ಭಾಷಾ ಶಾಸ್ತ್ರವು ನಂಬಿಕೆ ಆಧಾರಿತ ಸಿದ್ಧಾಂತವಲ್ಲ

212

Get real time updates directly on you device, subscribe now.


ತುಮಕೂರು: ಪೌರಾಣಿಕ ಸಾಹಿತ್ಯದ ಅಧ್ಯಯನಕ್ಕೆ ರಚನಾತ್ಮಕ ವಿಧಾನವುದಿ ಸ್ಟ್ರಕ್ಚರಲ್ ಸ್ಟಡಿ ಆಫ್ ಮಿಥ್ ಪ್ರಬಂಧದಲ್ಲಿ ಹೇಗೆ ಪರಿಣಾಮಕಾರಿಯಾಗಿದೆ ಎಂದು ಬೆಂಗಳೂರಿನ ಸೇಂಟ್ ಜೋಸೆಫ್ಸ್ ಕಾಲೇಜಿನ ಇಂಗ್ಲಿಷ್ ವಿಭಾಗದ ಪ್ರಾಧ್ಯಾಪಕ ಪ್ರೊ.ಡಿ.ಯೋಗಾನಂದ ರಾವ್ ತಿಳಿಸಿದರು.

ತುಮಕೂರು ವಿಶ್ವ ವಿದ್ಯಾಲಯದ ಸ್ನಾತಕೋತ್ತರ ಇಂಗ್ಲಿಷ್ ಸಾಹಿತ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗವು ಆಯೋಜಿಸಿದ್ದ ದಿ ಸ್ಟ್ರಕ್ಚರಲ್ ಸ್ಟಡಿ ಆಫ್ ಮಿಥ್ ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ಭಾಷಾ ಶಾಸ್ತ್ರ, ಪುರಾಣ, ಮಾನವ ಶಾಸ್ತ್ರ, ಸಾಹಿತ್ಯ ವಿಮರ್ಶೆ ಹಾಗೂ ಸಾಹಿತ್ಯ ಸಿದ್ಧಾಂತ ಉಪಯೋಗಿಸಿಕೊಂಡು ಒಂದು ಪೌರಾಣಿಕ ಸಾಹಿತ್ಯದ ರಚನಾತ್ಮಕ ಅಧ್ಯಯನವನ್ನು ಕ್ಲಾಡ್ ಲೆವಿಸ್ಟ್ರಾಸ್ ಹೇಗೆ ತನ್ನ ಪ್ರಬಂಧ ದಿ ಸ್ಟ್ರಕ್ಚರಲ್ ಸ್ಟಡಿ ಆಫ್ ಮಿಥ್ ನಲ್ಲಿ ಮಂಡಿಸುತ್ತಾನೆ ಎಂದು ಹೇಳಿದರು.

ಭಾಷಾ ಶಾಸ್ತ್ರವು ನಂಬಿಕೆ ಆಧಾರಿತ ಸಿದ್ಧಾಂತವಲ್ಲ, ಅದು ಒಂದು ರೀತಿಯ ವೈಜ್ಞಾನಿಕ ಅಧ್ಯಯನ, ಭಾಷಾ ಶಾಸ್ತ್ರವನ್ನು ಒಂದು ವಾಕ್ಯದಲ್ಲಿರುವ ಪ್ರತಿ ಪದದ ಕಾರ್ಯ ವೈಖರಿಯನ್ನು ಅರ್ಥ ಮಾಡಿಕೊಳ್ಳಲು ಬಳಸಲಾಗುವುದು ಎಂದರು.

20ನೇ ಶತಮಾನದ ಮೊದಲ ಅರ್ಧದಲ್ಲಿ ಭಾಷಾ ಸಿದ್ಧಾಂತದ ಅಭಿವೃದ್ಧಿಯ ಮೇಲೆ ಸಾಸುರ್ ಪ್ರಮುಖ ಪ್ರಭಾವ ಬೀರಿದರು, ಅವರ ಕಲ್ಪನೆ ರಚನಾತ್ಮಕ ಭಾಷಾಶಾಸ್ತ್ರದ ಕೇಂದ್ರ ತತ್ವಗಳಲ್ಲಿ ಸಂಯೋಜಿಸಲ್ಪಟ್ಟವು. ರಚನಾತ್ಮಕತೆಗೆ ಅವರ ಮುಖ್ಯ ಕೊಡುಗೆಯಾಗಿ ಭಾಷೆ, ಅಮೂರ್ತ ಮತ್ತು ಅಗೋಚರ ಪದರ ಹಾಗೂ ಪೆರೋಲ್, ನಾವು ನಿಜ ಜೀವನದಲ್ಲಿ ಕೇಳುವ ನಿಜವಾದ ಭಾಷಣವನ್ನು ಸೂಚಿಸುತ್ತದೆ ಎಂದು ತಿಳಿಸಿದರು.
ಈ ಚೌಕಟ್ಟನ್ನು ನಂತರ ಕ್ಲಾಡ್ ಲೆವಿಸ್ಟ್ರಾಸ್ ಅಳವಡಿಸಿಕೊಂಡರು. ರಚನಾತ್ಮಕ ವಾದವು ಸಾಹಿತ್ಯಿಕ ಪಠ್ಯ ವಿಶ್ಲೇಷಿಸುವ ಒಂದು ವಿಧಾನವಾಗಿದೆ ಹಾಗೂ ಸಾಹಿತ್ಯಿಕ ಪಠ್ಯ ಅರ್ಥ ಮಾಡಿಕೊಳ್ಳಲು ರಚನಾತ್ಮಕ ವಿಧಾನವನ್ನು ಹೇಗೆ ಬಳಸಬಹುದು ಎಂಬುದನ್ನು ಚರ್ಚಿಸಿದರು.

ಸ್ನಾತಕೋತ್ತರ ಇಂಗ್ಲಿಷ್ ಸಾಹಿತ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಮುಖ್ಯಸ್ಥ ಪ್ರೊ.ಎನ್.ಎಸ್.ಗುಂಡೂರ್, ಪ್ರಾಧ್ಯಾಪಕ ಪ್ರೊ.ಹೆಚ್.ಕೆ.ಶಿವಲಿಂಗ ಸ್ವಾಮಿ, ಸಹಾಯಕ ಪ್ರಾಧ್ಯಾಪಕ ಡಾ.ಎಸ್.ಎನ್.ಕಿರಣ್, ಡಾ.ಮೊನ್ಬಿಂದರ್ ಕೌರ್ ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!