ಫೋನ್ ವಾಪಸ್ ಗೆ ಮುಂದಾದ ಅಂಗನವಾಡಿ ಕಾರ್ಯಕರ್ತೆಯರು

1,181

Get real time updates directly on you device, subscribe now.


ಕುಣಿಗಲ್: ಪೋಷಣ್ ಅಭಿಯಾನದ ಕಾರ್ಯಕ್ಕೆ ನೀಡಿದ್ದ ಮೊಬೈಲ್ ಫೋನ್ ಅಸಮರ್ಪಕ ಕಾರ್ಯ ನಿರ್ವಹಣೆ ಸೇರಿದಂತೆ ಇತರೆ ಕಾರ್ಯಕ್ಕೆ ಅಂಗನವಾಡಿ ಕಾರ್ಯಕರ್ತೆಯರಿಗೆ ಒತ್ತಡ, ನೋಟಿಸ್ ಕಿರುಕುಳ ಖಂಡಿಸಿ ಸೋಮವಾರ ಅಂಗನವಾಡಿ ಕಾರ್ಯಕರ್ತೆಯರು ಮೊಬೈಲ್ ಫೋನ್ ವಾಪಸ್ ಮಾಡುವ ಕೆಲಸಕ್ಕೆ ಮುಂದಾದರು.

ಪಟ್ಟಣದ ಸಿಡಿಪಿಒ ಕಚೇರಿಯ ಬಳಿ ಸಂಘಟಿತರಾದ ಅಂಗನವಾಡಿ ಕಾರ್ಯಕರ್ತೆರು ತಮ್ಮ ಸಮಸ್ಯೆಗಳನ್ನು ಸಿಡಿಪಿಒ ಬಳಿ ತೋಡಿಕೊಂಡರು. ಸಂಘದ ಅಧ್ಯಕ್ಷೆ ಶಾಂತಕುಮಾರಿ ಮಾತನಾಡಿ, ಮೊಬೈಲ್ ಫೋನ್ ಪೋಷಣ್ ಅಭಿಯಾನ ಕೆಲಸಕ್ಕೆ ನೀಡಲಾಗಿದೆ. ಇದು ಸರಿಯಾಗಿ ಕೆಲಸ ಮಾಡುವುದಿಲ್ಲ, ನೆಟ್ ವರ್ಕ್ ಸಿಗುವುದಿಲ್ಲ, ಇದರ ಜೊತೆಯಲ್ಲಿ ಬೇರೆ ಬೇರೆ ಇಲಾಖೆಯ ಕೆಲಸ ನಿಯೋಜಿಸುತ್ತಿದ್ದು, ಫೋನ್ ಸರಿ ಇಲ್ಲದೆ ಕಾರಣ ಸಮಸ್ಯೆ ಕೇಳದ ಮೇಲಾಧಿಕಾರಿಗಳು ಕಾರ್ಯಕರ್ತೆಯರಿಗೆ ನೋಟಿಸ್ ನೀಡುವುದು. ಸಂಬಳ ತಡೆ ಹಿಡಿಯುವುದು ಇತರೆ ಸಮಸ್ಯೆ ಉಂಟು ಮಾಡುತ್ತಿದ್ದಾರೆ. ಸರ್ಕಾರ ನೀಡಿರುವ ಫೋನ್ ಗೆ ಕರೆನ್ಸಿ ಹಾಕಿಸದ ಕಾರಣ ಕಾರ್ಯಕರ್ತಯರು ತಾವೆ ಬಳಸುವ ಫೋನ್ ಗೆ ಕರೆನ್ಸಿ ಹಾಕಿಸಿಕೊಂಡು ಕೆಲಸ ಮಾಡುತ್ತಿದ್ದು ಇದೀಗ ಇತರೆ ಇಲಾಖೆಯ ಕೆಲಸ ಮಾಡಲು ಹೇಳುತ್ತಿರುವುದು ಸರಿಯಲ್ಲ. ಹೀಗಾಗಿ ಸರ್ಕಾರ ನೀಡಿರುವ ಫೋನ್ ಹಿಂತಿರುಗಿಸಲು ಮುಂದಾಗುತ್ತಿರುವುದಾಗಿ ಹೇಳಿದರು.

ಕಾರ್ಯಕರ್ತೆಯರೊಂದಿಗೆ ಚರ್ಚೆ ನಡೆಸಿದ ಅಧಿಕಾರಿಗಳು ಸರ್ಕಾರದಿಂದ ಇನ್ನು ಯಾವುದೇ ಸ್ಪಷ್ಟ ಆದೇಶ ಬಂದಿಲ್ಲ. ಮುಂದಿನ ಆದೇಶ ಇನ್ನು ಎರಡು ತಿಂಗಳಲ್ಲಿ ಬರಲಿದ್ದು ಅಲ್ಲಿವರೆಗೂ ಪೋಷಣ್ ಅಭಿಯಾನ ಕಾರ್ಯ ನೆರವೇರಿಸುವಂತೆ ಮನವಿ ಮಾಡಿದ್ದಾರೆ. ಸಂಘದ ಪ್ರಮುಖರಾದ ಗುಲ್ಜಾರ್, ಶಿವಮ್ಮ, ಸಬೀನಾ, ಗೌರಮ್ಮ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!