ಕುಣಿಗಲ್: ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಇರುವ ರಸಗೊಬ್ಬರ ಮಳಿಗೆಗಳಲ್ಲಿ ಗೊಬ್ಬರ ದರ ಸೇರಿದಂತೆ ಕೀಟನಾಶಕಗಳ ದರಪಟ್ಟಿ ಪ್ರದರ್ಶನ ಮಾಡದೆ ರೈತರ ಶೋಷಣೆ ಮಾಡುತ್ತಿದ್ದಾರೆಂದು ರೈತ ಗಂಗಾಧರ ಆರೋಪಿಸಿದ್ದಾರೆ.
ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ರಸಗೊಬ್ಬ ಸೇರಿದಂತೆ ಕೀಟನಾಶಕ ಮಾರಾಟ ಮಳಿಗೆಗಳು ತಮ್ಮಲ್ಲಿರುವ ಸ್ಟಾಕ್ ಸೇರಿದಂತೆ ರಸಗೊಬ್ಬರ, ಕೀಟನಾಶಕದ ದರಪಟ್ಟಿ ಪ್ರದರ್ಶನ ಮಾಡಬೇಕು. ಕೃಷಿ ಇಲಾಖೆಯ ಸುತ್ತೋಲೆಯಲ್ಲೂ ಸ್ಪಷ್ಟವಾಗಿ ಸೂಚನೆ ನೀಡಲಾಗಿದ್ದರೂ ತಾಲೂಕಿನ ಕೃಷಿ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಇಲಾಖೆಯ ಸುತ್ತೋಲೆ ಇಲಾಖೆಯ ಕಡತದಲ್ಲೆ ಉಳಿಯುವಂತಾಗಿದೆ. ದರ ಪಟ್ಟಿ ಪ್ರದರ್ಶನವಾದಲ್ಲಿ ರೈತರಿಗೆ ಸೂಕ್ತ ಮಾಹಿತಿ ಸಿಗುವ ಜೊತೆಯಲ್ಲಿ ರೈತನಿಂದ ಹೆಚ್ಚಿನ ಹಣ ವಸೂಲು ನಿಯಂತ್ರಣವಾಗುತ್ತದೆ. ಇನ್ನಾದರೂ ಜಿಲ್ಲಾ ಮಟ್ಟದ ಜಾಗೃತ ದಳದ ಅಧಿಕಾರಿಗಳು ದಿಡೀರ್ ತಪಾಸಣೆ ನಡೆಸಿ ದರಪಟ್ಟಿ ಪ್ರದರ್ಶನಕ್ಕೆ ಕ್ರಮಕೈಗೊಳ್ಳುವ ಜೊತೆಯಲ್ಲಿ ಹೆಚ್ಚಿನ ಬೆಲೆಗೆ ರಸಗೊಬ್ಬರ, ಕೀಟನಾಶಕ ಮಾರಾಟದ ಪ್ರಕರಣ ತಡೆಗಟ್ಟುವಂತೆ ಮನವಿ ಮಾಡಿದ್ದಾರೆ.
Comments are closed.