ತುಮಕೂರು: ಜಿಲ್ಲೆಯ ಬೆಳ್ಳಾವಿ ಹೋಬಳಿಯ ಮಲ್ಲೇನಹಳ್ಳಿ ಸಮೀಪದ ಗೊಲ್ಲರಹಟ್ಟಿಯಲ್ಲಿ ಮೌಢ್ಯಚಾರಣೆ ಕಾರಣದಿಂದ ಬಾಣಂತಿ ಮತ್ತು ಹಸುಗೂಸನ್ನು ಮನೆಯಿಂದ ಹೊರಗಿಟ್ಟು ಮಗು ಸಾವನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಪತಿ ಹಾಗೂ ಆಕೆಯ ತಂದೆ ವಿರುದ್ದ ಕರ್ನಾಟಕ ಅಮಾನವೀಯ ದುಷ್ಟ ಪದ್ಧತಿಗಳು ಹಾಗೂ ವಾಮಾಚಾರ ಇವುಗಳ ಪ್ರತಿಬಂಧ ಮತ್ತು ನಿರ್ಮೂಲನೆ ಕಾಯಿದೆ – 2017 ಹಾಗೂ ಐಪಿಸಿ ಅಧಿನಿಯಮ 304, 34ರಡಿ ಕೋರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಮಲ್ಲೇನಹಳ್ಳಿ ಗ್ರಾಮದ ಹೊರಗಿನ ಜಮೀನಿನಲ್ಲಿ ತಾತ್ಕಾಲಿಕ ಗುಡಿಸಲಿನಲ್ಲಿಟ್ಟ ಕಾರಣ ಸೂಕ್ತ ಆರೈಕೆ ಸಿಗದೆ ಜು.23 ರಂದು ಮಗು ಮೃತಪಟ್ಟಿತ್ತು. ಈ ಪ್ರಕರಣದ ರಾಜ್ಯಾದ್ಯಂತ ಟೀಕೆ ಚರ್ಚೆಗೊಳಗಾಗಿದ್ದು, ಮಗು ಸಾವಿನ ಘಟನೆಗೆ ಪತಿ ಸಿದ್ದೇಶ್ ಹಾಗೂ ಆಕೆಯ ತಂದೆ ಚಿಕ್ಕಹುಲಿಗೆಪ್ಪ ಕಾರಣವೆಂದು ತುಮಕೂರು ಗ್ರಾಮಾಂತರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿಯ ಮಹಿಳಾ ಮೇಲ್ವಿಚಾರಕಿ ರಾಜೇಶ್ವರಿ ಅವರು ಗೊಲ್ಲರಹಟ್ಟಿಯಲ್ಲಿ ಜು.27ರಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.
ಈ ಸಂಬಂಧ ಪ್ರಕರಣ ದಾಖಲಿಸುವಂತೆ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ.ನೂರುನ್ನೀಸಾ ರವರ ಸೂಚನೆ ಬಳಿಕ ಪ್ರಕರಣ ಸಂಬಂಧ ಎಫ್ಐಆರ್ ದಾಖಲಾಗಿದೆ.
ಈ ಸಂದರ್ಭದಲ್ಲಿ ಗೊಲ್ಲರ ಸಮುದಾಯದ ರಾಜ್ಯ ಅದ್ಯಕ್ಷರು, ಜಿಲ್ಲಾ ಅಧ್ಯಕ್ಷ, ಸಮುದಾಯದ ಚಲನ ಚಿತ್ರ ಸಂಗೀತಗಾರ ಮೋಹನ್, ತಹಶೀಲ್ದಾರ್, ಸ್ಥಳೀಯ ಜನ ಪ್ರತಿನಿಧಿಗಳು, ಪಂಚಾಯತ್ ಸದಸ್ಯರು ಹಾಗೂ ಊರಿನ ಮುಖಂಡರು , ಮತ್ತಿತರರು ಹಾಜರಿದ್ದರು.
ಮೌಢ್ಯಚಾರಣೆಗೆ ಮುಂದಾದ್ರೆ ಶಿಕ್ಷೆ ಖಚಿತ..
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ.ನೂರುನ್ನೀಸಾ ಅವರು ಸಾರ್ವಜನಿಕರಲ್ಲಿ ಕಾನೂನು ಅರಿವು ಮೂಲಕ ನಾಗರೀಕರಣ ಅಭಿಯಾನ ನಡೆಸೆ ಗ್ರಾಮಸ್ಥರಲ್ಲಿ ಅರಿವು ಮೂಡಿಸಿದರು. ತಂಬಾಗನ್ನ ಹಟ್ಟಿಯ ಮನೆಗಳಿಗೆ ಭೇಟಿ ನೀಡಿ ಬಾಣಂತಿ ಹಾಗೂ ಹಸುಗೂಸು ಮನೆಯ ಪ್ರತ್ಯೇಕ ಕೊಠಡಿಯಲ್ಲಿರುವುದು ಕಂಡು ಮಾತನಾಡಿಸಿ, ಹರ್ಷ ವ್ಯಕ್ತಪಡಿಸಿ, ಇದೆ ರೀತಿ ಜನರಲ್ಲಿ ಮಾನವೀಯತೆಯ ಹಾಗೂ ಮೌಢ್ಯಚಾರಣೆ ವಿರುದ್ಧದ ಅರಿವು ಮೂಡಬೇಕು ಎಂದು ಖಡಕ್ ಎಚ್ಚರಿಕೆ ನೀಡಿದರು.
ತಂಬಾಗನ್ನ ಹಟ್ಟಿಗೆ ಭೇಟಿ ನೀಡಿ ಪರಿಶೀಲಿಸಿದ ನೂರುನ್ನೀಸಾ
ಮಲ್ಲೇನಹಳ್ಳಿ ಗೋಲ್ಲರಹಟ್ಟಿ ಘಟನೆ ಸಂಬಂಧ ಎಫ್ಐಆರ್ ದಾಖಲು
Get real time updates directly on you device, subscribe now.
Prev Post
Next Post
Comments are closed.