ತುಮಕೂರು: ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಗೃಹ ಲಕ್ಷ್ಮಿ ಯೋಜನೆ ಜಾರಿಯಾಗಿದ್ದು, ಫಲಾನುಭವಿಗಳು ಯೋಜನೆಯ ಲಾಭ ಪಡೆಯಲು ರಾಜ್ಯಾದ್ಯಂತ ಈಗಾಗಲೇ ಅರ್ಜಿ ಸಲ್ಲಿಸುತ್ತಿದ್ದಾರೆ. ತುಮಕೂರು ಜಿಲ್ಲೆಯಲ್ಲೂ ಅರ್ಜಿ ಸಲ್ಲಿಕೆ ಭರ್ಜರಿಯಾಗಿ ಸಾಗಿದ್ದು, ಅರ್ಜಿ ಸಲ್ಲಿಕೆಯಲ್ಲಿ ತುಮಕೂರು ಜಿಲ್ಲೆ ರಾಜ್ಯದಲ್ಲೇ ಎರಡನೇ ಸ್ಥಾನದಲ್ಲಿದೆ.
ಗೃಹ ಲಕ್ಷ್ಮೀ ಯೋಜನೆ ನೊಂದಣಿ ಫಲನುಭವಿಗಳ ಸಂಖ್ಯೆ ರಾಜ್ಯದಲ್ಲಿ ತುಮಕೂರು ಜಿಲ್ಲೆ ಎರಡನೇ ಸ್ಥಾನ ಬಂದಿರುವ ಬಗ್ಗೆ ತುಮಕೂರು ಜಿಲ್ಲಾಧಿಕಾರಿ ಕೆ.ಶ್ರೀ ನಿವಾಸ್ ಸಂತಸ ವ್ಯಕ್ತಪಡಿಸಿದ್ದಾರೆ.
ತುಮಕೂರು ಜಿಲ್ಲೆ ರಾಜ್ಯದಲ್ಲಿ ಎರಡನೇ ಸ್ಥಾನ ಬಂದಿರುವುದು ಸಂತೋಷದ ವಿಷಯ, ತುಮಕೂರು ಜಿಲ್ಲೆಯಲ್ಲಿ ಒಟ್ಟು ಫಲಾನುಭವಿಗಳ ಸಂಖ್ಯೆ 6,39,659 ಇದ್ದು, ಜಿಲ್ಲೆಯಲ್ಲಿ ಈಗಾಗಲೇ 4 ಲಕ್ಷ ಜನ ಫಲಾನುಭವಿಗಳು ನೋಂದಣಿ ಮಾಡಿದ್ದಾರೆ,ನಾವೇ ಫೀಲ್ಡ್ ಗಿಳಿದು ಕೆಲಸ ಮಾಡಿದ್ದರಿಂದ ರಾಜ್ಯದಲ್ಲಿ ಎರಡನೇ ಸ್ಥಾನ ಬರಲು ಸಹಕಾರಿ ಆಯ್ತು ಎಂದು ತಿಳಿಸಿದ್ದಾರೆ.
ಎಲ್ಲಾ ಅಧಿಕಾರಿಗಳ ಶ್ರಮದಿಂದ ಈ ಸಾಧನೆ ಸಾಧ್ಯವಾಗಿದೆ. ಸರ್ಕಾರದ ಗ್ಯಾರಂಟಿಗಳ ವಿಚಾರವಾಗಿ ಪ್ರತಿ ನಿತ್ಯ ಅಧಿಕಾರಿಗಳ ಜೊತೆ ನಿರಂತರವಾಗಿ ಸಭೆ ನಡೆಸುತ್ತಿದ್ದೇನೆ. ಈ ಯಶಸ್ಸಿನಲ್ಲಿ ಅಂಗವಾಡಿ ಕಾರ್ಯಕರ್ತ ಶ್ರಮ ಹೆಚ್ಚಿದೆ. ಜಿಲ್ಲೆಯ ಜನರೂ ಕೂಡ ಅಷ್ಟೆ ಸಹಕಾರ ನೀಡಿದ್ದಾರೆ ಎಂದರು.
ಇನ್ನು ಕೇವಲ 2,39,639 ಜನ ಫಲಾನುಭವಿಗಳು ಮಾತ್ರ ಅರ್ಜಿ ಸಲ್ಲಿಸಲು ಬಾಕಿ ಇದ್ದು ಇನ್ನೊಂದು ವಾರದಲ್ಲಿ ಕಂಪ್ಲೀಟ್ ಮಾಡ್ತೀವಿ, ಯಾವುದೇ ಕೇಂದ್ರದಲ್ಲಿ ಹಣ ಪಡೆದರೆ ಕೂಡಲೇ ಕ್ರಮ ಕೈಗೊಂಡು ಲಾಗಿನ್ ಕ್ಯಾನ್ಸಲ್ ಮಾಡಲಾಗುತ್ತದೆ. ಜನರು ಯಾರಿಗೂ ಕೂಡ ಹಣ ಕೊಡುವ ಅವಶ್ಯಕತೆ ಇಲ್ಲ, ಸರ್ಕಾರದ ಯೋಜನೆಯನ್ನು ಜನರು ಸದುಪಯೋಗ ಪಡೆದುಕೊಳ್ಳಲಿ ಎಂದರು.
731 ಕೇಂದ್ರಗಳು ಜಿಲ್ಲೆಯಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿವೆ. ತುಮಕೂರು ಜಿಲ್ಲೆಯಲ್ಲಿ ಯಾವುದೇ ಟಿಕ್ನಿಕಲ್ ಪ್ರಾಬ್ಲಂ ಆಗಿಲ್ಲ, ಸರ್ಕಾರದ ಸವಲತ್ತು ಹೆಚ್ಚಿನ ರೀತಿ ಬಳಸಿಕೊಂಡು ಆರ್ಥಿಕವಾಗಿ ಸಧೃಡರಾಗಬೇಕೆಂದು ತುಮಕೂರು ಡಿ.ಸಿ.ಶ್ರೀನಿವಾಸ್ ಕರೆ ನೀಡಿದ್ದಾರೆ.
ಒಟ್ಟಾರೆ ಸರ್ಕಾರದ ಗೃಹಲಕ್ಷಿ ಯೋಜನೆಯ ಫಲ ಪಡೆಯಲು ಫಲಾನುಭವಿಗಳು ಉತ್ಸಾಹದಿಂದ ಅರ್ಜಿ ಸಲ್ಲಿಸಿರುವುದು ಮೆಚ್ಚುವ ವಿಚಾರ.
Comments are closed.