ಹಂದಿ ಬೇಟೆ: ವಿದ್ಯುತ್ ಪ್ರವಹಿಸಿ ವ್ಯಕ್ತಿ ಸಾವು

Electric cables with glowing electricity lightning
205

Get real time updates directly on you device, subscribe now.

Electric cables with glowing electricity lightning

ಹುಳಿಯಾರು: ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿ ಹಂದಿ ಬೇಟೆಯಾಡುವ ಪ್ರಯತ್ನದಲ್ಲಿ ಮೇಲನಹಳ್ಳಿ ಗ್ರಾಮದ ನಾಗರಾಜು (45) ಎಂಬುವರು ವಿದ್ಯುತ್ ಪ್ರವಹಿಸಿ ಸಾವನ್ನಪ್ಪಿದ್ದಾರೆ.
ಬುಧವಾರ ರಾತ್ರಿ ಗಾಣಧಾಳು ಗ್ರಾಮದ ಬಳಿಯ ಗ್ಯಾರಂಟಿಪಾಳ್ಯ ಸಮೀಪದ ತೋಟದಲ್ಲಿ ವಿದ್ಯುತ್ ತಂತಿಯನ್ನು ಬಿಟ್ಟು ಹಂದಿ ಬೇಟೆಗಾಗಿ ಕಾದು ಕುಳಿತಿದ್ದಾರೆ. ವಿದ್ಯುತ್ ತಂತಿಗೆ ಸಿಲುಕಿದ ಹಂದಿ ಸಾವನ್ನಪ್ಪಿದೆ. ಅದೇ ಸಮಯದಲ್ಲಿ ಹಂದಿ ಎತ್ತಿಕೊಳ್ಳಲು ಹೋಗಿ ವಿದ್ಯುತ್ ಪ್ರವಹಿಸಿ ಮೃತಪಟ್ಟಿದ್ದಾರೆ.

ಸ್ಥಳಕ್ಕೆ ಅರಣ್ಯ ಹಾಗೂ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Get real time updates directly on you device, subscribe now.

Comments are closed.

error: Content is protected !!