ಪಾವಗಡ: ಕೆಪಿಟಿಸಿಎಲ್ ಸಹಾಯಕ ಇಂಜಿನಿಯರ್ ಪಟ್ಟಣದ ಖಾಸಗಿ ವಸತಿ ಗೃಹದಲ್ಲಿ ನೇಣಿಗೆ ಶರಣಾಗಿ ಮೃತ ಪಟ್ಟಿರುವ ಘಟನೆ ಗುರುವಾರ ಪಾವಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೃತರನ್ನು ತಾಲೂಕಿನ ವೈ.ಎನ್.ಹೊಸಕೋಟೆ ಗ್ರಾಮದ ಎಸ್.ಮಂಜುನಾಥ್ (23) ಎಂದು ಗುರ್ತಿಸಲಾಗಿದೆ. ಮೃತರು ಬೆಂಗಳೂರಿನ ಈಸ್ಟ್ ಡಿವಿಜನ್ ಬೆಳ್ಳಂದೂರು ಕೆಪಿಟಿಸಿಎಲ್ ಕಚೇರಿಯಲ್ಲಿ ಸಹಾಯಕ ಕಿರಿಯ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಬುಧವಾರ ರಾತ್ರಿ ಪಟ್ಟಣದ ಖಾಸಗಿ ವಸತಿ ಗೃಹದಲ್ಲಿ ತಂಗಿದ್ದ ಮಂಜುನಾಥ್ ಕೊಠಡಿಯಲ್ಲಿದ್ದ ಪ್ಯಾನಿಗೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾನೆ. ಗುರುವಾರ ಬೆಳಗ್ಗೆ 8.30ರ ವೇಳೆ ವಸತಿ ಗೃಹದ ಸಿಬ್ಬಂದಿ ಕಿಟಕಿಯಲ್ಲಿ ನೋಡಿದಾಗ ನೇಣಿಗೆ ಶರಣಾಗಿರುವ ದೃಶ್ಯ ಕಂಡು ಬಂದಿದೆ.
ಯುವಕ ತನ್ನ ಮದುವೆ ವಿಚಾರಕ್ಕಾಗಿ ಜಿಗುಪ್ಸೆಗೊಂಡಿದ್ದ ಕಾರಣಕ್ಕೆ ನೇಣಿಗೆ ಶರಣಾಗಿರಬಹುದು ಎಂದು ಕುಟುಂಬದ ಮೂಲಗಳಿಂದ ತಿಳಿದು ಬಂದಿದೆ. ಘಟನೆ ತಿಳಿದು ಪಾವಗಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ದೂರು ದಾಖಲಿಸಿಕೊಂಡು ಕ್ರಮ ಜರುಗಿಸಿದ್ದಾರೆ.
Comments are closed.