ಅರಣ್ಯಇಲಾಖೆ ಇಟ್ಟಿದ್ದ ಬೋನಿಗೆ ಬಿದ್ದ ಕರಡಿ

ನಿಟ್ಟುಸಿರು ಬಿಟ್ಟ ಗ್ರಾಮಸ್ಥರು- ಅಧಿಕಾರಿಗಳ ಕಾರ್ಯಕ್ಕೆ ರೈತರ ಮೆಚ್ಚುಗೆ

184

Get real time updates directly on you device, subscribe now.


ತುಮಕೂರು: ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ತೋವಿನಕೆರೆ ಹತ್ತಿರದ ದೊಡ್ಡೇಗೌಡನ ಪಾಳ್ಯದಲ್ಲಿ ಪದೇ ಪದೆ ಕಾಣಿಸಿಕೊಳ್ಳುತ್ತಿದ್ದ ಕರಡಿಯೊಂದು ಅರಣ್ಯಇಲಾಖೆ ಸಿಬ್ಬಂದಿ ಇಟ್ಟಿದ್ದ ಬೋನಿಗೆ ಬಿದ್ದಿದೆ.

ತಾಲ್ಲೂಕಿನ ಸಿ.ಎನ್.ದುರ್ಗಾ ಹೋಬಳಿ ತೋವಿನಕೆರೆ ಸಮೀಪದ ದೊಡ್ಡೇಗೌಡನ ಪಾಳ್ಯದ ರೈತರ ಜಮೀನನಲ್ಲಿ ಕಾಣಿಸಿಕೊಳ್ಳುತ್ತಿದ್ದ ಕರಡಿ ಬೆಳೆ ನಾಶ ಮಾಡುತ್ತಿತ್ತು. ಇದರಿಂದ ಬೇಸತ್ತಾ ಗ್ರಾಮಸ್ಥರು ಮತ್ತು ರೈತರು ಕರಡಿ ಹಿಡಿಯುವಂತೆ ಅರಣ್ಯ ಇಲಾಖೆಗೆ ಒತ್ತಾಯ ಮಾಡಿದ್ದರು. ಕೂಡಲೇ ಇಲಾಖೆಯ ಅಧಿಕಾರಿಗಳು ಗ್ರಾಮಸ್ಥರ ಒತ್ತಾಯದ ಮೇರೆಗೆ ಆಪರೇಷನ್ ಕರಡಿ ಕಾರ್ಯಾಚರಣೆ ಶುರು ಮಾಡಿ ಜಮೀನಿನ ಸೂಕ್ತ ಸ್ಥಳದಲ್ಲಿ ಬೋನ್ ಇಟ್ಟು ಅದರೊಳಗೆ ಹಲಸಿನ ಹಣ್ಣು ಮತ್ತು ಜೇನು ತುಪ್ಪ ಇಡಲಾಗಿತ್ತು.

ತಡರಾತ್ರಿ ಆಹಾರ ಹುಡುಕಿ ಬಂದ ಕರಡಿ ಅರಣ್ಯ ಇಲಾಖೆ ಸಿಬ್ಬಂದಿ ಇಟ್ಟಿದ್ದ ಬೋನಿಗೆ ಬಿದ್ದಿದೆ. ಬೆಳಗ್ಗೆ ಬೋನಿನಲ್ಲಿ ಸೆರೆಯಾಗಿದ್ದ ಕರಡಿ ಕಂಡು ಗ್ರಾಮಸ್ಥರು ನಿಟ್ಟಿಸಿರು ಬಿಟ್ಟರು. ಅರಣ್ಯಇಲಾಖೆಯ ಅಧಿಕಾರಿಗಳ ಕಾರ್ಯಕ್ಕೆ ಗ್ರಾಮಸ್ಥರು ಹಾಗೂ ರೈತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ವೇಳೆ ಅರಣ್ಯಇಲಾಖೆಯ ಅಧಿಕಾರಿ ಸುರೇಶ್ ಮಾತನಾಡಿ, ಕೊರಟಗೆರೆ ತಾಲ್ಲೂಕಿನ ತೋವಿನಕೆರೆ ಸಮೀಪದ ದೊಡ್ಡೇಗೌಡನ ಪಾಳ್ಯದಲ್ಲಿ ರೈತರ ಜಮೀನಿಗೆ ಕರಡಿ ಏಕಾಏಕಿ ದಾಳಿ ನಡೆಸಿ ಬೆಳೆ ನಾಶ ಮಾಡುತ್ತಿತ್ತು. ನಂತರ ಗ್ರಾಮಸ್ಥರು ಇಲಾಖೆಗೆ ತಿಳಿಸಿದ ಕೂಡಲೇ ಆಪರೇಷನ್ ಕಾರ್ಯಾಚರಣೆ ಆರಂಭಿಸಿ ಸೂಕ್ತ ಸ್ಥಳದಲ್ಲಿ ಬೋನ್ ಇಡಲಾಗಿತ್ತು, ಆಹಾರ ಹರಿಸಿ ಬಂದ ಕರಡಿ ಬೋನಿಗೆ ಬಿದ್ದಿದೆ, ಯಾವುದೇ ಆತಂಕ ಪಡದಂತೆ ರೈತರಿಗೆ ತಿಳಿಸಿ ಇಂತಹ ಸನ್ನಿವೇಶ ಮತ್ತೆ ಆರಂಭವಾದರೆ ಇಲಾಖೆಗೆ ಮಾಹಿತಿ ನೀಡುವಂತೆ ತಿಳಿಸಿದರು.

ಕೊರಟಗೆರೆ ತಾಲ್ಲೂಕಿನಲ್ಲಿ ಕರಡಿಗಳ ಸಂಖ್ಯೆ ಹೆಚ್ಚು ಕಂಡು ಬರುತ್ತಿದ್ದು, ಜಮೀನುಗಳಿಗೆ ಹೋಗುವ ರೈತರು ಮತ್ತು ಜಾನುವಾರುಗಳನ್ನು ಮೇಯಿಸಲು ಹೋಗುವವರು ಕರಡಿಗಳ ಬಗ್ಗೆ ಎಚ್ಚರ ವಹಿಸಬೇಕು. ಕರಡಿಗಳು ಕಂಡರೆ ಸುರಕ್ಷತೆ ಕ್ರಮ ವಹಿಸಬೇಕು. ಜೊತೆಗೆ ಯಾವುದೇ ಗಾಬರಿ ಮಾಡದೆ ಕರಡಿ ದಾಳಿ ಮಾಡದ ರೀತಿ ಇರಬೇಕು, ಕರಡಿ ಕಂಡೊಡನೆ ಅರಣ್ಯ ಇಲಾಖೆಗೆ ಮಾಹಿತಿ ನೀಡಬೇಕು ಎಂದು ರೈತರಿಗೆ ಮನವರಿಗೆ ಮಾಡಿದರು. ಈ ಸಂದರ್ಭದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ರೈತರು, ಗ್ರಾಮಸ್ಥರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!