ದೇಶಕ್ಕೆ ಸೈನಿಕರ ಕೊಡುಗೆ ಅಪಾರ: ರಾಜೇಂದ್ರ

154

Get real time updates directly on you device, subscribe now.


ತುಮಕೂರು: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ತುಮಕೂರು ವತಿಯಿಂದ ನಗರದ ಆರ್ಯ ಭಾರತಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ 24ನೇ ಕಾರ್ಗಿಲ್ ವಿಜಯ್ ದಿವಸ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಆರ್ಯಭಾರತಿ ಕಾಲೇಜಿನ ಪ್ರಾಂಶುಪಾಲ ರಾಜೇಂದ್ರ ಮಾತನಾಡಿ, ಕಾರ್ಗಿಲ್ ಯುದ್ಧದಲ್ಲಿ ಸೈನಿಕರ ದೇಶ ಪ್ರೇಮದಿಂದಾಗಿ ಭಾರತ ವಿಜಯವಾಯಿತು ನಿಜ, ಆದರೆ 520ಕ್ಕೂ ಹೆಚ್ಚು ಸೈನಿಕರ ಬಲಿದಾನವಾಯಿತು ಮತ್ತು 1300 ಕ್ಕೂ ಹೆಚ್ಚು ಸೈನಿಕರ ಅಪಾಂಗರಾದರು ದೇಶಕ್ಕಾಗಿ ಸರ್ವಸ್ವವನ್ನು ಅರ್ಪಿಸಿದ ಅವರ ಆದರ್ಶ ನಮ್ಮ ಬದುಕಿನ ಬೆಳಕಾಗಬೇಕು. ಅವರ ತೇಜಸ್ವಿ ಜೀವನ ನಮಗೆ ಪ್ರೇರಣೆಯಾಗಿಬೇಕು. ಜುಲೈ 26 ಕಾರ್ಗಿಲ್ ವಿಜಯ್ ದಿವಸ್ ಸೈನಿಕರ ಬದುಕಿನ ಅದರ್ಶದ ಅಡಿಗಲ್ಲಿನ ಮೇಲೆ ಭಾರತದ ಭವಿಷ್ಯ ನಿರ್ಮಿಸಲು ಪ್ರತಿಜ್ಞೆಗೈಯಲು ಶುಭದಿನವಿದು, ನಮ್ಮ ಸುಂದರ ನಾಳೆಗಳಿಗಾಗಿ ನಮ್ಮ ಇಂದಿನ ಬಲಿ ಕೊಡುವ ಎಲ್ಲಾ ಸೈನಿಕರನ್ನು ಸ್ಮರಿಸೋಣ ಹಾಗೂ ಅವರೆಲ್ಲರ ಸುಂದರ ಬದುಕಿಗಾಗಿ ಪ್ರಾರ್ಥನೆ ಮಾಡೋಣ ಎಂದು ತಿಳಿಸಿದರು.

ನಿವೃತ್ತ ಸೈನಿಕ ನಂಜುಂಡಪ್ಪ ಮಾತನಾಡಿ ಕಾರ್ಗಿಲ್ ಯುದ್ಧ ಭೂಮಿಯಲ್ಲಿ ಭಾರತ ಪಾಕಿಸ್ತಾನವನ್ನು ಬಗ್ಗುಬಡಿದ ದಿಗ್ವಿಜಯ ಸಾಧಿಸಿದ ಇಂದಿಗೆ ಬರೋಬ್ಬರಿ 24 ವರ್ಷವಾಯಿತು. ಮನೆ, ಕುಟುಂಬ ಸದಸ್ಯರಿಂದ ದೂರವಾಗಿದ್ದುಕೊಂಡು ದೇಶ ರಕ್ಷಣೆಗೆ ಲಕ್ಷಾಂತರ ಯೋಧರ ಗಡಿಯಲ್ಲಿ ಕೆಲಸ ಮಾಡುತ್ತಾರೆ. ಅವರ ಸೇವೆ ತ್ಯಾಗವನ್ನು ಸದಾ ಸ್ಪಂದಿಸುವ ಕೆಲಸವಾಗಬೇಕು, ಸಾಧ್ಯವಾದರೆ ನಿಮ್ಮ ಮಕ್ಕಳನ್ನು ಸೇನೆಗೆ ಶೆರಿಸಿ ದೇಶ ಸೇವೆಗೆ ಕಳುಹಿಸಬೇಕು. ಭಾರತೀಯ ಸೈನ್ಯದಲ್ಲಿ ಕೆಲಸ ಮಾಡುವ ಪುಣ್ಯ ನನಗೆ ಸಿಕ್ಕಿತು, ಪ್ರಾಣವನ್ನೇ ಕೊಟ್ಟು ಸಾವಿರಾರು ಯೋಧರಿಗೆ ದೇಶವಾಸಿಗಳು ಋಣಿಯಾಗಿರಬೇಕು ಎಂದರು.
ಎಬಿವಿಪಿ ನಗರಾಧ್ಯಕ್ಷ ಡಾ.ಶ್ರೀನಿವಾಸ್ ಮಾತನಾಡಿ, ದೇಶ ಕಾಯಲು ಯೋಧರಿದ್ದಾರೆ. ಆದರೆ ದೇಶದೊಳಗಿನ ಆಂತರಿಕ ಶತ್ರುಗಳನ್ನು ಅಥವಾ ವಿಶ್ವಾಸಘಾತುಕರನ್ನು ಸದೆಬಡಿಯಲು ಪ್ರತಿಯೊಬ್ಬ ವಿದ್ಯಾರ್ಥಿಯೂ ಸೈನಿಕರಾಗಿ ಪ್ರಶ್ನಿಸುವ ಮನೋಭಾವ ಬೆಳೆಸಿಕೊಂಡು ದೇಶವನ್ನು ಬಲಪಡಿಸಬೇಕೆಂದರು.

ಕಾರ್ಗಿಲ್ ವಿಜಯ್ ದಿವಸ್ ನಿಮಿತ್ತವಾಗಿ ನಿವೃತ್ತ ಯೋಧರಾದ ನಂಜುಂಡಪ್ಪ, ಅಶ್ವಥ್ ನಾರಾಯಣ್, ರಾಮಣ್ಣ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ತುಮಕೂರು ಎಬಿವಿಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಅಪ್ಪು ಪಾಟೀಲ್, ಕಾರ್ಯಕರ್ತರಾದ ಹರ್ಷವರ್ದನ್, ತೇಜಸ್, ನವ್ಯಶ್ರೀ, ಕೀರ್ತನ, ದೀಪಕ್, ಕಾಲೇಜಿನ ಉಪನ್ಯಾಸಕ ಆದರ್ಶ್ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!