ಬಸ್ ನಲ್ಲಿ ಸೀಟಿಗಾಗಿ ಮಹಿಳೆಯರ ಬಡಿದಾಟ

3,486

Get real time updates directly on you device, subscribe now.


ತುಮಕೂರು: ಕೆಎಸ್ಆರ್ ಟಿಸಿ ಬಸ್ ನಲ್ಲಿ ಸೋಮವಾರ ಸೀಟ್ ಗಾಗಿ ಇಬ್ಬರು ಮಹಿಳೆಯರು ಪರಸ್ಪರ ಜುಟ್ಟು ಹಿಡಿದುಕೊಂಡು ಹೊಡೆದಾಡಿಕೊಂಡಿದ್ದಾರೆ. ಜಗಳದ ವೀಡಿಯೊ ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿದೆ. ನಗರದ ಕೆಎಸ್ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಬೆಂಗಳೂರಿನಿಂದ ಬೆಳಗಾವಿಗೆ ಹೊರಟಿದ್ದ ಬಸ್ ನಲ್ಲಿ ಜಗಳ ನಡೆದಿದೆ.

ಇಬ್ಬರ ಮಧ್ಯೆ ಜಗಳ ಬಿಡಿಸಲು ಹೋಗಿದ್ದ ಪುರುಷನ ಮೇಲೆ ಮಹಿಳೆಯೊಬ್ಬರು ಕೂಗಾಡಿದ್ದಾರೆ. ನೀನು ಯಾವನು ಹೇಳೋಕೆ ಎಂದೆಲ್ಲ ಬೈದಿರುವುದು ವೀಡಿಯೊದಲ್ಲಿ ಸೆರೆಯಾಗಿದೆ. ಜಗಳ ವಿಕೋಪಕ್ಕೆ ಹೋಗುವುದನ್ನು ಮನಗಂಡ ಬಸ್ ಚಾಲಕ ನೇರವಾಗಿ ಬಸ್ ಅನ್ನು ನಗರ ಠಾಣೆಗೆ ಕೊಂಡೊಯ್ದಿದ್ದಾರೆ. ಠಾಣೆಯಲ್ಲಿ ಇಬ್ಬರನ್ನು ವಿಚಾರಿಸಿ ಬುದ್ಧಿವಾದ ಹೇಳಿದ ಪೊಲೀಸರು ನಂತರ ವಾಪಸ್ ಕಳುಹಿಸಿದ್ದಾರೆ. ಯಾವುದೇ ಪ್ರಕರಣ ದಾಖಲಾಗಿಲ್ಲ.

Get real time updates directly on you device, subscribe now.

Comments are closed.

error: Content is protected !!