ಪುರಸಭೆ ಹಾಲಿ, ಮಾಜಿ ಸದಸ್ಯರ ನಡುವೆ ವಾಗ್ವಾದ

ಚರಂಡಿ ಒತ್ತುವರಿ ಮಾಡಿಕೊಂಡು ಮನೆ ನಿರ್ಮಾಣ ಆರೋಪ

430

Get real time updates directly on you device, subscribe now.


ಕುಣಿಗಲ್: ಸಾರ್ವಜನಿಕ ಚರಂಡಿ ಒತ್ತುವರಿ ಮಾಡಿಕೊಂಡು ಪುರಸಭೆಯ ಹಾಲಿ ಸದಸ್ಯ ಅಧಿಕಾರ ದುರ್ಬಳಕೆ ಮಾಡಿಕೊಂಡು ಮನೆ ನಿರ್ಮಿಸುತ್ತಿರುವ ಬಗ್ಗೆ ಸಾರ್ವಜನಿಕರು ದೂರು ನೀಡಿದ್ದು, ಪರಿಶೀಲನೆಗೆ ಸ್ಥಳಕ್ಕಾಗಮಿಸಿದ ಪುರಸಭೆ ಅಧಿಕಾರಿಗಳ ಮುಂದೆಯೆ ಪುರಸಭೆ ಹಾಲಿ, ಮಾಜಿ ಸದಸ್ಯರು ವಾಗ್ವಾದಕ್ಕೆ ಇಳಿದ ಘಟನೆ ಗುರುವಾರ ನಡೆಯಿತು.

ಪುರಸಭೆಯ 18ನೇ ವಾರ್ಡ್ ನ ಹೌಸಿಂಗ್ ಬೋರ್ಡ್ ಮುಖ್ಯರಸ್ತೆಗೆ ಹೊಂದಿಕೊಂಡಂತೆ ವಾರ್ಡ್ ಸದಸ್ಯ ಶ್ರೀನಿವಾಸ್, ಪುರಸಭೆ ಸಾರ್ವಜನಿಕ ಹಣದಿಂದ ನಿರ್ಮಿಸಲಾಗಿದ್ದ ಚರಂಡಿ ಅತಿಕ್ರಮಿಸಿ ಮನೆ ನಿರ್ಮಾಣ ಮಾಡುತ್ತಿದ್ದುದರ ಬಗ್ಗೆ ವಾರ್ಡ್ ನ ಸಾರ್ವಜನಿಕರು ದೂರು ನೀಡಿದ್ದರ ಮೇರೆಗೆ ಪುರಸಭೆ ಮುಖ್ಯಾಧಿಕಾರಿ ಶಿವಪ್ರಸಾದ್ ಸಿಬ್ಬಂದಿ ಪೊಲೀಸರೊಂದಿಗೆ ಸ್ಥಳಕ್ಕೆ ಆಗಮಿಸಿದರು.

18ನೇ ವಾರ್ಡ್ ಮಾಜಿ ಸದಸ್ಯ ಪಾಪಣ್ಣ ಅ. ಕೆಂಪಣ್ಣ ಸಹ ಆಗಮಿಸಿ, ಚರಂಡಿಯು ಪುರಸಭೆಯಿಂದ ನಿರ್ಮಿಸಲಾಗಿದೆ. ಹಾಲಿ ಸದಸ್ಯರು ಅಧಿಕಾರ ಇದೆ ಎಂದು ದುರ್ಬಳಕೆ ಮಾಡಿಕೊಂಡು ಚರಂಡಿ ಅತಿಕ್ರಮಿಸುತ್ತಿದ್ದು ತೆರವುಗೊಳಿಸುವಂತೆ ಆಗ್ರಹಿಸಿ, ತಮ್ಮ ಅಧಿಕಾರವಧಿಯಲ್ಲಿ ಯಾವುದೇ ಅತಿಕ್ರಮಣ ಮಾಡಿಲ್ಲ. ಆದರೆ ಈ ಸದಸ್ಯರು ಅತಿಕ್ರಮಣ ಮಾಡುತ್ತಿರುವ ಬಗ್ಗೆ ಸಾರ್ವಜನಿಕರು ಆರೋಪ ಮಾಡುತ್ತಿದ್ದಾರೆ. ತೆರವುಗೊಳಿಸುವಂತೆ ಪಟ್ಟು ಹಿಡಿದರು.

ಇದಕ್ಕೆ ಆಕ್ಷೇಪಿಸಿಸ ಸದಸ್ಯ ಶ್ರೀನಿವಾಸ್, ತಮ್ಮ ನಿವೇಶನದಲ್ಲಿ ತಾವು ಮನೆ ನಿರ್ಮಿಸುತ್ತಿದ್ದು ತಮ್ಮ ನಿವೇಶನ ಅತಿಕ್ರಮಿಸಿ ಚರಂಡಿ ನಿರ್ಮಿಸಲಾಗಿದೆ. ಮುಖ್ಯರಸ್ತೆಯು 60 ಅಡಿ ಅಳತೆ ಇದ್ದು, ತಮ್ಮಿಂದ ಚರಂಡಿ ಅತಿಕ್ರಮಿಸಲಾಗಿಲ್ಲ. ಬದಲಿಗೆ ನಮ್ಮ ನಿವೇಶನದಲ್ಲಿ ಹಿಂದೆ ಚರಂಡಿ ನಿರ್ಮಿಸಲಾಗಿದೆ ಎಂದು ಆಕ್ಷೇಪಿಸಿ ಚರ್ಚೆಗೆ ಇಳಿದರು. ಹಾಲಿ ಸದಸ್ಯರು ಜೆಡಿಎಸ್ ಬೆಂಬಲಿತರಾದ್ದರಿಂದ ತಾಲೂಕು ಜೆಡಿಎಸ್ ಅಧ್ಯಕ್ಷ ಜಗದೀಶ್, ಪುರಸಭೆ ಮಾಜಿ ಅಧ್ಯಕ್ಷ ಕೆ.ಎಲ್.ಹರೀಶ್ ಸೇರಿದಂತೆ ಇತರರು ಆಗಮಿಸಿದರು, ಮಾಜಿ ಸದಸ್ಯ ಪಾಪಣ್ಣ ಅ. ಕೆಂಪಣ್ಣ ಕಾಂಗ್ರೆಸ್ ಬೆಂಬಲಿತರಾದ್ದರಿಂದ ಕಾಂಗ್ರೆಸ್ ಪುರಸಭೆ ಸದಸ್ಯರು, ಮುಖಂಡರು ಮಾಜಿ ಸದಸ್ಯರ ಬೆಂಬಲಕ್ಕೆ ಆಗಮಿಸಿದರು. ಕೆಲಕಾಲ ವಾದ ವಿವಾದ ನಡೆದು ಮುಖ್ಯಾಧಿಕಾರಿ ಶಿವಪ್ರಸಾದ್ ಈ ನಿಟ್ಟಿನಲ್ಲಿ ಪರಿಶೀಲಿಸಿ ಮುಂದೆ ಕ್ರಮಕ್ಕೆ ಸದಸ್ಯರೆ ಜವಾಬ್ದಾರಿಯಾಗಿ ಕ್ರಮ ಕೈಗೊಳ್ಳುವಂತೆ ಸೂಚಿಸಿದ ಮೇರೆಗೆ ಪರಿಸ್ಥಿತಿ ತಿಳಿಗೊಂಡಿತು.

Get real time updates directly on you device, subscribe now.

Comments are closed.

error: Content is protected !!