ತುಮಕೂರು: ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ 4.25 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಶಾಸಕ ಡಿ.ಸಿ.ಗೌರಿಶಂಕರ್ ಚಾಲನೆ ನೀಡಿದರು.
ತುಮಕೂರು ಗ್ರಾಮಾಂತರ ವಡ್ಡರಹಳ್ಳಿ, ಒಳಕಲ್ಲು, ವೀರ ನಾಯಕನಹಳ್ಳಿ, ಮಸ್ಕಲ್, ಸಿದ್ದಣ್ಣನ ಪಾಳ್ಯ, ಶಾಂತಪುರ, ದೊಡ್ಡ ಗೊಲ್ಲಳ್ಳಿ, ತಿಮ್ಮೇಗೌಡನ ಪಾಳ್ಯ, ಮಲ್ಲಸಂದ್ರ ಪಾಳ್ಯ, ಹಾಗೂ ರಂಗಯ್ಯನಪಾಳ್ಯ ಗ್ರಾಮಗಳಲ್ಲಿ ಸಿಸಿ ರಸ್ತೆ, ಚರಂಡಿ ಹಾಗೂ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಕಾಮಗಾರಿ ಚಾಲನೆ ನೀಡಿ ಮಾತನಾಡಿ, ಗ್ರಾಮಾಂತರ ವಿಧಾನಸಭಾ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿಸಲು ರಾಜಕೀಯ ಬದಿಗಿಟ್ಟು ಕ್ಷೇತ್ರದ ಜನರ ಪರವಾಗಿ ಕಾರ್ಯ ನಿರ್ವಹಿಸಬೇಕಿರುವುದು ಅವಶ್ಯಕವಾಗಿದ್ದು, ರಾಜಕೀಯ ಕಾರಣಗಳಿಗಾಗಿ ಕಾಲೆಳೆಯುವ ಕೆಲಸ ಬಿಟ್ಟು ಪಕ್ಷಾತೀತವಾಗಿ ಅಭಿವೃದ್ಧಿಗೆ ಸಹಕರಿಸುವಂತೆ ಮನವಿ ಮಾಡಿದರು.
ಗ್ರಾಮಾಂತರ ಕ್ಷೇತ್ರದ ಕೆರೆಗಳಿಗೆ ನೀರು ಹರಿಸುವ ಮೂಲಕ ನೀರಾವರಿಗೆ ಒತ್ತು ನೀಡಲಾಗಿದ್ದು, ಹೆಬ್ಬೂರು ಭಾಗಕ್ಕೆ ವೃಷಭಾವತಿ ಹಾಗೂ ಬೆಳ್ಳಾವಿ ಭಾಗದ ಕೆರೆಗಳಿಗೆ ಎತ್ತಿನಹೊಳೆ, ಹೇಮಾವತಿ ನೀರು ಹರಿಸುವ ಮೂಲಕ ಸಮಗ್ರವಾಗಿ ಕೆರೆಗಳಿಗೆ ನೀರು ಹರಿಸಲು ಕ್ರಮ ವಹಿಸಲಾಗಿದ್ದು, ಮುಂದಿನ ವರ್ಷದಿಂದಲೇ ಗ್ರಾಮಾಂತರ ಕ್ಷೇತ್ರಕ್ಕೆ ಆಗಿರುವ ಅನ್ಯಾಯ ಸರಿಪಡಿಸಲಾಗುತ್ತಿದೆ ಎಂದು ಹೇಳಿದರು.
ತುಮಕೂರು ಗ್ರಾಮಾಂತರದ ಗೂಳರಿವೆ, ಮಲ್ಲಸಂದ್ರ ಪಾಳ್ಯ, ಚಿಕ್ಕನಾರವಂಗಲ, ಅಗಳಕೋಟೆಯಲ್ಲಿ 1.21 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗಿರುವ ಶಾಲಾ ಕೊಠಡಿಗಳನ್ನು ಉದ್ಘಾಟಿಸಲಾಯಿತು. ಗೊಳರಿವೆ ಗ್ರಾಮದಲ್ಲಿ 44 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಿರುವ ಸುಸಜ್ಜಿತ ನೂತನ ಶಾಲಾ ಕಟ್ಟಡದ ಉದ್ಘಾಟಿಸಲಾಯಿತು.
ಮಲ್ಲಸಂದ್ರ ಪಾಳ್ಯದಲ್ಲಿ ಸುಮಾರು 33 ಲಕ್ಷ ವೆಚ್ಚದಲ್ಲಿ ಹಾಗೂ ಚಿಕ್ಕ ನಾರವಂಗಲ ಗ್ರಾಮದಲ್ಲಿ ಸುಮಾರು 22 ಲಕ್ಷ ವೆಚ್ಚದಲ್ಲಿ ಹಾಗೂ ಅಗಳಕೋಟೆ ಗ್ರಾಮದಲ್ಲಿ ಸುಮಾರು 22 ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶಾಲಾ ಕಟ್ಟಡಗಳ ಉದ್ಘಾಟನೆ ನೆರವೇರಿಸಿ ಮಾತನಾಡಿ, ಗ್ರಾಮಾಂತರ ಕ್ಷೇತ್ರದಲ್ಲಿ ಶಿಕ್ಷಣಕ್ಕೆ ಒತ್ತು ನೀಡಲಾಗಿದ್ದು, ಖಾಸಗಿ ಶಾಲೆಗಳಿಗೆ ಕಮ್ಮಿ ಇಲ್ಲದಂತೆ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಹೇಳಿದರು.
ಈ ವೇಳೆ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ರಾಮಚಂದ್ರಯ್ಯ, ಹೆಗ್ಗೆರೆ ಆಜಂ, ಜಯಂತ್‌ಗೌಡ, ಪಾಲಿಕೆ ಮಾಜಿ ಸದಸ್ಯ ವೆಂಕಟೇಶ್‌ಗೌಡ ಇತರರು ಇದ್ದರು.
Comments are closed.