ಉತ್ತಮ ಆರೋಗ್ಯಕ್ಕೆ ಪೌಷ್ಠಿಕ ಆಹಾರ ಅಗತ್ಯ

ಪೋಷಣ್ ಅಭಿಯಾನ  ಕಾರ್ಯಕ್ರಮ

104

Get real time updates directly on you device, subscribe now.

ಗುಬ್ಬಿ: ಮಾನವನ ಬೆಳವಣಿಗೆ ಹಾಗೂ ಶಕ್ತಿಗೆ ಪೋಷಕಾಂಶ ಭರಿತವಾದ ಆಹಾರ ಬಹಳ ಮುಖ್ಯವಾಗಿದೆ ಎಂದು ಎಸಿಡಿಪಿಒ ಕೃಷ್ಣಮೂರ್ತಿ ತಿಳಿಸಿದರು.

ತಾಲ್ಲೂಕಿನ ಕಲ್ಲೂರು ಗ್ರಾಮದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಆಯೋಜಿಸಿದ್ದ ಪೋಷಣ್ ಅಭಿಯಾನ  ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಪೌಷ್ಟಿಕ ಆಹಾರ ಪ್ರತಿಯೊಬ್ಬರಿಗೂ ಬಹಳ ಮುಖ್ಯವಾಗಿದ್ದು ಪ್ರತಿದಿನ ಅಂತಹ ಆಹಾರ ಸೇವಿಸಬೇಕು, ಪೋಷಣ್ ಅಭಿಯಾನದ ಅಡಿಯಲ್ಲಿ ಸರಕಾರ ಬಾಣಂತಿಯರಿಗೆ ಗರ್ಭಿಣಿಯರಿಗೆ ಹಾಗೂ ಸಾರ್ವಜನಿಕರಿಗೆ ಪೌಷ್ಟಿಕ ಆಹಾರದ ಬಗ್ಗೆ ಮಾಹಿತಿ ನೀಡುವ ಕೆಲಸ ಮಾಡುತ್ತಿದೆ ಎಂದರು.

ಸ್ಥಳೀಯವಾಗಿ ಸಿಗುವಂತಹ ಎಲ್ಲಾ ರೀತಿಯ ಸೊಪ್ಪು ತರಕಾರಿ ಹಣ್ಣುಗಳನ್ನುಸೇವನೆ ಮಾಡುವುದರಿಂದಲೂ ಪೌಷ್ಟಿಕಾಂಶ  ಪಡೆಯಬಹುದಾಗಿದೆ, ಆಗ ಮಾತ್ರ ಮಕ್ಕಳು ಪೌಷ್ಠಿಕಾಂಶದಿಂದ ಬೆಳೆಯಲು ಸಾಧ್ಯವಾಗುತ್ತದೆ, ನಮ್ಮ ಇಲಾಖೆಯಿಂದ ಎಲ್ಲಾ ಅಂಗನವಾಡಿ ಕಾರ್ಯಕರ್ತರ ಮೂಲಕ ಪೋಷಣ್ ಅಭಿಯಾನದ ಹಲವು ಕಾರ್ಯಕ್ರಮ ಮಾಡುತ್ತಿದ್ದು ಅದರಲ್ಲಿ ಬಹಳ ಮುಖ್ಯವಾಗಿ ಪೌಷ್ಟಿಕಾಂಶ ಅರಿವಿನ ಹಾಗೂ ಜಾಗೃತಿಯ ಕಾರ್ಯಕ್ರಮ ಮಾಡುತ್ತಿದ್ದು, ಇದರಿಂದ ಬೆಳೆಯುತ್ತಿರುವ ಮಕ್ಕಳಿಗೆ ವಯೋವೃದ್ಧರಿಗೆ ಗರ್ಭಿಣಿಯರಿಗೆ ಬಾಣಂತಿಯರಿಗೆ ಎಲ್ಲರಿಗೂ ಸಹಕಾರಿಯಾಗುತ್ತದೆ, ಈ ಕಾರ್ಯಕ್ರಮವನ್ನು ದೊಡ್ಡ ಮಟ್ಟದಲ್ಲಿ ಮಾಡುವ ಅವಶ್ಯಕತೆ ಇದೆ, ಆದರೆ ಕೊರೊನ ಹಿನ್ನಲೆಯಲ್ಲಿ ಸರಳವಾಗಿ ನಮ್ಮ ಕಾರ್ಯಕರ್ತರಿಗೆ ಹೇಳಿ ಅವರ ಮೂಲಕ ಮನೆ ಮನೆಗೆ ತಲುಪಿಸುವಂತಹ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ರವಿಕುಮಾರ್ ಮಾತನಾಡಿ, ನಮ್ಮ ಅಂಗನವಾಡಿ ಕಾರ್ಯಕರ್ತರು ಕೊರೊನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸಾರ್ವಜನಿಕರಿಗೆ ನೀಡಬೇಕಿದೆ, ಸರ್ಕಾರ ಯಾರ ಮನೆ ಬಾಗಿಲಿಗೆ ಹೋಗಿ ಕೆಲಸ ಮಾಡಲು ಸಾಧ್ಯವಿಲ್ಲ, ಆದರೆ ನೀವು ಪ್ರತಿ ಮನೆಯ ಬಳಿ ಹೋಗಿ ಕೆಲಸವನ್ನು ಕೊರೊನಾ ಸಮಯದಲ್ಲಿ ಮಾಡಿರುವುದು ನಿಜವಾದ ಕೊರೊನ ವಾರಿಯರ್ಸ್  ಸೇವೆ, ನಿಮಗೆ ಹೆಚ್ಚಿನ ಧನ್ಯವಾದಗಳು, ಕಳೆದ ವರ್ಷ ಮಾರ್ಚ್ ಆರಂಭವಾಗಿದ್ದ ಕೊರೊನಾ ಎರಡನೆಯ ಅಲೆ ಈಗ ಬರುತ್ತಿರುವುದು ಸಮಸ್ಯೆಯಾಗಿದ್ದು, ಇದರ ಬಗ್ಗೆ ಸಾರ್ವಜನಿಕರು, ಮಕ್ಕಳು, ಗರ್ಭಿಣಿಯರು ಎಚ್ಚರ ವಹಿಸಬೇಕಾಗಿದೆ,  ಸಾಮಾಜಿಕ ಅಂತರ, ಮಾಸ್‌ಕ್‌ ಧರಿಸಿ ಹೊರಗಡೆ ಓಡಾಡುವುದು ಸೂಕ್ತ ಎಂದು ತಿಳಿಸಿದರು.

ಅಂಗನವಾಡಿ ಮೇಲ್ವಿಚಾರಕಿ ಸರ್ವಮಂಗಳ ಮಾತನಾಡಿ ಸರಕಾರ ಹಲವು ಯೋಜನೆಗಳ ಮೂಲಕ ಹಲವು ರೀತಿಯ ಪೌಷ್ಟಿಕ ಅಂಶಗಳನ್ನು ಮಕ್ಕಳಿಗೆ ನೀಡುವ ಕೆಲಸ ಮಾಡುತ್ತಿದೆ, ಅಂತಹ ಯೋಜನೆಗಳ ಬಗ್ಗೆ ತಾವೆಲ್ಲರೂ ತಿಳಿದುಕೊಳ್ಳಬೇಕು ಮತ್ತು ಈ ಯೋಜನೆಯ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಪ್ರಿಯಾಂಕಾ, ಅಭಿವೃದ್ಧಿ ಅಧಿಕಾರಿ ನಾಗರಾಜು ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳು, ಸಾರ್ವಜನಿಕರು ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!