ಪುರಸಭೆ ಸಿಬ್ಬಂದಿಯ ಅಧ್ವಾನ ಕಾರ್ಯ- ತಪ್ಪಿದ ಅನಾಹುತ

497

Get real time updates directly on you device, subscribe now.


ಕುಣಿಗಲ್: ಪುರಸಭೆ ಸಿಬ್ಬಂದಿ ಬೆಸ್ಕಾಂ, ದೂರವಾಣಿ ಇಲಾಖೆಗೆ ಯಾವುದೆ ಮಾಹಿತಿ ನೀಡದೆ ರಸ್ತೆ ಬದಿ ಜೆಸಿಬಿ ಬಳಸಿ ಅಗೆದ ಪರಿಣಾಮ ಪಟ್ಟಣದಲ್ಲಿ ಕೆಲಕಾಲ ವಿದ್ಯುತ್ ವ್ಯತ್ಯಯವಾಯಿತಲ್ಲದೆ, ವಿದ್ಯುತ್ ಅಘಾತದಿಂದ ಪುರಸಭೆ ಸಿಬ್ಬಂದಿ ಕ್ಷಣಮಾತ್ರದಲ್ಲಿ ಬಚಾವಾದ ಘಟನೆ ಶನಿವಾರ ನಡೆದಿದೆ.

ಪುರಸಭೆ ಕಟ್ಟಡದ ಶೌಚಾಲಯ ತ್ಯಾಜ್ಯ ವಿಲೆಗೆ ಕಟ್ಟಡ ನಿರ್ಮಾಣ ಸಮಯದಿ ಸಮರ್ಪಕ ವ್ಯವಸ್ಥೆ ಮಾಡಿಲ್ಲ ಎನ್ನಲಾಗಿದೆ. ತ್ಯಾಜ್ಯವನ್ನು ಪುರಸಭೆ ಮುಂಭಾಗದ ಚರಂಡಿಗೆ ಬಿಡಲಾಗಿದ್ದು, ತ್ಯಾಜ್ಯ ಹರಿಯಲು ಅಡಚಣೆಯಾಗಿ ಪುರಸಭೆ ಮುಂಭಾಗವೆ ತ್ಯಾಜ್ಯ ಉಕ್ಕಿ ರಸ್ತೆಗೆ ಹರಿಯುತ್ತಿದ್ದು ಕಚೇರಿಗೆ ಬರುವವರು ತುಳಿದುಕೊಂಡು ಬರುವಂತಾಗಿತ್ತು. ಶನಿವಾರ ಕಚೇರಿಗೆ ರಜೆ ಇದ್ದ ಕಾರಣ ದುರಸ್ತಿಗಾಗಿ ಪುರಸಭೆ ಸಿಬ್ಬಂದಿ ಜೆಸಿಬಿ ಬಳಸಿ ಅಗೆಯಲು ಮುಂದಾದರು. ಈ ಜಾಗದಲ್ಲಿ ಬೆಸ್ಕಾಂ 11 ಕೆವಿ ಲೈನ್ ಹಾಗೂ ದೂರವಾಣಿ ಒಎಫ್ ಸಿ ಕೇಬಲ್ ಇದ್ದು ಜೆಸಿಬಿ ಅಗೆತಕ್ಕೆ ತುಂಡಾಗಿ ವಿದ್ಯುತ್ ಕೇಬಲ್ನಿಂದ ಕಿಡಿ ಸಿಡಿದಿದ್ದು ಸಿಬ್ಬಂದಿ ಅದೃಷ್ಟವಶಾತ್ ಬಚಾವಾದರು.

ವಿದ್ಯುತ್ ತಂತಿ ತುಂಡಾದ್ದರಿಂದ ಪಟ್ಟಣದ ಬಹುತೇಕ ಭಾಗದಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಯಿತು. ಬೆಸ್ಕಾಂ ಸಿಬ್ಬಂದಿ ಕೇಬಲ್ ದುರಸ್ತಿಗೊಳಿಸಿದ ನಂತರ ಮಧ್ಯಾಹ್ನದ ವೇಳೆಗೆ ವಿದ್ಯುತ್ ಸರಬರಾಜು ಎಂದಿನಂತಾಯಿತು.

ಬೆಸ್ಕಾಂ ಕೇಬಲ್ ಹಾನಿಗೆ ಸಂಬಂಧಿಸಿದಂತೆ ಬೆಸ್ಕಾಂ ಅಧಿಕಾರಿಗಳು ಪುರಸಭಾಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!