ತುರುವೇಕೆರೆ: ಪಟ್ಟಣದಲ್ಲಿನ ಬಿರ್ಲಾ ಕಾರ್ನರ್ನಲ್ಲಿರುವ ಮರ್ಚೆಂಟ್ಸ್ ಬ್ಯಾಂಕ್ ಕಳೆದ 15 ದಿನಗಳಿಂದ ಬಾಗಿಲು ತೆರೆಯದ ಹಿನ್ನಲೆಯಲ್ಲಿ ಗ್ರಾಹಕರು ಹಾಗೂ ಠೇವಣಿದಾರರನ್ನು ಆತಂಕಕ್ಕೀಡು ಮಾಡಿದೆ ಎಂದು ಪಾಂಡುರಂಗ ಸ್ವಾಮಿ ದೇವಾಲಯ ಸಮಿತಿ ಅಧ್ಯಕ್ಷ ರಮೇಶ್ ಬಾಬು ಹೇಳಿದರು.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸುಮಾರು ವರ್ಷಗಳಿಂದ ಆರ್ಥಿಕ ವಹಿವಾಟು ನಡೆಸುತ್ತಿದ್ದ ಮರ್ಚೆಂಟ್ ಬ್ಯಾಂಕ್ ಧಿಡೀರ್ ಬೀಗ ಮುದ್ರೆಗೊಳಗಾಗಿದೆ, ಬ್ಯಾಂಕ್ನಲ್ಲಿ ಠೇವಣಿ ಇಟ್ಟಿರುವವರ ಹಾಗೂ ನಿತ್ಯ ವ್ಯವಹಾರ ನಡೆಸುತ್ತಿದ್ದ ಗ್ರಾಹಕರು ಕಂಗಾಲಾಗಿದ್ದಾರೆ, ಬ್ಯಾಂಕ್ ಬಾಗಿಲು ತೆರೆಯದೇ ಇರುವುದರಿಂದ ಯಾರನ್ನು ಕೇಳುವುದು ಎಂಬುದು ತಿಳಿಯದೇ ದಿಕ್ಕು ಕಾಣದಾಗಿದ್ದಾರೆ, ಕೆಲ ದಿನಗಳ ಹಿಂದೆ ಬ್ಯಾಂಕ್ ನಷ್ಟದಲ್ಲಿದೆ ಎಂಬ ಊಹಾಪೋಹಕ್ಕೆ ಬ್ಯಾಂಕ್ ಬಾಗಿಲು ಬಂದ್ ಆಗಿರುವುದು ಮತ್ತಷ್ಟು ಪುಷ್ಟಿ ನೀಡಿದಂತಾಗಿದೆ, ಬ್ಯಾಂಕ್ ಬಾಗಿಲು ಮುಚ್ಚಿರುವ ಬಗ್ಗೆ ಅಧ್ಯಕ್ಷರನ್ನು ಕೇಳಿದರೇ ಉಡಾಫೆ ಉತ್ತರ ನೀಡುತ್ತಿದ್ದಾರೆ, ಸಹಕಾರ ಸಂಘಗಳ ಇಲಾಖಾ ಅಧಿಕಾರಿಗಳು ಕೂಡಲೇ ಮರ್ಚೇಂಟ್ ಬ್ಯಾಂಕ್ ಪರಿಶೀಲಿಸಬೇಕು, ಇಲ್ಲವಾದಲ್ಲಿ ಬ್ಯಾಂಕ್ ಮುಂದೆ ಠೇವಣಿದಾರರು ಹಾಗೂ ಗ್ರಾಹಕರು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ರಮೇಶ್ಬಾಬು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಆರ್.ಮಲ್ಲಿಕಾರ್ಜುನ್, ನರಸಿಂಹ ಪ್ರಸಾದ್ ಹಾಗೂ ಮರ್ಚೆಂಟ್ ಬ್ಯಾಂಕ್ ಠೇವಣಿದಾರರು, ಗ್ರಾಹಕರು ಇದ್ದರು.
Comments are closed.