ಕುಣಿಗಲ್: ರಾಜ್ಯದಲ್ಲಿ ಜೈನ ಮುನಿಗಳು, ಹಿಂದೂ ಕಾರ್ಯಕರ್ತರಿಗೆ ರಕ್ಷಣೆ ನೀಡುವಂತೆ ಹಾಗೂ ಹಂತಕ ಅಪರಾಧಿಗಳಿಗೆ ಕಠಿಣ ಶಿಕ್ಷೆ ನೀಡುವ ನಿಟ್ಟಿನಲ್ಲಿ ಸರ್ಕಾರ ತುರ್ತಾಗಿ ಕ್ರಮ ಕೈಗೊಳ್ಳಲು ಸೂಚಿಸಬೇಕೆಂದು ಆಗ್ರಹಿಸಿ ಹಿಂದು ಜನ ಜಾಗೃತಿ ಸಮಿತಿ ಪದಾಧಿಕಾರಿಗಳು, ಜೈನ ಮುಖಂಡರು ತಹಶೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಜೈನ ಸಮಾಜದ ಮುಖಂಡರಾದ ಮೋಹನ್ಕುಮಾರ್, ಸಂತೋಷ್, ಹಿಂದೂ ಜನ ಜಾಗೃತಿ ಸಮಿತಿಯ ಮಂಜೇಶ್, ಅರುಣಗೌಡ ಇತರರು ತಾಲೂಕು ಕಚೇರಿ ಆವರಣದಲ್ಲಿ ಜಮಾವಣೆಗೊಂಡು ಸರ್ಕಾರದ ಕ್ರಮ ಖಂಡಿಸಿದರು.
ಈ ವೇಳೆ ಅರುಣ್ಗೌಡ ಮಾತನಾಡಿ. ರಾಜ್ಯದಲ್ಲಿ ಹೊಸ ರ್ಕಾರ ಆಡಳಿತಕ್ಕೆ ಬಂದಾಗಿನಿಂದ ಹಿಂದೂಪರ ಕಾರ್ಯಕರ್ತರ ಹತ್ಯೆಯಾಗುತ್ತಿದೆ, ಜೈನ ಮುನಿಗಳ ಹತ್ಯೆ ಸಹ ನಡೆದಿದ್ದು ನಾಗರಿಕ ಸಮಾಜ ಬೆಚ್ಚಿಬಿದ್ದಿದೆ, ಸರ್ಕಾರದ ಹಿಂದು ಪರ ಕಾರ್ಯಕರ್ತರಿಗೆ ಜೀವ ಬೆದರಿಕೆ ಹಾಕಲಾಗುತ್ತಿದೆ, ದೇವಲಯ, ನಾಗರಕಟ್ಟೆ ಪೂಜೆ ಮಾಡಲು ತೆರಳುವ ಮುಖಂಡರಿಗೆ ಪೊಲೀಸರು ನೋಟಿಸ್ ನೀಡುತ್ತಿದ್ದಾರೆ, ಕೆಲವೆಡೆಗಳಲ್ಲಿ ಹಿಂದು ಸಂಪ್ರದಾಯದಂತೆ ಪೂಜೆ, ಉತ್ಸವ ಆಚರಣೆಗೆ ಬೇರೆ ಧರ್ಮದವರು ಅಡ್ಡಿಪಡಿಸುವ ಕೆಲಸವಾಗುತ್ತಿದ್ದು ರಾಜ್ಯದಲ್ಲಿ ಜೈನ ಮುನಿಗಳು ಸೇರಿದಂತೆ ಹಿಂದೂ ಕಾರ್ಯಕರ್ತರಿಗೆ ರಕ್ಷಣೆ ನೀಡುವ ನಿಟ್ಟಿನಲ್ಲಿ ತುರ್ತು ಕ್ರಮ ಕೈಗೊಳ್ಳಬೇಕು ಹಾಗೂ ಹತ್ಯೆಕೋರರಿಗೆ ಕಠಿಣ ಶಿಕ್ಷೆಯಾಗುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರಕ್ಕೆ ರಾಜ್ಯಪಾಲರು ಸೂಚನೆ ನೀಡಬೇಕೆಂದು ಆಗ್ರಹಿಸಿ ಗ್ರೇಡ್- 2 ತಹಶೀಲ್ದಾರ್ ಯೋಗೇಶ್ ಅವರಿಗೆ ಮನವಿ ಸಲ್ಲಿಸಿದರು.
Comments are closed.