ವ್ಯಸನ ಮುಕ್ತರಾದಾಗ ಸುಂದರ ಬದುಕು ಸಾಧ್ಯ

467

Get real time updates directly on you device, subscribe now.


ತುಮಕೂರು: ಆರೋಗ್ಯ ವಂತ ಜೀವನ ಬೇಕೆಂದರೆ ವ್ಯಸನ ಮುಕ್ತರಾದಾಗ ಮಾತ್ರ ಸಾಧ್ಯ ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಗಂಗಾಧರ್ ತಿಳಿಸಿದ್ದಾರೆ.
ನಗರದ ಸರಕಾರಿ ಜೂನಿಯರ್ ಕಾಲೇಜಿನ ವಿದ್ಯಾರ್ಥಿಗಳಿಗೆ ಪ್ರಾಂಶುಪಾಲ ರಾಜಕುಮಾರ್ ಅವರ ಅಧ್ಯಕ್ಷತೆಯಲ್ಲಿ ಡಾ.ಮಹಾಂತ ಶಿವಯೋಗಿಗಳ ಜನ್ಮದಿನಾಚರಣೆ ಅಂಗವಾಗಿ ಆಯೋಜಿಸಿದ್ದ ವ್ಯಸನ ಮುಕ್ತ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ. ದುಶ್ಚಟಗಳಿಂದ ದೂರವಾದಾಗ ಮಾತ್ರ ಮನುಷ್ಯ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಸಮಾಜದಲ್ಲಿ ಮುಂದೆ ಬರಲು ಸಾಧ್ಯ ಎಂದರು.
ಪ್ರತಿ ವ್ಯಕ್ತಿಯ ಯಶಸ್ಸಿನ ಹಿಂದೆ ತಂದೆ, ತಾಯಿ, ಗುರು ಹಿರಿಯರು ಇದ್ದೇ ಇರುತ್ತಾರೆ, ಇವರನ್ನು ಮರೆತು ಎಂದಿಗೂ ಜೀವಿಸು ವಂತಿಲ್ಲ, ಇದರ ಜೊತೆಗೆ ನಮಗೆ ಅನ್ನ ನೀಡುವ ರೈತ ಹಾಗೂ ದೇಶ ಕಾಯುವ ಯೋಧರನ್ನು ಮರೆಯ ಬಾರದು, ತಂದೆ, ತಾಯಿ, ಗುರು, ಹಿರಿಯರು ನಮಗೆ ಮಾರ್ಗದರ್ಶನ ಮಾಡಿ ನಮ್ಮ ಭವಿಷ್ಯ ರೂಪಿಸಿದರೆ, ರೈತ ಎಂತಹ ಕಷ್ಟದಲ್ಲಿಯೂ ನಮಗೆ ಅನ್ನ ನೀಡುತ್ತಾನೆ, ಹಾಗೆಯೇ ಯೋಧ ಚಳಿ, ಮಳೆ, ಗಾಳಿ ಎನ್ನದೆ ಗಡಿ ಕಾಯ್ದು ನಾವು ನೆಮ್ಮದಿಯಿಂದ ಬದುಕುವಂತಹ ಭರವಸೆ ಮೂಡಿಸುತ್ತಾನೆ, ಇವರನ್ನು ನಾವ್ಯಾರು ಮರೆಯುವಂತಿಲ್ಲ ಎಂದು ಗಂಗಾಧರ್ ನುಡಿದರು.

ಸಂಪನ್ಮೂಲ ವ್ಯಕ್ತಿ ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಜಯಣ್ಣ ಮಾತನಾಡಿ, ದೇಶದ ಸರ್ವತೋಮುಖ ಬೆಳೆವಣಿಗೆ ಎಂದರೆ ಅದು ಆ ದೇಶದಲ್ಲಿನ ಜನರು ಆರೋಗ್ಯವಂತ ಜೀವನ ಅವಲಂಬಿಸಿರುತ್ತದೆ, ವಿಶ್ವ ಆರೋಗ್ಯ ಸಂಸ್ಥೆ ಎಂದರೆ ಆರೋಗ್ಯ ಎಂದರೆ ಮನುಷ್ಯನ ದೈಹಿಕ, ಸಾಮಾಜಿಕ ಹಾಗೂ ಆಧ್ಯಾತ್ಮಿಕ ಆರೋಗ್ಯವನ್ನು ಒಟ್ಟಾರೆಯಾಗಿ ಪರಿಗಣಿಸಲಾಗುತ್ತದೆ, ಈ ಎಲ್ಲಾ ಅಂಶಗಳು ಸರಿ ಇರಬೇಕೆಂದರೆ ನಾವು ವ್ಯಸನದಿಂದ ಮುಕ್ತರಾಗಬೇಕು, ಹದಿ ಹರೆಯದ ವಯಸ್ಸಿನಲ್ಲಿ ಆಕರ್ಷಣೆಗೆ ಒಳಗಾಗಿ ಮಾಡುವ ಒಂದು ತಪ್ಪು ಚಟವಾಗಿ ಪರಿಣಮಿಸಿ ವ್ಯಕ್ತಿಯ ವೈಯಕ್ತಿಕ ಆರೋಗ್ಯದ ಜೊತೆಗೆ ಸಮಾಜದ ಸ್ವಾಥ್ಯವನ್ನು ಕೆಡಿಸುತ್ತದೆ, ಮದ್ಯಪಾನ, ಧೂಮಪಾನ, ಮಾದಕ ವಸ್ತುಗಳ ಸೇವನೆಯಿಂದ ನಮ್ಮ ಮೆದುಳಿನ ನರಮಂಡಲದ ಮೇಲೆ ನೇರ ಪರಿಣಾಮ ಬೀರಿ ಸಾವು ನೋವು ಸಂಭವಿಸುತ್ತವೆ, ಹಾಗಾಗಿ ಯುವ ಜನತೆ ಇದರಿಂದ ದೂರ ಇರಬೇಕೆಂದು ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸರಕಾರಿ ಜೂನಿಯರ್ ಕಾಲೇಜಿನ ಪ್ರಾಂಶುಪಾಲ ರಾಜಕುಮಾರ್ ಮಾತನಾಡಿ, ಮಾನವ ಸಂಪತ್ತಾಗಬೇಕೆಂದರೆ ದುಶ್ಚಟಗಳಿಂದ ದೂರವಾದಾಗ ಮಾತ್ರ ಸಾಧ್ಯ, ಸದೃಢ ದೇಹದಲ್ಲಿ ಮಾತ್ರ ಸಧೃಡ ಮನಸ್ಸಿರಲು ಸಾಧ್ಯವೆಂಬ ಸ್ವಾಮಿ ವಿವೇಕಾನಂದರ ನುಡಿಯನ್ನು ನಾವೆಲ್ಲರೂ ಪಾಲಿಸಬೇಕಿದೆ, ನಮ್ಮ ಕಾಲೇಜಿಗೆ ಗ್ರಾಮೀಣ ಭಾಗದಿಂದ ಹೆಚ್ಚಿನ ವಿದ್ಯಾರ್ಥಿಗಳು ಆಗಮಿಸುತ್ತಾರೆ, ಹಾಗಾಗಿ ಅವರಿಗೆ ನೀಡುವ ಎಚ್ಚರಿಕೆಯ ಮಾತುಗಳೆಂದರೆ ನೀವು ಬಸ್ಸಿನಲ್ಲಿ ಪ್ರಯಾಣಿಸುವ ಸಂದರ್ಭದಲ್ಲಾಗಲಿ, ಶಾಲಾ, ಕಾಲೇಜು ಆವರಣದಲ್ಲಿಯಾಗಲಿ, ಅಪರಿಚಿತರೊಂದಿಗೆ ಸಲುಗೆ ಬೆಳೆಸಬೇಡಿ, ಅವರು ಕೊಟ್ಟಿದ್ದನ್ನು ತಿನ್ನಬೇಡಿ, ಅನಾಮೇಧೆಯರಿಂದ ಸಂಕಷ್ಟಕ್ಕೆ ಒಳಗಾಗುವ ಸಾಧ್ಯತೆಗಳಿವೆ, ನಿಮ್ಮನ್ನು ದುಷ್ಕೃತ್ಯಗಳಿಗೆ ಬಳಸಿಕೊಳ್ಳುವ ಸಾಧ್ಯತೆ ಇದೆ, ಜೀವನವೆಲ್ಲಾ ಪೊಲೀಸ್ ಕೇಸು, ದೈಹಿಕ, ಮಾನಸಿಕ ಹಿಂಸೆಗೆ ಗುರಿಯಾಗಬೇಕಾಗುತ್ತದೆ, ಹಾಗಾಗಿ ಅತಿ ಆಪ್ತರಲ್ಲದ, ಅಪರಿಚಿತ ರೊಂದಿಗೆ ಸ್ನೇಹಕ್ಕೆ ಮುಂದಾಗಬಾರದೆಂದು ಎಚ್ಚರಿಕೆ ನೀಡಿದರು.

ಉಪನ್ಯಾಸಕ ಮೋಹನಕುಮಾರ್ ಅವರು ವ್ಯಸನ ಮುಕ್ತ ದಿನದ ಪ್ರತಿಜ್ಞಾ ವಿಧಿ ಬೋಧಿಸಿದರು. ಉಪನ್ಯಾಸಕರಾದ ಪ್ರಭಾಕರ್, ಗಂಗಾಧರಯ್ಯ, ದಸ್ತಗೀರ್ ಸಾಬ್, ಪ್ರಕಾಶ್.ಟಿ.ವಿ, ಶ್ರೀಧರ್, ಹರೀಶ್, ನಂಜುಂಡಯ್ಯ, ಶಶಿಧರ್, ಮೋಹನಕುಮಾರ್, ಹರೀಶ್.ಜಿ.ಹೆಚ್. ಮತ್ತಿತರರು ಹಾಜರಿದ್ದರು.
ಮಾನಸಿಕ,

Get real time updates directly on you device, subscribe now.

Comments are closed.

error: Content is protected !!