ತಿಪಟೂರು: ರಸ್ತೆಯಲ್ಲಿ ಚಲಿಸುವಾಗ ಅಥವಾ ವಾಹನದಲ್ಲಿ ಓಡಾಡುವಾಗ ಅಪಘಾತವಾದಾಗ ಸಾರ್ವಜನಿಕರು ಕನಿಕರದಿಂದ ಜೀವ ಉಳಿದರೆ ಸಾಕು ಎಂದು ಮಾನವೀಯತೆ ಮೆರೆದು ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡುವುದು ಸಹಜ. ಆದರೆ ಇಲ್ಲಿ ಅಪಘಾತವಾದ ವ್ಯಕ್ತಿಗೆ ಸಹಾಯ ಮಾಡುವ ನೆಪದಲ್ಲಿ ಬಂದು ಹಣ, ಒಡವೆ ದೋಚಿರುವ ಘಟನೆ ನಡೆದಿದೆ.
ತಮ್ಮ ಸಂಬಂಧಿಕರಿಗೆ ಅಪಘಾತವಾದಾಗ ತಿಪಟೂರಿನ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲು ಮಧು ಎಂಬುವರು ಹೋದಾಗ ಆಸ್ಪತ್ರೆಯ ಸಿಬ್ಬಂದಿಯಂತೆ ವರ್ತಿಸಿ ಸಹಾಯ ಮಾಡುವ ನೆಪದಲ್ಲಿ ಸ್ಟ್ರಕ್ಚರ್ ನಲ್ಲಿ ತೆಗೆದುಕೊಂಡು ಹೋಗಿ ಅಪಘಾತವಾದ ವ್ಯಕ್ತಿಯ ಬಳಿ ಇದ್ದ ಹಣ ಮತ್ತು ಒಡವೆ ದೋಚಿದ್ದಾರೆ. ಇಂತಹ ಪ್ರಕರಣದ ಬಗ್ಗೆ ಇನ್ನೊಬ್ಬರು ಹೇಳಿದಾಗ ನಿರಂತರ ಕಳ್ಳನ ನಡೆಯುತ್ತಿರುವುದು ಬೆಳಕಿಗೆ ಬಂದಿದೆ.
ಆಸ್ಪತ್ರೆ ಆಸುಪಾಸಿನಲ್ಲಿ ಖದೀಮರ ದಂಡು ಇರುತ್ತದೆ. ಪರಸ್ಪರದಿಂದ ಬಂದವರಿಗೆ ಏನು ತೋಚುವುದಿಲ್ಲ, ಯಾರೋ ಸಹಾಯಕರಿರಬೇಕೆಂದು ಅಥವಾ ಆಸ್ಪತ್ರೆಯವರು ಎಂದು ತಿಳಿಯುತ್ತಾರೆ. ಈ ಖದೀಮರ ದಂಡು ಆಸ್ಪತ್ರೆ ಸಿಬ್ಬಂದಿಗೂ ಅನುಮಾನ ಬರದಂತೆ ರೋಗಿಯ ಸಂಬಂಧಿಕರಂತೆ ವರ್ತಿಸಿ ತಮ್ಮ ಕೈ ಚಳಕ ತೋರಿಸುತ್ತಾರೆ ಎಂದು ಮಧು ತಿಳಿಸಿದ್ದಾರೆ.
ಇದು ಗಂಭೀರ ವಿಚಾರವಾಗಿದ್ದು ಇಂತಹ ಕೃತ್ಯ ಎಷ್ಟು ದಿನಗಳಿಂದ ನಡೆಯುತ್ತಿದೆ ಎಂಬುದು ಯಾರಿಗೂ ತಿಳಿಯದಾಗಿದೆ. ಈ ವಿಚಾರವಾಗಿ ಸಾರ್ವಜನಿಕ ಆಸ್ಪತ್ರೆ ಸಿಬ್ಬಂದಿ ಹಾಗೂ ಪೊಲೀಸರು ಎಚ್ಚೆತ್ತುಕೊಂಡು ಖದೀಮರಿಗೆ ಕೋಳ ತಡಿಸಬೇಕಿದೆ ಎಂದು ಆಗ್ರಹಿಸಿದ್ದಾರೆ.
ಕಳ್ಳರ ಗ್ಯಾಂಗ್ ಪತ್ತೆ ಹಚ್ಚಿ
ಸಾರ್ವಜನಿಕ ಆಸ್ಪತ್ರೆಯಲ್ಲಿ ಇಂತಹ ಘಟನೆಗಳು ಬಹಳ ವಷರ್ಗಳಿಂದ ನಡೆಯುತ್ತಿದ್ದು, ಸಂಬಂಧಪಟ್ಟವರ ಗಮನಕ್ಕೆ ತಂದರು ಪ್ರಯೋಜನವಾಗಿಲ್ಲ. ಒಬ್ಬ ಬಡ ಮಹಿಳೆಯ ಅಪಘಾತ ಸಂದರ್ಭದಲ್ಲಿ ಮಾಂಗಲ್ಯ ಸರ ಕಟ್ ಮಾಡಿಕೊಂಡಿದ್ದಾರೆ. ಆಸ್ಪತ್ರೆಯ ಸಿಸಿ ಟಿವಿಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿವೆಯೋ ಎಂಬುದನ್ನು ಮೊದಲು ನೋಡಬೇಕಿದೆ. ಆಸ್ಪತ್ರೆ ಆಸುಪಾಸಿನಲ್ಲಿ ಕಳ್ಳರ ಗ್ಯಾಂಗ್ ಹೊಂಚು ಹಾಕಿ ಇಂತಹ ಕೃತ್ಯ ಮಾಡುತ್ತಿದೆ, ಪೊಲೀಸರ ಗಮನಕ್ಕೆ ತಂದರೆ ಕಂಪ್ಲೇಂಟ್ ಕೊಡಿ ಎನ್ನುತ್ತಾರೆ. ಅಂತಹ ಸಮಯದಲ್ಲಿ ಜೀವ ಉಳಿಸಿಕೊಳ್ಳುವುದು ಮುಖ್ಯವಾಗಿರುತ್ತದೆ. ಕೂಡಲೇ ಸಾರ್ವಜನಿಕ ಆಸ್ಪತ್ರೆಗೆ ಬರುವ ಈ ಖದೀಮರ ಗ್ಯಾಂಗನ್ನು ಪತ್ತೆ ಹಚ್ಚಿ ಶಿಕ್ಷೆ ಕೊಡಬೇಕೆಂಬುದು ಸಮಾಜ ಸೇವಕ ಮಂಜು ಒತ್ತಾಯಿಸಿದ್ದಾರೆ.
Comments are closed.