ಪೊಲೀಸ್ ರಕ್ಷಣೆಯಲ್ಲಿ ಸ್ಮಶಾನ ಒತ್ತುವರಿ ತೆರವು

271

Get real time updates directly on you device, subscribe now.


ಕುಣಿಗಲ್: ತಹಶೀಲ್ದಾರ್ ನೇತೃತ್ವದಲ್ಲಿ ಪಟ್ಟಣದಲ್ಲಿ ಒತ್ತುವರಿಯಾಗಿದ್ದ ವೀರಶೈವ ಸ್ಮಶಾನ ತೆರವು ಕಾರ್ಯ ಸೋಮವಾರ ಪೊಲೀಸ್ ರಕ್ಷಣೆಯಲ್ಲಿ ನೆರವೇರಿತು.

ಪಟ್ಟಣದಲ್ಲಿ ಪುರಸಭೆ ವ್ಯಾಪ್ತಿಗೆ ಹೊಂದಿಕೊಂಡಂತೆ ಕಸಬಾ ಗ್ರಾಮದ ಸರ್ವೇ ನಂ.91 ರಲ್ಲಿ 3 ಎಕರೆ ಆರು ಗುಂಟೆ ಭೂಮಿ ವೀರಶೈವ ಸ್ಮಶಾನ ಎಂದು ದಾಖಲೆಗಳಲ್ಲಿ ಬರುತ್ತಿತ್ತು. ಆದರೆ ಸದರಿ ಸ್ಮಶಾನವು ವ್ಯಾಪಕ ನಗರೀಕರಣದ ಪ್ರಭಾವದಿಂದಾಗಿ ಒತ್ತುವರಿಯಾದ ಕಾರಣ ಒತ್ತುವರಿ ತೆರವುಗೊಳಿಸುವಂತೆ ತಾಲೂಕು ಆಡಳಿತಕ್ಕೆವೀರಶೈವ, ಲಿಂಗಾಯಿತ ಸಮುದಾಯದ ಹಲವು ಸಂಘಟನೆಗಳು ಕಳೆದ ಹಲವಾರು ವರ್ಷಗಳಿಂದ ಮನವಿ ನೀಡಿ ಪ್ರತಿಭಟನೆ ನಡೆಸಿದ್ದರೂ ಒತ್ತುವರಿ ತೆರವುಗೊಳಿಸರಲಿಲ್ಲ. ಈ ಮಧ್ಯೆ ಒತ್ತುವರಿ ತೆರವಿಗೆ ಆಗ್ರಹಿಸಿ ಲಿಂಗಾಯಿತ ವೀರಶೈವ ಸಮಾಜದ ಭಾಂದವರು ಸೋಮವಾರ ಪ್ರತಿಭಟನೆ ನಡೆಸಲು ಸಿದ್ಧತೆ ನಡೆಸಿದ್ದ ಹಿನ್ನೆಲೆಯಲ್ಲಿ ತಹಶೀಲ್ದಾರ್ ಮಹಾಬಲೇಶ್ವರ್ ನೇತೃತ್ವದಲ್ಲಿ ಮೋಜಿಣಿ ಇಲಾಖಾಧಿಕಾರಿಗಳು ಹಾಗೂ ಕಂದಾಯ ಸಿಬ್ಬಂದಿ ಸ್ಮಶಾನ ಜಾಗವನ್ನು ಪೊಲೀಸರ ಬಂದೋಬಸ್ತ್ ನಲ್ಲಿ ಅಳೆದು ಜಾಗ ಗುರುತಿಸಿ ಮುಂದಿನ ಕ್ರಮಕ್ಕೆ ಪುರಸಭೆ ಅಧಿಕಾರಿಗಳಿಗೆ ಹಸ್ತಾಂತರಿಸಲು ಕ್ರಮ ವಹಿಸಿದರು.

ತಹಶೀಲ್ದಾರ್ ಮಹಾಬಲೇಶ್ವರ್, ಪುರಸಭೆ ಮುಖ್ಯಾಧಿಕಾರಿ ಶಿವಪ್ರಸಾದ್, ಎಡಿಎಲ್ಅರ್ ಮಂಜುನಾಥ ಬಾಬು, ಎಎಸೈ ಪ್ರಶಾಂತ್, ವೀರಶೈವ ಲಿಂಗಾಯಿತ ಸಮಾಜದ ಪ್ರಮುಖರಾದ ಕಿರಣಕುಮಾರ್, ಮಹಾದೇವಪ್ಪ, ವಸಂತ, ಆರಾಧ್ಯ, ಸೂರಪ್ಪ ಶಿವಣ್ಣ ಇತರರು ಇದ್ದರು. ತಹಶೀಲ್ದಾರ್ ಮಹಾಬಲೇಶ್ವರ್ ಮಾತನಾಡಿ ಸದರಿ ಪ್ರದೇಶವೂ ನಗರ ವ್ಯಾಪ್ತಿಗೆ ಸೇರಿರುವುದರಿಂದ ಜಾಗ ಗುರುತಿಸಿ ಮುಂದೆ ಅಭಿವೃದ್ಧಿ ಇತರೆ ಕಾರ್ಯಗಳಿಗೆ ಪುರಸಭೆಗೆ ಹಸ್ತಾಂತರಿಸಲಾಗುತ್ತದೆ ಎಂದರು.

ಪುರಸಭೆ ಮುಖ್ಯಾಧಿಕಾರಿ ಶಿವಪ್ರಸಾದ್, ಸ್ಮಶಾನ ಅಭಿವೃದ್ಧಿಗೆ 2017ರಲ್ಲೆ ಎಂಟು ಲಕ್ಷ ರೂ. ಅನುದಾನ ಲಭ್ಯವಿದ್ದು, ಸ್ಮಶಾನ ಜಾಗ ಸಮರ್ಪಕವಾಗಿ ಗುರುತು ಮಾಡದ ಕಾರಣ ಅಭಿವೃದ್ಧಿ ಕಾರ್ಯ ಕೈಗೊಂಡಿರಲಿಲ್ಲ. ಇದೀಗ ಜಾಗ ಗುರುತಿಸಿ, ಪುರಸಭೆಗೆ ಹಸ್ತಾಂತರವಾದ ನಂತರ ಎಂಟು ಲಕ್ಷ ರೂ. ವೆಚ್ಚದಲ್ಲಿ ಆವರಣ ಗೋಡೆ ನಿರ್ಮಾಣಕ್ಕೆ ಕ್ರಮ ವಹಿಸಲಾಗುತ್ತದೆ ಎಂದರು.

Get real time updates directly on you device, subscribe now.

Comments are closed.

error: Content is protected !!