ಗುಬ್ಬಿ: ಅಧಿಕ ಸಂಖ್ಯೆಯಲ್ಲಿ ಮಕ್ಕಳನ್ನು ಕನ್ನಡ ಶಾಲೆಗೆ ಸೇರಿಸುವ ಜವಾಬ್ದಾರಿಯನ್ನು ಹಳೆಯ ವಿದ್ಯಾರ್ಥಿಗಳು ಜವಾಬ್ದಾರಿ ವಹಿಸಬೇಕಾಗಿದೆ. ಕನಿಷ್ಠ 5ನೇ ತರಗತಿ ತನಕ ಕನ್ನಡ ಶಾಲೆಗಳಲ್ಲಿ ಓದುವ ಬಗ್ಗೆ ಪೋಷಕರು ತಮ್ಮ ಮಕ್ಕಳಲ್ಲಿ ಅರಿವು ಮೂಡಿಸಬೇಕು. ಸರ್ಕಾರಿ ಕನ್ನಡ ಶಾಲೆಗಳ ಹಿಂದಿನ ವೈಭವ ಮರುಕಳಿಸುವಂತೆ ಪ್ರತಿಯೊಬ್ಬರೂ ಕೈಜೋಡಿಸಬೇಕಾಗಿದೆ.
ವರ್ಷ ಕಳೆದಂತೆ ಸರ್ಕಾರಿ ಕನ್ನಡ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸುತ್ತಿದ್ದು ಮುಚ್ಚುವ ಆತಂಕದಲ್ಲಿದೆ. ಪೋಷಕರು ಖಾಸಗಿ ಶಾಲೆಗಳ ಆಂಗ್ಲ ಮಾಧ್ಯಮದ ಮೊರೆ ಹೋಗುತ್ತಿದ್ದು ಇದೀಗ ಇಲ್ಲಿನ ಸರ್ಕಾರಿ ಶಾಲೆಯ ಮಕ್ಕಳ ಸಂಖ್ಯೆ ಗಣನೀಯವಾಗಿ ಕ್ಷೀಣಿಸಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ತಾಲ್ಲೂಕಿನ ಬೋಚಿಹಳ್ಳಿ ಕನ್ನಡ ಮಾಧ್ಯಮ ಶಾಲೆಯಲ್ಲಿ 2018ನೇ ಸಾಲಿನಲ್ಲಿ 80-90 ಮಕ್ಕಳಿದ್ದರು. ಪ್ರಸಕ್ತ 2023-24 ನೇ ಸಾಲಿನ ಮಕ್ಕಳ ದಾಖಲಾತಿ 45 ಮಕ್ಕಳಷ್ಟೇ ಶಾಲೆಗೆ ದಾಖಲಾಗಿದ್ದಾರೆ. ಮಕ್ಕಳ ದಾಖಲಾತಿ ಸಂಖ್ಯೆ ಕ್ಷೀಣಿಸಿರುವುದಕ್ಕೆ ಶಾಲೆ ಮುಚ್ಚುವ ಆತಂಕ ಎದುರಾಗಿದೆ.
ಪ್ಲೀಸ್ ಸಾರ್.. ಈ ಶಾಲೆ ಮುಚ್ಚಬೇಡಿ.. ದಯಮಾಡಿ ನಮ್ಮೂರಿನ ಶಾಲೆಗೆ ಆಂಗ್ಲ ಮಾಧ್ಯಮಕ್ಕೆ ಆವಕಾಶ ಕಲ್ಪಿಸಿಕೊಡಿ, ಮತ್ತೆ ಮಕ್ಕಳು ಬರ್ತಾವೆ.. ಎಂಬ ಮಾತು ಸ್ಥಳೀಯರಿಂದಲೇ ಕೇಳಿ ಬರುತ್ತಿದೆ.
ಶಾಲೆಗೆ ಆಂಗ್ಲ ಮಾಧ್ಯಮಕ್ಕೆ ಅವಕಾಶ ಕಲ್ಪಿಸಿದರೂ ಪರವಾಗಿಲ್ಲ ಯಾವುದೇ ಕಾರಣಕ್ಕೂ ಈ ಶಾಲೆ ಮುಚ್ಚಲು ಬಿಡುವುದಿಲ್ಲ. ಮುಂದಿನ 2024-25 ನೇ ಸಾಲಿಗೆ ಈ ಶಾಲೆಗೆ ಆಂಗ್ಲ ಮಾಧ್ಯಮದ ಪ್ರವೇಶಾತಿಗೆ ಅನುಮತಿ ಕೊಡಿ ಸರ್ ಎಂದು ಶಾಲಾ ಮುಖ್ಯ ಶಿಕ್ಷಕರಲ್ಲಿ ವಿನಂತಿಸಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಸಂಪರ್ಕಿಸಿ ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಸಾರ್ವಜನಿಕರಿಗೆ ಹಾಗೂ ಶಾಲೆ ಉಳಿಸುವ ಅಭಿಯಾನದಲ್ಲಿ ಪಾಲ್ಗೊಂಡ ಯುವಕರಿಗೆ ಸಲಹೆ ನೀಡಿದ್ದಾರೆ.
ಸರ್ಕಾರಿ ಶಾಲೆ ಉಳಿಸುವ ಅಭಿಯಾನಕ್ಕೆ ಅಧಿಕಾರಿಗಳು ಸ್ಪಂದಿಸುತ್ತಾರಾ? ಶಾಲೆ ಎಂದಿನಂತೆ ನಡೆಯಲು ಮೇಲಾಧಿಕಾರಿಗಳು ಸಹಕರಿಸುತ್ತಾರೆ. ಇದು ಮೇಲ್ದರ್ಜೆಗೆ ಏರಿಸಿದರೆ ಮಕ್ಕಳ ಸಂಖ್ಯೆ ಹೆಚ್ಚಳವಾಗುತ್ತಾ ಎಂಬುದು ಮುಂದಿರುವ ಪ್ರಶ್ನೆ.
ಒಟ್ಟಾರೆ ಸರ್ಕಾರಿ ಶಾಲೆ ಉಳಿಸುವ ಈ ಅಭಿಯಾನಕ್ಕೆ ಸಾರ್ವಜನಿಕರಿಂದ ಹಾಗೂ ಶಾಲೆಯಲ್ಲಿಯೇ ಓದಿದ ವಿದ್ಯಾರ್ಥಿಗಳ ಹೋರಾಟಕ್ಕೆ ಯಾವ ಫಲ ಸಿಗುತ್ತೆ ಕಾದು ನೋಡಬೇಕು.
Comments are closed.