ಕೌಶಲ್ಯದಿಂದ ಉತ್ತಮ ಭವಿಷ್ಯ ಸಾಧ್ಯ: ವೆಂಕಟೇಶ್ವರಲು

98

Get real time updates directly on you device, subscribe now.


ತುಮಕೂರು: ಸುಧಾರಿತ ಬೋಧನೆ, ವಿಮರ್ಶಾತ್ಮಕ ಚಿಂತನೆ, ಸಂವಹನ ಕಲೆ, ಮಾಧ್ಯಮ ಬಳಕೆ, ನಾಯಕತ್ವ, ಉತ್ಪಾದಕಶೀಲತೆ, ಸೂಕ್ಷ್ಮಅಧ್ಯಯನ ವಿನ್ಯಾಸ ಚಿಂತನೆ ಕೌಶಲ್ಯಗಳು 21ನೇ ಶತಮಾನದಲ್ಲಿ ಶಿಕ್ಷಕರಿಗೆ ಅವಶ್ಯಕ ಎಂದು ತುಮಕೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಂ.ವೆಂಕಟೇಶ್ವರಲು ಹೇಳಿದರು.

ತುಮಕೂರು ವಿಶ್ವವಿದ್ಯಾಲಯವು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮ ಬೆಂಗಳೂರು ಇವರ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಉಪನ್ಯಾಸಕರಿಗೆ ಸುಧಾರಿತ ಶಿಕ್ಷಣ ಮೌಲ್ಯ ಮತ್ತು 21ನೇ ಶತಮಾನದ ಸಾಫ್ಟ್ ಸ್ಕಿಲ್ಸ್ ತರಬೇತಿಯ ತರಬೇತುದಾರ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಾಫ್ಟ್ ಸ್ಕಿಲ್ಸ್ ತರಬೇತಿಗೆ ವಿಶ್ವ ವಿದ್ಯಾಲಯದಿಂದ ಮತ್ತು ಸರ್ಕಾರದಿಂದ ಎಲ್ಲಾ ನಿರ್ದೇಶನ ಸಿಕ್ಕಿವೆ, ಇಂತಹ ಹಲವಾರು ತರಬೇತಿಗಳಿಂದ ನಾವು ಮುಂದಿನ ಪೀಳಿಗೆಗೆ ಬದಲಾವಣೆ ತರಬೇಕಾಗಿದೆ ಎಂದು ತಿಳಿಸಿದರು.
ಬೆಂಗಳೂರಿನ ಕೆಎಸ್ಡಿಸಿಯ ಕಾರ್ಯ ನಿರ್ವಾಹಕ ನಿರ್ದೇಶಕಿ ಕವಿತಾ ಎಸ್. ಗೌಡ ಮಾತನಾಡಿ. ಪ್ರತಿಯೊಬ್ಬರ ಜೀವನದಲ್ಲಿ ಕೌಶಲ್ಯ ಅತಿ ಮುಖ್ಯ, ಹಲವಾರು ಕೌಶಲ್ಯ ಅಳವಡಿಸಿಕೊಳ್ಳುವುದರಿಂದ ನಿರಂತರ ಯಶಸ್ಸು ಕಾಣಬಹುದು, ಈ ತರಬೇತಿಯಲ್ಲಿ ಹೊಸ ತಂತ್ರಜ್ಞಾನದ ಬಗ್ಗೆ ಮಾಹಿತಿ ಮತ್ತು ಪ್ರಯೋಗಾತ್ಮಕ ಕೌಶಲ್ಯ ಹೇಳಿಕೊಡಲಾಗುವುದು, ಇವು ನಿಮ್ಮಿಂದ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯ ರೂಪಿಸಿಕೊಡಲು ಸಹಕಾರಿಯಾಗಲಿವೆ ಎಂದು ಹೇಳಿದರು.

ತುಮಕೂರು ವಿವಿಯ ಕುಲಸಚಿವೆ ನಾಹಿದಾ ಜಮ್ ಜಮ್ ಮಾತನಾಡಿ. ಇಂದು ಶಿಕ್ಷಣದಲ್ಲಿ ಹಲವಾರು ಬದಲಾವಣೆ ತರಬೇಕಿದೆ, ಇಂದಿನ ಜಗತ್ತಿಗೆ ಬೇಕಾದ ಹಲವಾರು ಮಾಹಿತಿ ಜ್ಞಾನ ಕಲಿತುಕೊಂಡು ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನ ನೀಡಬೇಕಾಗಿದೆ ಎಂದು ತಿಳಿಸಿದರು.

ವಿವಿ ಕಲಾ ಕಾಲೇಜಿನ ಪ್ರಾಂಶುಪಾಲ ಪ್ರೊ.ಬಿ ಕರಿಯಣ್ಣ, ವಿವಿ ಕೌಶಲ್ಯಾಭಿವೃದ್ಧಿ ಕೋಶದ ಸಂಯೋಜಕ ಡಾ.ರಾಜೇಂದ್ರ ಬಾಬು, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಕೆ.ಶ್ರೀನಿವಾಸ, ವಿವಿಯ ಸಾಮಾನ್ಯ ಮತ್ತು ಅಭಿವೃದ್ಧಿ ವಿಭಾಗದ ಉಪ ಕುಲಸಚಿವೆ ಡಾ.ಮಂಗಳಾಗೌರಿ.ಎಂ, ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆಯ ಸಹಾಯಕ ನಿರ್ದೇಶಕ ವಿಶ್ವೇಶ್ವರ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಸಿಬಂತಿ ಪದ್ಮನಾಭ.ಕೆ.ವಿ. ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!