ಎರಡು ಹತ್ಯೆ ಕೃತ್ಯ ಖಂಡಿಸಿ ಪ್ರತಿಭಟನೆ

123

Get real time updates directly on you device, subscribe now.


ಕುಣಿಗಲ್: ಜೈನಮುನಿ ಹಾಗೂ ಯುವಬ್ರಿಗೇಡ್ ಕಾರ್ಯಕರ್ತನ ಹತ್ಯೆ ಖಂಡಿಸಿ ತಾಲೂಕು ಭಜರಂಗದಳದ ವತಿಯಿಂದ ಪಟ್ಟಣದ ಹುಚ್ಚಮಾಸ್ತಿಗೌಡ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಭಜರಂಗದಳದ ತಾಲೂಕು ಸಂಚಾಲಕ ಗಿರೀಶ್ ನೇತೃತ್ವದಲ್ಲಿ ಸಂಘಟಿತರಾದ ಕಾರ್ಯಕರ್ತರು ಘಟನೆ ಎರಡೂ ಕೃತ್ಯವನ್ನು ತೀವ್ರವಾಗಿ ಖಂಡಿಸಿದರು.

ನಗರ ಸಹಸಂಚಾಲಕ ಪ್ರಶಾಂತ್ ಮಾತನಾಡಿ, ಜೈನ ಸಂಪ್ರದಾಯದಲ್ಲಿ ಮುನಿ ಪರಂಪರೆ ಕಠಿಣ ವ್ರತಾಚರಣೆಯಿಂದ ಆಗಿರುತ್ತದೆ. ಮುನಿಗಳು ಯಾವುದೇ ಲೌಕಿಕ ಜಗತ್ತಿನ ಆಸೆಗಳನ್ನು ಮೀರಿರುತ್ತಾರೆ. ಅಂತಹವರ ಕೊಲೆಯಾದಾಗ ಘಟನೆಯಲ್ಲಿ ಕೂಲಂಕಷವಾಗಿ ತನಿಖೆ ನಡೆಸದೆ ಕೆಲವರು ಮುನಿಗಳು ಹಣಕಾಸು ದಂಧೆ ಮಾಡುತ್ತಿದ್ದರು ಎಂದು ವದಂತಿ ಹಬ್ಬಿಸಿದ್ದು ಖಂಡನೀಯ. ವದಂತಿ ಹಬ್ಬಿಸಿರುವ ಹಿಂದೆ ಇರುವ ಷಡ್ಯಂತ್ರ ಹಲವು ಅನುಮಾನಕ್ಕೆ ಕಾರಣವಾಗುತ್ತಿದೆ.

ಮೈಸೂರು ಜಿಲ್ಲೆಯ ಯುವ ಕಾರ್ಯಕರ್ತ ವೇಣುಗೋಪಾಲ್ ಏನೆ ತಪ್ಪು ಮಾಡಿದ್ದರೂ ರಾಜಿ ಸಂಧಾನ ಮಾಡುವ ನೆಪದಲ್ಲಿ ಅಮಾನವೀಯವಾಗಿ ಕೊಲೆ ಮಾಡಲಾಗಿದೆ. ಜೈನ ಮುನಿಯ ಪ್ರಕರಣದಲ್ಲು ಅಮಾನವೀಯ ಕೊಲೆ ಮಾಡಲಾಗಿದ್ದು, ಈ ಬಗ್ಗೆ ಸರ್ಕಾರ ಪಾರದರ್ಶಕವಾಗಿ ನಡೆದುಕೊಳ್ಳಬೇಕಿದೆ. ಹಿಂದೂ ಸಂಘಟನೆಗಳು, ಕಾರ್ಯಕರ್ತರಿಗೆ ರಕ್ಷಣೆ ನೀಡಬೇಕಿದೆ. ಮುಂದಿನ ದಿನಗಳಲ್ಲಿ ಘಟನೆಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದರು. ಕಾರ್ಯಕ್ರಮದಲ್ಲಿ ತಾಲೂಕು ಭಜರಂಗದಳದ ಗಿರಿ, ಕಾರ್ತೀಕ್, ದೇವರಾಜ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!