ಅಂತರ್ಜಲ ವೃದ್ಧಿಗೆ ಚೆಕ್ ಡ್ಯಾಂಗಳು ಸಹಕಾರಿ

ಪೈಪ್‌ಲೈನ್ ಮೂಲಕ ನೀರು ಹರಿಸಲು 1 ಸಾವಿರ ಕೋಟಿ ಅನುದಾನ ಮಂಜೂರಾಗಿದೆ: ರಾಜೇಶ್‌ಗೌಡ

410

Get real time updates directly on you device, subscribe now.

ಬರಗೂರು: ಭೂಮಿಗೆ ಬಿದ್ದ ಮಳೆ ನೀರನ್ನು ವ್ಯರ್ಥ ಮಾಡದೆ ತಡೆದು ನಿಲ್ಲಿಸಿದರೆ ಅಂತರ್ಜಲ ವೃದ್ಧಿ ಜೊತೆಗೆ ಭೂಮಿಯ ಫಲವತ್ತತೆ ಹೆಚ್ಚಾಗಿಸುವಲ್ಲಿ ಚೆಕ್‌ಡ್ಯಾಂಗಳು ಅತ್ಯಂತ ಸಹಕಾರಿಯಾಗಿದ್ದು, ಸಣ್ಣ ನೀರಾವರಿ ಇಲಾಖೆಯಿಂದ 7 ಕೋಟಿ ರೂಪಾಯಿ ಅನುದಾನ ಬಳಕೆ ಮಾಡಿ ಚೆಕ್ ಡ್ಯಾಂಗಳನ್ನು ಕಟ್ಟುವ ಮಹತ್ವದ ಕೆಲಸ ಮಾಡುತ್ತಿದ್ದೇವೆ ಎಂದು ಶಾಸಕ ಡಾ.ಸಿ.ಎಂ.ರಾಜೇಶ್‌ಗೌಡ ಹೇಳಿದರು.

ಶಿರಾ ತಾಲೂಕಿನ ಹುಲಿಕುಂಟೆ ಹೋಬಳಿಯ ಕೆ.ಕೆ.ಪಾಳ್ಯ ಗ್ರಾಮದಲ್ಲಿ 75 ಲಕ್ಷ ರೂಪಾಯಿ ವೆಚ್ಚದ ಚೆಕ್ ಡ್ಯಾಂ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ಬರದನಾಡು ಶಿರಾ ಎಂಬ ಭಾವನೆ ಜನತೆಯಿಂದ ದೂರವಾಗಿ ಸಂಮೃದ್ಧ ನಾಡು ಎಂಬ ಭಾವನೆ ಮೂಡಿಸುವ ಉದ್ದೇಶ ನಮ್ಮದಾಗಿದ್ದು ಮಳೆ ನೀರು ತಡೆದು ನಿಲ್ಲಿಸುವಂತ ಸಾರ್ಮರ್ಥ್ಯ ಚೆಕ್ ಡ್ಯಾಂಗಳಿಗಿದೆ, ಶಿರಾ ತಾಲೂಕಿನ 75 ಕೆರೆಗಳಿಗೆ ನೀರು ತುಂಬಿಸುವಂತ ನನ್ನ ಮಹತ್ವಕಾಂಕ್ಷೆಯ ಅಪ್ಪರ್ ಭದ್ರ ನೀರಾವರಿ ಯೋಜನೆಯ ಶಂಕುಸ್ಥಾಪನೆ ಶೀಘ್ರವೇ ನಡೆಯಲಿದ್ದು, 75 ಕೆರೆಗಳಿಗೆ ಪೈಪ್‌ಲೈನ್ ಮೂಲಕ ನೀರು ಹರಿಸಲು 1 ಸಾವಿರ ಕೋಟಿ ಅನುದಾನ ಮಂಜೂರಾಗಿದೆ ಎಂದರು.

ಚಂಗಾವರ ಗ್ರಾಪಂ ಸದಸ್ಯೆ ಶಾರದಮ್ಮ, ಮುಖಂಡರಾದ ಪ್ರಕಾಶ್‌ಗೌಡ, ರವಿಕುಮಾರ್, ಕೆಂಚೇಗೌಡ, ಮಾಜಿ ಗ್ರಾಪಂ ಸದಸ್ಯ ರಂಗಸ್ವಾಮಯ್ಯ, ರಾಜು, ತಿಪ್ಪೇಸ್ವಾಮಿ, ಸಿದ್ದೇಶಪ್ಪ, ಸಿದ್ದಪ್ಪ, ಅಭಿಯಂತರ ತೇಜಸ್‌ಸ್‌ ಇದ್ದರು.

Get real time updates directly on you device, subscribe now.

Comments are closed.

error: Content is protected !!