ಕುಣಿಗಲ್: ಬೆಸ್ಕಾಂ ನಿರ್ಲಕ್ಷ್ಯದಿಂದ ಎಲೆಕಡೆಕಲು ಗ್ರಾಮದಲ್ಲಿ ಅಧಿಕ ವಿದ್ಯುತ್ ಪ್ರವಹಿಸಿ ನೂರಾರು ಮನೆಯಲ್ಲಿ ವಿದ್ಯುತ್ ಉಪಕರಣ ಸುಟ್ಟು ಭಸ್ಮವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಡಾ.ರಂಗನಾಥ್ ಭೇಟಿ ನೀಡಿ ಪರಿಶೀಲಿಸಿ, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಸಮರ್ಪಕ ವ್ಯವಸ್ಥೆ ಮಾಡುವಂತೆ ಸೂಚಿಸಿದರು.
ಭಾನುವಾರ ಬೆಳಗ್ಗೆ ಗೃಹ ಬಳಕೆ ಸರಬರಾಜು ವಿದ್ಯುತ್ ಲೈನ್ ಮೇಲೆ 11 ಕೆವಿ ಲೈನ್ ಬಿದ್ದು ಹೆಚ್ಚಿನ ಪ್ರಮಾಣದ ವಿದ್ಯುತ್ ಪ್ರವಹಿಸಿ ನೂರಾರು ಮನೆಯಲ್ಲಿದ್ದ ಟಿವಿ, ಫ್ಯಾನ್ ಸೇರಿದಂತೆ ಗೃಹ ಬಳಕೆ ಉಪಕರಣಗಳು ಮೀಟರ್ ಬೋರ್ಡ್ ಸೇರಿದಂತೆ ಗ್ರಾಮದ ಬೀದಿ ದೀಪಗಳು ಸುಟ್ಟುಹೋಗಿದ್ದವು, ಘಟನೆ ಬೆಳಗ್ಗೆ ನಡೆದರೂ ಸಂಜೆಯಾದರೂ ಬೆಸ್ಕಾಂ ಅಧಿಕಾರಿಗಳು ಬಾರದ ಬಗ್ಗೆ ಶಾಸಕರು ಭೇಟಿ ನೀಡಿದ ಸಮಯದಲ್ಲಿ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು.
ಗ್ರಾಮಸ್ಥರು ಸಮಸ್ಯೆ ಸ್ಪಂದಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ ಶಾಸಕ, ಇಲಾಖೆಯ ಮೇಲಾಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಗ್ರಾಮದಲ್ಲಿನ ಮನೆಗಳಲ್ಲಿ ಆಗಿರುವ ವಿದ್ಯುತ್ ಉಪಕರಣಗಳ ನಷ್ಟಕ್ಕೆ ಸೂಕ್ತ ಪರಿಹಾರಕ್ಕೆ ವ್ಯವಸ್ಥೆ ಮಾಡುವಂತೆ 16 ಫ್ಯಾನ್, 4 ಟಿವಿ ಸೇರಿದಂತೆ ಇತರೆ ದಿನಬಳಕೆ ವಿದ್ಯುತ್ ಉಪಕರಣಗಳು ಹಾನಿಯಾಗಿದ್ದು ಇವುಗಳಿಗೆ ಪರಿಹಾರ ನೀಡುವಂತೆ ಚರ್ಚೆ ನಡೆಸಿದರು.
ಫ್ಯಾನ್ ಸುಟ್ಟಿರುವ ಮನೆಗಳಿಗೆ ನಾನೇ ಫ್ಯಾನ್ ಕೊಡಿಸುವುದಾಗಿ ಶಾಸಕರು ಇದೇ ಸಂದರ್ಭದಲ್ಲಿ ತಿಳಿಸಿದರು. ಹುಲಿಯೂರು ದುರ್ಗ ಬೆಸ್ಕಾಂ ಎಇಇ ವೀರಭದ್ರಚಾರ್, ಇತರೆ ಸಿಬ್ಬಂದಿ ಶಾಸಕರ ಭೇಟಿ ವೇಳೆ ಹಾಜರಿದ್ದರು.
Comments are closed.