ವಿದ್ಯಾರ್ಥಿಗಳು ತಾಂತ್ರಿಕ ಕೌಶಲ್ಯ ಹೆಚ್ಚಿಸಿಕೊಳ್ಳಲಿ

255

Get real time updates directly on you device, subscribe now.


ತುಮಕೂರು: ಎಲೆಕ್ಟ್ರಿಕಲ್ ಸೈನ್ಸ್ ಸಂಘ (ಇಸಿಇ, ಇಟಿಇ, ಇಇಇ, ಇಐಇ) ಸಿದ್ದಗಂಗಾ ತಾಂತ್ರಿಕ ಮಹಾವಿದ್ಯಾಲಯ, ತುಮಕೂರು ಇವರ ವತಿಯಿಂದ ಜು.7 ರಂದು ಅಂತರರಾಷ್ಟ್ರೀಯ ಸಮ್ಮೇಳನ (ಐಸಿಎಸ್ಎಸ್ಇಎಸ್) ಮತ್ತು ಟೆಕ್ನಿಷಿಯಂ -2023ಉದ್ಘಾಟನೆಯನ್ನು ಸಿದ್ದಗಂಗಾ ತಾಂತ್ರಿಕ ಮಹಾವಿದ್ಯಾಲಯದ ಬಿರ್ಲಾ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.

ಡಾ.ಎಸ್.ಆರ್.ಮಹಾದೇವ ಪ್ರಸನ್ನ ಅವರು ಸಮಾರಂದ ಉದ್ಘಾಟನಾ ‘ಭಾಷಣ ಮಾಡಿ, ವಿದ್ಯಾರ್ಥಿಗಳು ತಮ್ಮ ತಾಂತ್ರಿಕ ತಿಳುವಳಿಕೆಯೊಂದಿಗೆ, ಕೌಶಲ್ಯ ಮೈಗೂಡಿಸಿಕೊಳ್ಳಬೇಕಾದ ಅವಶ್ಯಕತೆ ಇದೆ ಎಂದು ತಿಳಿಸಿದರು.
ಡಾ.ರಾಜೇಂದ್ರ ಪ್ರಸಾದ್ ಅವರು ಹವ್ಯಾಸಿ ಪ್ರಾಜೆಕ್ಟ್ಸ್ಗಳ ಪ್ರದರ್ಶನ ಉದ್ಘಾಟಿಸಿ, ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆ ಹೊರಬಂದರೆ ಸಾಧನೆ ಸಾಧ್ಯ ಎಂದರು.

ಸಂಸ್ಥೆ ನಿರ್ದೇಶಕರಾದ ಡಾ.ಎಂ.ಎನ್.ಚನ್ನಬಸಪ್ಪ ಸಮಾರಂದ ಅಧ್ಯಕ್ಷತೆ ವಹಿಸಿದ್ದರು. ಎಸ್ಐಟಿಯ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ.ಶಿವಕುಮಾರಯ್ಯ ಮತ್ತು ಎಸ್ಐಟಿಯ ಪ್ರಾಂಶುಪಾಲ ಡಾ.ಎಸ್.ವಿ.ದಿನೇಶ್ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಎಲೆಕ್ಟ್ರಿಕಲ್ ಸೈನ್ಸ್ ಸಂಘದ ಸಂಘಟನಾ ಅಧ್ಯಕ್ಷ ಡಾ.ಕೆ.ವಿ.ಸುರೇಶ್, ತಾಂತ್ರಿಕ ಸಮಿತಿಯ ಅಧ್ಯಕ್ಷೆ ಡಾ.ವೀಣಾ ಕರ್ಜಿಗಿ ಹಾಗೂ ಟೆಕ್ನಿಷಿಯಂ-2023 ರ ಸಂಯೋಜಕ ಪ್ರೊ.ಟಿ.ಸಿ.ಮಹಾಲಿಂಗೇಶ್ ಮತ್ತು ವಿವಿ ವಿಭಾಗದ ಮುಖ್ಯಸ್ಥರು, ಉಪನ್ಯಾಸಕರು, ವಿದ್ಯಾರ್ಥಿಗಳ ಪ್ರತಿನಿಧಿ ಬಸವರಾಧ್ಯ ಎಂ.ಸಿ.ಉದ್ಘಾಟನಾ ಸಮಾರಂದಲ್ಲಿ ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!