ಅಪಘಾತದಲ್ಲಿ ಚಾಲಕ ಸಾವು

5,325

Get real time updates directly on you device, subscribe now.


ಶಿರಾ: ಟಾಟಾ ಏಸಿ, ಲಗೇಜ್ ಆಟೋಗಳು ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಮೃತಪಟ್ಟು ಇಬ್ಬರಿಗೆ ತೀವ್ರ ಗಾಯಗಳಾಗಿರುವ ಘಟನೆ ತಾಲೂಕಿನ ಗುಳಿಗೇನಹಳ್ಳಿ ಗ್ರಾಮದ ಶಿರಾ-ಮಧುಗಿರಿ ರಸ್ತೆಯಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ.

ಮೃತಪಟ್ಟ ವ್ಯಕ್ತಿ ರತ್ನಸಂದ್ರ ಗ್ರಾಮದ ನರಸಿಂಹಮೂರ್ತಿ(45) ಎಂದು ತಿಳಿದುಬಂದಿದ್ದು, ಗಾಯಗೊಂಡವರನ್ನು ತುಮಕೂರು ಜಿಲ್ಲಾಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ರವಾನಿಸಲಾಗಿದೆ. ಈ ಸಂಬಂಧ ಶಿರಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗಿದೆ.

Get real time updates directly on you device, subscribe now.

Comments are closed.

error: Content is protected !!