ಕುಣಿಗಲ್: ಪಟ್ಟಣದ ಸಂತೇ ಮೈದಾನದಲ್ಲಿ ರಾತ್ರಿವೇಳೆ ಪುಂಡರ ಹಾವಳಿ ಹೆಚ್ಚಾಗಿದ್ದು ಸಂತೇ ಮೈದಾನಕ್ಕೆ ತರಕಾರಿ ತರುವ ರೈತರು, ವ್ಯಾಪಾರ ಮಾಡುವ ಮಾರಾಟಗಾರರಿಗೆ ಸೂಕ್ಷತ ರಕ್ಷಣೆ ನೀಡುವ ನಿಟ್ಟಿನಲ್ಲಿ ಪೊಲೀಸರು ಅಗತ್ಯ ಗಸ್ತು ನಡೆಸುವಂತೆ ರೈತರು, ಮಾರಾಟಗಾರರು ಆಗ್ರಹಿಸಿದ್ದಾರೆ.
ಸಂತೆ ಮೈದಾನದಲ್ಲಿ ಕೆಲ ರೈತರು ತಾವು ಬೆಳೆದ ಬೆಳೆಯನ್ನು ರಾತ್ರಿ ವೇಳೆಯೆ ತರುತ್ತಾರೆ. ಇವರ ಜೊತೆ ಮಾರಾಟಗಾರರು ಸಹ ಖರೀದಿ ಮಾಡಿದ ತರಕಾರಿ, ಈರುಳ್ಳಿ ಇತರೆ ಸಾಮಾಗ್ರಿಗಳನ್ನು ಸ್ವಚ್ಛ ಮಾಡಲು ಸಂತೇ ಮೈದಾನದಲ್ಲೆ ಕಾರ್ಯ ನಿರ್ವಹಿಸುತ್ತಿದ್ದು ಕೆಲ ಪುಂಡರು ಪಾನಮತ್ತರಾಗಿ ಗುಂಪು ಕಟ್ಟಿಕೊಂಡು ಏಕಾಏಕಿ ರೈತರು, ಮಾರಾಟಗಾರರ ಮೇಲೆ ದಾಳಿ ನಡೆಸಿ ನಿಂದಿಸುವುದಲ್ಲದೆ ಇತರೆ ರೀತಿಯಾಗಿ ಕಿರುಕುಳ ನೀಡುತ್ತಿದ್ದಾರೆ. ಹೊರಗಿನಿಂದ ಬಂದ ರೈತರನ್ನು ಬೆದರಿಸುತ್ತಿದ್ದು ರೈತರು ಆತಂಕಕ್ಕೆ ಒಳಗಾಗಿದ್ದಾರೆ. ರಾತ್ರಿ ವೇಳೆ ಸಂತೇಮೈದಾನದಲ್ಲಿ ತಮ್ಮ ಕಾರ್ಯ ನಿರ್ವಹಿಸಲು ತುಂಬಾ ತೊಂದರೆಯಾಗುತ್ತಿದ್ದು ಸ್ಥಳೀಯ ಪೊಲೀಸರು ರಾತ್ರಿ ವೇಳೆ ಗಸ್ತು ನಡೆಸುವ ಮೂಲಕ ಪುಂಡರ ಹಾವಳಿ ನಿಯಂತ್ರಣಕ್ಕೆ ಕಡಿವಾಣ ಹಾಕುವಂತೆ ಮನವಿ ಮಾಡಿದ್ದಾರೆ.
Comments are closed.