ಗುಬ್ಬಿ: ಸಣ್ಣಪುಟ್ಟ ಐಡಿಯಾಗಳಿಂದ ಆರಂಭವಾಗುವ ಕೆಲಸಗಳು ಮುಂದೆ ನಡೆಯುವ ಅನ್ವೇಷಣೆಯ ಮೂಲಕ ದೊಡ್ಡ ಮಟ್ಟದಲ್ಲಿ ಬೆಳವಣಿಗೆ ಕಾಣುತ್ತವೆ ಎಂದು ಬೆಂಗಳೂರಿನ ಐಇಟಿಇಯ ಡಾ.ರವಿಶಂಕರ್ ತಿಳಿಸಿದರು.
ತಾಲೂಕಿನ ಹೇರೂರು ಚನ್ನಬಸವೇಶ್ವರ ಇನ್ಸ್ ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಹಮ್ಮಿಕೊಂಡಿರುವ ರಾಜ್ಯಮಟ್ಟದ ಹ್ಯಾಕೋಥಾನ್ ಸ್ಪರ್ಧೆ ಉದ್ಘಾಟಿಸಿ ಮಾತನಾಡಿ, ರಾಜ್ಯದ ಹಲವು ಕಾಲೇಜುಗಳಿಂದ ತಾವೆಲ್ಲರೂ ಇಲ್ಲಿಗೆ ಬಂದಿದ್ದೀರಾ, ನಮ್ಮದು ದೊಡ್ಡ ಮಟ್ಟದ ಕಾಲೇಜು, ಚಿಕ್ಕ ಕಾಲೇಜು ಎಂಬ ಭೇದ ಭಾವವಿಲ್ಲದೆ ತಮ್ಮಲ್ಲಿರುವ ಹೊಸ ಹೊಸ ಅನ್ವೇಷಣೆಗಳು ತಮ್ಮ ಬುದ್ಧಿಶಕ್ತಿಯಿಂದ ಹೊಸ ಹೊಸ ಪ್ರಾಜೆಕ್ಟ್ ನೀಡಿದಾಗ ಖಂಡಿತವಾಗಿಯೂ ಯಶಸ್ವಿ ವಿದ್ಯಾರ್ಥಿಗಳು ಆಗುತ್ತೀರಾ, ಮುಂದಿನ ದಿನದಲ್ಲಿ ಹೊಸ ಭವಿಷ್ಯ ಬರೆದುಕೊಳ್ಳುತ್ತೀರಾ. ಪ್ರತಿ ವರ್ಷ ರಾಜ್ಯದಲ್ಲಿ ಸಾವಿರಾರು ವಿದ್ಯಾರ್ಥಿಗಳು ಇಂಜಿನಿಯರಿಂಗ್ ಪದವಿ ಓದಿ ಹೊರ ಬರುತ್ತಾರೆ. ಆದರೆ ಎಲ್ಲರೂ ಯಶಸ್ವಿಯಾಗುತ್ತಾರೆ ಎಂಬುದು ಸುಳ್ಳು ಯಶಸ್ವಿಯಾಗುವವರು ಎಂಎನ್ಸಿ ಅಂತ ದೊಡ್ಡ ಕಂಪನಿಗಳನ್ನು ಕಟ್ಟಿ ಸಾವಿರಾರು ಜನರಿಗೆ ಉದ್ಯೋಗ ನೀಡಿದರೆ, ಇನ್ನು ಕೆಲವರು ಸ್ವಂತ ಉದ್ಯೋಗ ಅರಸುತ್ತಾರೆ. ಮಿಕ್ಕವರು ಯಾವುದೋ ಕಂಪನಿಯಲ್ಲಿ ಕೆಲಸ ಮಾಡುತ್ತಾರೆ. ಅದೇನೇ ಇದ್ದರೂ ಸಹ ತಾವು ಓದಿರುವಂತಹ ವಿದ್ಯೆ ದೇಶಕ್ಕೆ, ರಾಜ್ಯಕ್ಕೆ, ಸರ್ಕಾರಕ್ಕೆ ಹಾಗೂ ಜನರಿಗೆ ಅನುಕೂಲವಾಗುವಂತಹ ಕೆಲಸಗಳನ್ನು ತಾವೆಲ್ಲರೂ ಮಾಡಬೇಕು ಎಂದು ತಿಳಿಸಿದರು.
ಸಿಐಟಿ ಕಾಲೇಜಿನ ನಿರ್ದೇಶಕ ಡಾ.ಸುರೇಶ್.ಡಿ.ಎಸ್. ಮಾತನಾಡಿ ದಿನದಿಂದ ದಿನಕ್ಕೆ ತಂತ್ರಜ್ಞಾನ ಬದಲಾವಣೆ ಆಗುತ್ತಿದೆ. ಹಾಗೆ ನೀವು ಸಹ ಅದಕ್ಕೆ ತಕ್ಕಂತೆ ತಮ್ಮ ಬುದ್ಧಿವಂತಿಕೆ ಗಳಿಸಿದರೆ ಯಶಸ್ವಿಯಾಗುತ್ತೀರಾ, ಸಿಐಟಿ ಕಾಲೇಜು 21 ವರ್ಷದ ಅವಧಿಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಹೊರ ಹೋಗಿ ತಮ್ಮದೇ ಆದಂತಹ ಕಂಪನಿಗಳನ್ನು ಕಟ್ಟಿದ್ದಾರೆ. ನೂರಾರು ಜನರಿಗೆ ಉದ್ಯೋಗ ಸಹ ನೀಡಿದ್ದಾರೆ, ಇನ್ನೂ ನಮ್ಮ ಕಾಲೇಜಿನಲ್ಲಿ ತಮಗೆಲ್ಲರಿಗೂ ಸಹ 24 ಗಂಟೆಗಳ ಕಾಲ ಈ ಕಾರ್ಯಕ್ರಮ ಆಯೋಜನೆ ಮಾಡಿದ್ದು, ನಿಮಗೆ ಇರುವ ಎಲ್ಲಾ ಐಡಿಯಾಗಳು ನೀಡಿ ಇದರಿಂದ ಹೊಸತನ ಸೃಷ್ಟಿಯಾಗುತ್ತದೆ. ನಮ್ಮ ಕಾಲೇಜಿನಲ್ಲಿ ನಾಲ್ಕು ವರ್ಷದಿಂದ ಹ್ಯಾಕಥಾನ್ ಮಾಡುತ್ತಿದ್ದೂ ಇದರಿಂದ ವಿದ್ಯಾರ್ಥಿಗಳಲ್ಲಿ ಅಡಗಿರುವ ಕೌಶಲ್ಯತೆ ಏನು ಎಂಬುದು ತಿಳಿಯುತ್ತಿದೆ ಎಂದು ತಿಳಿಸಿದರು.
ರಾಜ್ಯಮಟ್ಟದ ಸ್ಪರ್ಧೆಯಲ್ಲಿ 350 ಹೆಚ್ಚು ವಿದ್ಯಾರ್ಥಿಗಳು ಬೆಂಗಳೂರು, ಮೈಸೂರು, ಶಿವಮೊಗ್ಗ, ಬಳ್ಳಾರಿ, ಬೆಳಗಾವಿ, ತುಮಕೂರು ಸೇರಿದಂತೆ ವಿವಿಧ ಭಾಗಗಳಿಂದ ಆಗಮಿಸಿದ್ದು 24 ಗಂಟೆಗಳ ಕಾಲ ಸಂಪೂರ್ಣವಾಗಿ ಆ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದಾರೆ.
ಕಾರ್ಯಕ್ರಮದಲ್ಲಿ ಉಪ ಪ್ರಾಂಶುಪಾಲೆ ಡಾ.ಶಾಂತಲಾ, ಅನಿಲ್ ಕುಮಾರ್, ಚೇತನ್ ಬಾಲಾಜಿ, ಪ್ರೊ.ಅನಿಲ್ ಸೇರಿದಂತೆ ಕಾಲೇಜಿನ ಎಲ್ಲಾ ಉಪನ್ಯಾಸಕರು, ವಿದ್ಯಾರ್ಥಿಗಳು ಹಾಜರಿದ್ದರು.
Comments are closed.