ಚಿರತೆ ಬಂಧನಕ್ಕೆ ಬೋನ್ ಇಟ್ಟ ಸಿಬ್ಬಂದಿ

116

Get real time updates directly on you device, subscribe now.


ತುರುವೇಕೆರೆ: ತಾಲೂಕಿನ ಮಾವಿನಕೆರೆ ಗ್ರಾಮದ ರಾಜಾಪುರ ಕಾವಲ್ ನಲ್ಲಿ ಮೂರು ಚಿರತೆ ಬೀಡು ಬಿಟ್ಟಿದೆ ಎಂಬ ದೂರಿನ ಮೇರೆಗೆ ಚಿಕ್ಕನಾಯಕನ ಹಳ್ಳಿ ಪ್ರಾದೇಶಿಕ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಗಳ ಬಂಧನಕ್ಕೆ ಬೋನ್ ಇಡುವ ಮೂಲಕ ಕಾರ್ಯ ತಂತ್ರ ರೂಪಿಸಿದ್ದಾರೆ.

ತಾಲೂಕಿನ ರಾಜಾಪುರ ಕಾವಲ್ ವಾಸಿ ಜವರಪ್ಪನವರ ನಿವಾಸದ ಅನತಿ ದೂರದಲ್ಲಿ ಚಿರತೆಗಳು ಬೀಡು ಬಿಟ್ಟಿರುವ ಬಗ್ಗೆ ವೀಡಿಯೋ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ವೀಡಿಯೋ ತುಣುಕಿನ ಆಧಾರದ ಮೇರೆಗೆ ಅರಣ್ಯ ಇಲಾಖೆ ಸಿಬ್ಬಂದಿ ಮಧ್ಯರಾತ್ರಿ ರಾಜಾಪುರ ಕಾವಲ್ ನಲ್ಲಿರುವ ಜವರಪ್ಪ ನಿವಾಸದ ಬಳಿಗೆ ದೌಡಾಯಿಸಿದ್ದರು. ಆ ವೇಳೆಗಾಗಲೆ ಚಿರತೆ ಜಾಗ ಬದಲಿಸಿತ್ತು, ಆದರೂ ಸಹ ಸ್ಥಳೀಯರು ಚಿರತೆ ಕಳೆದೊಂದು ವಾರದಿಂದಲೂ ಇಲ್ಲಿಯೇ ಸುಳಿದಾಡುತ್ತಿದೆ. ಇದನ್ನು ಸ್ಥಳೀಯರು ಕಂಡಿದ್ದಾಗಿ ಆತಂಕ ವ್ಯಕ್ತಪಡಿಸಿದ್ದರು. ಜನತೆಯ ನೆಮ್ಮದಿಗೆ ಭಂಗ ತಂದಿರುವ ಚಿರತೆ ಬಂಧಿಸುವಂತೆ ಸಾಮಾಜಿಕ ಜಾಲ ತಾಣದಲ್ಲಿ ಸ್ಥಳೀಯರು ಮನವಿ ಮಾಡಿದ್ದರು.

ಸ್ಥಳೀಯ ನಿವಾಸಿಗಳ ಆತಂಕಕ್ಕೆ ಕಾರಣವಾದ ಚಿರತೆಗಳ ಬಂಧನಕ್ಕೆ ರಾಜಾಪುರ ಕಾವಲ್ ಪ್ರದೇಶದಲ್ಲಿ ಬೋನ್ ಇರಿಸುವ ಮೂಲಕ ಕಾರ್ಯತಂತ್ರ ರೂಪಿಸಿದೆ. ಈ ಮೂಲಕ ಸ್ಥಳೀಯರು ತುಸು ನೆಮ್ಮದಿ ನಿಟ್ಟುಸಿರು ಬಿಡುವಂತಾಗಿದೆ. ಅರಣ್ಯ ಇಲಾಖೆಯವರ ಕಾರ್ಯತಂತ್ರ ಫಲ ಕೊಡುವುದೋ ಕಾದು ನೋಡಬೇಕಿದೆ.

ತುರುವೇಕೆರೆ ತಾಲೂಕಿನ ವ್ಯಾಪ್ತಿಯಲ್ಲಿ ಚಿರತೆಗಳ ಇತ್ತೀಚೆಗೆ ಚಲನವಲನ ಹೆಚ್ಚಾಗಿ ಕಂಡು ಬರುತ್ತಿದೆ. ಈ ಹಿನ್ನಲೆಯಲ್ಲಿ ರೈತಾಪಿಗಳು ಸಂಜೆ ವೇಳೆ ಕತ್ತಲಲ್ಲಿ ಸಂಚರಿಸುವುದು ನಿಷಿದ್ದ, ಸಂಜೆ ಸಂಚಾರಕ್ಕೆ ಆದಷ್ಟು ನಿಯಂತ್ರಣ ಮಾಡಿಕೊಳ್ಳಿ, ತಮ್ಮ ಜಾನುವಾರುಗಳನ್ನು ಅತ್ಯಂತ ಸುರಕ್ಷಿತ ಸ್ಥಳದಲ್ಲಿರಿಸುವಂತೆ ವಲಯ ಅರಣ್ಯಾಧಿಕಾರಿ ಅರುಣ್ ಸೂಚನೆ ನೀಡಿದ್ದಾರೆ.

ಈ ವೇಳೆ ಉಪ ವಲಯ ಅರಣ್ಯಾಧಿಕಾರಿ ಮಂಜುನಾಥ್, ಅರಣ್ಯ ಇಲಾಖಾ ಸಿಬ್ಬಂದಿ ಉಗ್ರಯ್ಯ ಮತ್ತಿತರಿದ್ದರು.

Get real time updates directly on you device, subscribe now.

Comments are closed.

error: Content is protected !!