ತುಮಕೂರು: ನಗರಕ್ಕೆ ಕುಡಿಯುವ ನೀರಿನ ಉದ್ದೇಶಕ್ಕೆ ಗೊರೂರು ಜಲಶಾಯದಿಂದ ಬುಗುಡನಹಳ್ಳಿ ಕೆರೆಗೆ ನೀರನ್ನು ಹರಿಸಿದ ಹಿನ್ನೆಲೆ ತುಮಕೂರು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಹಾಗೂ ಪಾಲಿಕೆ ಮೇಯರ್ ಪ್ರಭಾವತಿ ಸ್ಥಳಕ್ಕೆ ಭೇಟಿ ನೀಡಿ ವೀಕ್ಷಿಸಿದರು.
ಈ ವೇಳೆ ಮಾತನಾಡಿದ ಶಾಸಕರು ಬುಗುಡನಹಳ್ಳಿ ಕೆರೆಗೆ ನೀರು ಹರಿಸುವ ಸಂಬಂಧ ಮನವಿ ಮಾಡಲಾಗಿ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಹಾಗೂ ಹಾಸನದ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಅವರಿಗೆ ತುಮಕೂರು ನಗರದ ಜನತೆಯ ಪರವಾಗಿ ಹಾಗೂ ತುಮಕೂರು ಮಹಾ ನಗರ ಪಾಲಿಕೆಯ ಮೇಯರ್, ಉಪ ಮೇಯರ್ ಹಾಗೂ ಪಾಲಿಕೆ ಸದಸ್ಯರ ಪರವಾಗಿ ಅಭಿನಂದನೆ ಅರ್ಪಿಸುತ್ತೇನೆ ಹಾಗೂ ಬುಗುಡನಹಳ್ಳಿ ಕೆರೆ ಕಾಲುವೆ ಮರು ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದ ಕಾರಣ ತಡವಾಯಿತು. ಇಲ್ಲದಿದ್ದಲ್ಲಿ ಇನ್ನು ತುರ್ತಾಗಿ ನೀರು ಹರಿಸಲಾಗುತ್ತಿತ್ತು ಎಂದು ತಿಳಿಸಿದರು.
ತುಮಕೂರು ನಗರಕ್ಕೆ ಕುಡಿಯುವ ನೀರಿನ ಸಮಸ್ಯೆಯಿಲ್ಲ, ಏಕೆಂದರೆ ತುಮಕೂರು ನಗರಕ್ಕೆ ಹೇಮಾವತಿ ನೀರು ಬಂದಿದೆ ಹಾಗೂ ಈಗಾಗಲೇ ಮರಳೂರು ಕೆರೆ, ಗಂಗಸಂದ್ರ ಕೆರೆ, ಅಮಾನಿಕೆರೆಯಲ್ಲಿ ನೀರು ತುಂಬಿಸಿರುವ ಕಾರಣ ಕುಡಿಯುವ ನೀರಿಗೆ ಯಾವುದೇ ಭಂಗವಿರುವುದಿಲ್ಲ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತುಮಕೂರು ಮಹಾ ನಗರಪಾಲಿಕೆಯ ಉಪ ಮೇಯರ್ ಟಿ.ಕೆ.ನರಸಿಂಹಮೂರ್ತಿ, ಪಾಲಿಕೆ ವಿರೋಧ ಪಕ್ಷದ ನಾಯಕರಾದ ವಿಷ್ಣುವರ್ಧನ, ಸದಸ್ಯರಾದ ಮಲ್ಲಿಕಾರ್ಜುನ್, ವೀಣಾ ಮನೋಹರಗೌಡ, ಶ್ರೀನಿವಾಸ್, ಮಾಜಿ ಸದಸ್ಯ ಇಂದ್ರಕುಮಾರ್, ಮುಖಂಡರಾದ ಮಹೇಶ್ ಬಾಬು, ಪುಟ್ಟರಾಜು ಹಾಗೂ ಪಾಲಿಕೆ ಅಧಿಕಾರಿಗಳು ಇದ್ದರು.
Comments are closed.