3 ದಶಕಗಳ ಸುದೀರ್ಘ ಸೇವೆಗೆ ಸಂದ ಗೌರವ

ಡಾ.ಪ್ರಶಾಂತ್ ಬಿ.ನಿರ್ವಾಣಿ ರಾವ್ ಗೆ ಪ್ರತಿಷ್ಠಿತ ರಾಷ್ಟ್ರೀಯ ಪ್ರಶಸ್ತಿ

190

Get real time updates directly on you device, subscribe now.


ತುಮಕೂರು: ಇಲ್ಲಿನ ಗ್ಯಾಸ್ಟ್ರೋ-ಇಂಟೆಸ್ಟಿನಲ್ ಕೇರ್ ಮತ್ತು ಎಂಡೋಸ್ಕೋಪಿ ಸ್ಪೆಷಲಿಸ್ಟ್ ಡಾ.ಪ್ರಶಾಂತ್ ಬಿ. ನಿರ್ವಾಣಿ ರಾವ್ ಅವರಿಗೆ ಭಾರತದ ಸ್ಪೂರ್ತಿದಾಯಕ ಗ್ಯಾಸ್ಟ್ರೋ ಎಂಟರಾಲಜಿಸ್ಟ್ ಪ್ರತಿಷ್ಠಿತ ಪ್ರಶಸ್ತಿ-2023 ಸಂದಾಯವಾಗಿದೆ.

ನವದೆಹಲಿಯ ಹಯಾಟ್ ರೀಜೆನ್ಸಿ ಹೋಟೆಲ್ ನಲ್ಲಿ ನಡೆದ ವೈದ್ಯರ ದಿನದ ಕಾನ್ ಕ್ಲೇವ್-2023 ಸಮಾವೇಶದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ತುಮಕೂರಿನ ಡಾ.ಪ್ರಶಾಂತ್ ಅವರು ಭರ್ತಿ 30 ವರ್ಷಗಳಿಂದ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದು, ಜನಮನ್ನಣೆ ಗಳಿಸಿದ್ದಾರೆ. ಇವರ ಅವಿರತ ಆವಿಷ್ಕಾರ ಮತ್ತು ಗ್ಯಾಸ್ಟ್ರೋ-ಇಂಟೆಸ್ಟಿನಲ್ ಕೇರ್ ವಿಭಾಗದ ಸೇವೆ ಪರಿಗಣಿಸಿ ಗ್ಯಾಸ್ಟ್ರೋ ಎಂಡರಾಲೋಜಿಸ್ಟ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಈ ಸಂದರ್ಭದಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಾ.ಮನ್ಸುಖ್ ಮಾಂಡವಿಯಾ, ಐಎಂಎ ರಾಷ್ಟ್ರೀಯ ಅಧ್ಯಕ್ಷ ಡಾ.ಶರದ್ ಕುಮಾರ್ ಅಗರ್ವಾಲ್, ನಟಿ ಮತ್ತು ರೂಪದರ್ಶಿ ಡಾ.ಅದಿತಿ ಗೋವಿತ್ರಿಕರ್, ಡಾ.ಕಿರಿತ್ ಸೋಲಂಕಿ, ಲೆಫ್ಟಿನೆಂಟ್ ಜನರಲ್ ದಲ್ಜಿತ್ ಸಿಂಗ್, ಕ್ರಿಕೆಟಿಗ ಜಾವಗಲ್ ಶ್ರೀನಾಥ್ ಮತ್ತಿತರ ಗೌರವಾನ್ವಿತರು ಇದ್ದರು.

Get real time updates directly on you device, subscribe now.

Comments are closed.

error: Content is protected !!