ಪರಂವ ಸಿನಿಮಾ ರಾಜ್ಯಾದ್ಯಂದ ಜುಲೈ 21ಕ್ಕೆ ರಿಲೀಸ್

121

Get real time updates directly on you device, subscribe now.


ತುಮಕೂರು: ಪೌರಾಣಿಕ ಹಿನ್ನೆಲೆಯಿರುವ ವೀರಗಾಸೆ ಕಲೆಯನ್ನು ಪ್ರಧಾನ ವಸ್ತುವಾಗಿಟ್ಟುಕೊಂಡು ಚಿತ್ರೀಕರಿಸಿರುವ ಪರಂವ ಸಿನಿಮಾ ಜುಲೈ 21ಕ್ಕೆ ರಾಜ್ಯಾದ್ಯಂತ ಮಲ್ಟಿಪ್ಲೇಕ್ಸ್ಗಳಲ್ಲಿ ಬಿಡುಗಡೆಯಾಗಲಿದೆ.ಈ ನೆಲದ ಕಥೆಯನ್ನಾಧಿರಿಸಿದ ಸಿನಿಮಾವನ್ನು ಕನ್ನಡಿಗರು ನೋಡಿ, ಆಶೀರ್ವದಿಸುವಂತೆ ಚಿತ್ರದ ನಿರ್ದೇಶಕ ಸಂತೋಷ್ ಕೈದಾಳ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸುಮಾರು 200ಕ್ಕೂ ಹೆಚ್ಚು ರಂಗಭೂಮಿಯ ಹಿನ್ನೆಲೆಯುಳ್ಳ ಹೊಸ ಕಲಾವಿದರು ನಟಿಸಿರುವ ಪರಂವ ಚಿತ್ರ ತುಮಕೂರು ಜಿಲ್ಲೆಯಲ್ಲಿ ಶೇ.80 ರಷ್ಟು ಚಿತ್ರೀಕರಣ ನಡೆಸಿದ್ದು, ಸಿದ್ದಗಂಗಾ ಶ್ರೀಗಳ ಆಶೀರ್ವಾದದೊಂದಿಗೆ ಸಿದ್ದಗಂಗೆಯಲ್ಲಿಯೂ ಚಿತ್ರೀಕರಿಸಲಾಗಿದೆ, ಸ್ಥಳೀಯ ಪ್ರತಿಭೆಯಾಗಿ ನಾವು ಮಾಡಿದ ಸಿನಿಮಾವನ್ನು ನೋಡಿ ಪ್ರೋತ್ಸಾಹಿಸುವಂತೆ ಮನವಿ ಮಾಡಿದ್ದಾರೆ.

ವೀರಗಾಸೆ ಬಹಳ ಪ್ರಸಿದ್ದ ಕಲೆ, ಶಿವನ ಡಮರುಗದಿಂದ ಬರುವ ನಾದವನ್ನು ಪರಂವ ಎಂದು ಸಂಸ್ಕೃತದಲ್ಲಿ ಕರೆಯಲಾಗುತ್ತಿದೆ, ವೀರಗಾಸೆಯನ್ನು ಬದುಕಾಗಿಸಿಕೊಂಡಿದ್ದ ಕುಟುಂಬವೊಂದು ತನಗೊಲಿದ ಕಲೆಯ ಉಳಿವು ಮತ್ತು ಬೆಳವಣಿಗೆಗೆ ಪಡುವ ಪಡಿಪಾಟಲುಗಳನ್ನೇ ಕಥಾ ವಸ್ತುವನ್ನಾಗಿಸಲಾಗಿದೆ, ರಂಗಭೂಮಿಯ ಹಿನ್ನೆಲೆಯಿಂದ ಬಂದ ಪ್ರೇಮ್ ಸಿಡೇಗಲ್ ಚಿತ್ರದ ನಾಯಕನಾಗಿದ್ದು, ಮಂಗಳೂರು ಮೂಲದ ಮೈತ್ರೇಯಿ ನಾಯಕಿ, ಸುಮಾರು 200ಕ್ಕೂ ಹೆಚ್ಚು ಜನರು ಪಾತ್ರಗಳನ್ನು ಮಾಡಿದ್ದಾರೆ, ಮೊದಲು ಮಲ್ಟಿಪ್ಲೆಕ್ಸ್ಗಳಲ್ಲಿ ಬಿಡುಗಡೆ ಮಾಡಿ ಪ್ರೇಕ್ಷಕರ ಸ್ಪಂದನೆ ನೋಡಿ ಥಿಯೇಟರ್ಗಳಿಗೆ ಬಿಡುಗಡೆ ಮಾಡಲು ತೀರ್ಮಾನಿಸಿದ್ದೇವೆ ಎಂದರು.

ಪರಂವ ಚಿತ್ರದ ನಾಯಕ ನಟ ಪ್ರೇಮ ಸಿಡೆಗಲ್ ಬಿಟೆಕ್ ಆಗ್ರಿಕಲ್ಚರ್ ಪದವಿಧರನಾಗಿ, ಸಾಣೇಹಳ್ಳಿ ರಂಗಶಾಲೆಯಲ್ಲಿ ನಟನೆ ಕಲಿತು ನಾಟ್ಯ ಯೋಗ ರಂಗ ತಂಡದೊಂದಿಗೆ ಊರೂರು ತಿರುಗಿ ನಾಟಕ ಪ್ರದರ್ಶಿಸಿ ,ಸಿನಿಮಾ ರಂಗಕ್ಕೆ ಬಂದು, ಐದಾರು ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕನಾಗಿ ದುಡಿದು, ನಂತರ 9 ಕ್ಕೂ ಹೆಚ್ಚು ಚಿತ್ರಗಳಲ್ಲಿ ಶಿವರಾಜ್ ಕುಮಾರ್, ಸುದೀಪ್ ಅವರೊಂದಿಗೆ ಸಣ್ಣಪುಟ್ಟ ಪಾತ್ರಗಳನ್ನು ಮಾಡಿ ನನ್ನಂತಹ ಸಮಾನ ಮನಸ್ಕರ ಜೊತೆ ಸೇರಿ ವೀರಗಾಸೆ ಕಲೆ ಪ್ರಮುಖ ಕಥಾ ವಸ್ತುವಾಗಿರುವ ಚಿತ್ರದಲ್ಲಿ ನಾಯಕನಟನಾಗಿ ಅಭಿನಯಿಸಿದ್ದೇವೆ, ಟೀಸರ್ ಈಗಾಗಲೇ ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಒಳ್ಳೆಯ ಮೆಚ್ಚುಗೆ ವ್ಯಕ್ತವಾಗಿದೆ, ನಮ್ಮ ಸಿನಿಮಾಗೆ ಹಲವಾರು ಹಿರಿಯ ಕಲಾವಿದರು ಸಹಕಾರ ನೀಡಿದ್ದಾರೆ, ಡಾಲಿ ಧನಂಜಯ್, ನೆನಪಿರಲಿ ಪ್ರೇಮ್, ಸಿದ್ದಗಂಗಾ ಮಠಾಧ್ಯಕ್ಷರು ಹಾಡುಗಳನ್ನು ಬಿಡುಗಡೆ ಮಾಡುವ ಮೂಲಕ ನಮ್ಮನ್ನು ಪ್ರೋತ್ಸಾಹಿಸಿದ್ದಾರೆ, ಜುಲೈ 21ಕ್ಕೆ ಮಲ್ಟಿಪ್ಲೆಕ್ಸ್ಗಳಲ್ಲಿ ಬಿಡುಗಡೆಯಾಗುವ ಸಿನಿಮಾ ವೀಕ್ಷಿಸಿ ಸ್ಥಳೀಯರನ್ನು ಪ್ರೋತ್ಸಾಹಿಸುವಂತೆ ಮನವಿ ಮಾಡಿದರು.

ಸುದ್ದಿಗೋಷ್ಠಿಯಲಿ ಆನಂದ್, ನವೀನ್, ರಾಘವೇಂದ್ರ ಮತ್ತಿತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!