ತುಮಕೂರು: ಕೊರೊನಾ ಸೋಂಕು ಹರಡುವುದು ಹೆಚ್ಚುತ್ತಲೇ ಇದ್ದು, ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವವರ ಸಂಖ್ಯೆಯಲ್ಲೂ ಏರಿಕೆಯಾಗಿದೆ. ಮಂಗಳವಾರದವರೆಗೆ 1225 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಂದೇ ದಿನದಲ್ಲಿ 151 ಮಂದಿಗೆ ಸೋಂಕು ದೃಢಪಟ್ಟಿದ್ದು, ಈವರೆಗೆ 26,543ಜನರಿಗೆ ಸೋಂಕು ತಗುಲಿದೆ. ತುಮಕೂರು ನಗರದಲ್ಲಿ ಅತಿ ಹೆಚ್ಚು 65 ಮಂದಿಗೆ ಸೋಂಕು ತಗುಲಿದೆ. ಚಿನಾಹಳ್ಳಿ 9, ಗುಬ್ಬಿ 9, ಕೊರಟಗೆರೆ 14, ಕುಣಿಗಲ್ 4, ಮಧುಗಿರಿ 11, ಪಾವಗಡ 7, ಶಿರಾ 20, ತಿಪಟೂರು 7, ತುರುವೇಕೆರೆಯಲ್ಲಿ 5 ಪ್ರಕರಣ ದಾಖಲಾಗಿದೆ.
ಇಂದು ಕೋವಿಡ್ ಸೋಂಕಿನಿಂದ ಯಾವುದೇ ಸಾವು ಸಂಭವಿಸಿಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ.
Comments are closed.