಮನವಿ ಸಲ್ಲಿಕೆ ಮಾಡಲಾಯಿತು. ಅರ್ಚಕ, ಆಗಮಿಕ ಸಂಘಟನೆಯ ಗೋಪಿನಾಥ್, ಗೌರಿಬಿದನೂರು ಪ್ರಕಾಶ್, ಗುಂಡ್ಲುಪೇಟೆ ಸೋಮಶೇಖರ್, ಮದ್ದೂರು ಬಸವರಾಜು, ಹಲಗೂರು ಪ್ರಸಾದ್, ಸಾಸಲಕಟ್ಟೆ ಶ್ರೀನಿವಾಸ್, ಮಧುಗಿರಿಯ ರಘುನಂದನ್, ನೆಲಮಂಗಲ ವಸಂತ್, ಅಣ್ಣಯ್ಯ ಸ್ವಾಮಿ ಇನ್ನಿರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!