ಗ್ರಾಪಂ ಮಟ್ಟದಲ್ಲಿ ಕೆಪಿಎಸ್ ಮಾದರಿ ಶಾಲೆ ಸ್ಥಾಪನೆ

217

Get real time updates directly on you device, subscribe now.


ಶಿರಾ: ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಸ್ಥಾಪಿಸಿದರೆ ಗ್ರಾಮೀಣ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಲಿದೆ, ಈ ನಿಟ್ಟಿನಲ್ಲಿ ನಾನು ಆಸಕ್ತಿ ವಹಿಸಿದ್ದು, ಇದಕ್ಕೆ ಸಾಕಷ್ಟು ಹಣಕಾಸಿನ ಅವಶ್ಯಕತೆ ಇರುತ್ತದೆ ಸರಕಾರದಿಂದಲೂ ಅನುದಾನ ತರಲು ನಾನೂ ಶ್ರಮಿಸುತ್ತೇನೆ, ಇದರ ಜೊತೆ ಸಾರ್ವಜನಿಕರು ಸಹ ಕೈಜೋಡಿಸುವ ಮೂಲಕ ಸರಕಾರಿ ಶಾಲೆಗಳ ಅಭಿವೃದ್ಧಿ ಮಾಡೋಣ ಎಂದು ಕರ್ನಾಟಕ ಸರಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ಹೇಳಿದರು.

ಶನಿವಾರ ತಾಲ್ಲೂಕಿನ ಕಳ್ಳಂಬೆಳ್ಳ ಹೋಬಳಿಯ ಚಿಕ್ಕನಹಳ್ಳಿ ಗ್ರಾಮದ ದಿ.ಉಗ್ರೇಗೌಡ ಸ್ಮಾರಕ ಸರಕಾರಿ ಎಸ್.ಕೆ.ವಿ.ಡಿ ಶಾಲೆಯ ನೂತನ ಶಾಲಾ ಕಟ್ಟಡ ಉದ್ಘಾಟಿಸಿ ಮಾತನಾಡಿ. ಮೊದಲೆಲ್ಲಾ ಸರಕಾರಿ ಶಾಲೆಗಳ ಅಬಿವೃದ್ಧಿಯಲ್ಲಿ ಸಾರ್ವಜನಿಕರ ಪಾತ್ರ ಹೆಚ್ಚು ಇರುತ್ತಿತ್ತು, ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರು ಭಾಗವಹಿಸುತ್ತಿಲ್ಲ, ಖಾಸಗಿ ಶಾಲೆಗಳೊಂದಿಗೆ ಸರಕಾರಿ ಶಾಲೆಗಳು ಪೈಪೋಟಿ ನಡೆಸಲು ಪಂಚಾಯಿತಿಗೆ ಒಂದು ಸರಕಾರಿ ಪಬ್ಲಿಕ್ ಶಾಲೆ ತೆರೆಯಬೇಕು, ಆಗ ಸಾಧ್ಯವಾಗುತ್ತದೆ ಎಂದರು.

ವಿಧಾನ ಪರಿಷತ್ ಸದಸ್ಯ ಚಿದಾನಂದ್ ಗೌಡ ಮಾತನಾಡಿ. ಶಿರಾ ತಾಲ್ಲೂಕು ಶೈಕ್ಷಣಿಕವಾಗಿ, ಆರ್ಥಿಕವಾಗಿ ಬಹಳ ಮುಂದೇ ಸಾಗುತ್ತಿದೆ, ಅದರಲ್ಲೂ ಶಿಕ್ಷಣದಲ್ಲಿ ಕ್ರಾಂತಿ ಮೂಡಿಸಿದ್ದು, ಶೈಕ್ಷಣಿಕವಾಗಿ ಕರ್ನಾಟಕದ ಅಂದಿನ ಮುಖ್ಯಮಂತ್ರಿಯಾದ ಕುಮಾರಸ್ವಾಮಿ ಅವರ ಅವಧಿಯ ಕಾಲದಲ್ಲಿ ರಾಜ್ಯದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಅನುಷ್ಠಾನಕ್ಕೆ ತಂದಿದ್ದರು. ಬಿಜೆಪಿ ಸರಕಾರದಲ್ಲಿ ಚಿಕ್ಕನಹಳ್ಳಿ ಕೆಪಿಎಸ್ ಶಾಲೆಗೆ ಸುಮಾರು 2 ಕೋಟಿ ಅನುದಾನ ನೀಡಲಾಗಿತ್ತು, ನಾನು ಕೂಡ ಸರಕಾರಿ ಶಾಲೆಗಳ ಅಭಿವೃದ್ಧಿಗೆ ಶ್ರಮಿಸುತ್ತಿದ್ದು, ಶಿಕ್ಷಣ ಕಾಶಿ ಮಾಡುವ ಗುರಿ ಹೊಂದಿದ್ದೇನೆ, ಶಿರಾ ತಾಲೂಕು ಎಲ್ಲ ರಂಗದಲ್ಲೂ ಅಭಿವೃದ್ಧಿ ಹೊಂದಿರುವುದರಿಂದ ಜಿಲ್ಲೆಗೆ ಅರ್ಹವಾಗಿದೆ, ಹಿರಿಯರಾದ ಶಾಸಕ ಟಿ.ಬಿ.ಜಯಚಂದ್ರ ಅವರು ನಮ್ಮ ತಾಲೂಕನ್ನು ಜಿಲ್ಲೆಯನ್ನಾಗಿ ಮಾಡಬೇಕೆಂದು ಸರಕಾರವನ್ನು ಒತ್ತಾಯಿಸಬೇಕು, ನಾನು ಕೂಡ ನಿಮ್ಮ ಜೊತೆಗಿರುತ್ತೇನೆ ಎಂದರು.

ಕಾರ್ಯಕ್ರಮದಲ್ಲಿ ತಹಶೀಲ್ದಾರ್ ನಾಗಮಣಿ, ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಪ್ಪ, ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಎಸ್.ಆರ್.ಗೌಡ, ಮಾಜಿ ಜಿಪಂ ಸದಸ್ಯರಾದ ಪರ್ವತಪ್ಪ, ಅರೇಹಳ್ಳಿ ರಮೇಶ್, ಬಾಲೇನಹಳ್ಳಿ ಪ್ರಕಾಶ್, ಹಾಲೆನಹಳ್ಳಿ ಶಶಿಧರ್, ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಶಿವಕುಮಾರ್ ಇತರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!