ಕುಣಿಗಲ್: ಅಪರಿಚತ ವ್ಯಕ್ತಿಯ ಕರೆ ನಂಬಿದ ವೈದ್ಯರೊಬ್ಬರು ಆಪ್ ಒಂದನ್ನು ಅಪರಿಚಿತ ವ್ಯಕ್ತಿಯ ಸೂಚನೆ ಮೇರೆಗೆ ಮೊಬೈಲ್ನಲ್ಲಿ ಸ್ಥಾಪಿಸಿ ಸಾವಿರಾರು ರೂ. ಕಳೆದುಕೊಂಡ ಘಟನೆ ನಡೆದಿದೆ.
ತಾಲೂಕಿನ ಹುಲಿಯೂರು ದುರ್ಗದ ವೈದ್ಯೆ ಪ್ರೇಮ ( ಹೆಸರು ಬದಲಿಸಿದೆ) ಎಂಬುವರಿಗೆ ಅಪರಿಚತ ವ್ಯಕ್ತಿಯಿಂದ ಕರೆ ಬಂದಿದ್ದು, ಕರೆ ಮಾಡಿದಾಗ ತಾನು ಬೆಸ್ಕಾಂ ಅಕೌಂಟೆಂಟ್ ಎಂದು ಹೇಳಿ ನಿಮ್ಮ ಮೊಬೈಲ್ ಬೆಸ್ಕಾಂನ ಲೈಟ್ ಬಿಲ್ಗೆ ಅಪ್ಡೇಟ್ ಆಗಿಲ್ಲ ಎಂದು ಅಪ್ಡೇಟ್ ಮಾಡಲು ರಸ್ಟ್ ಡಸ್ಟ್ ಆಪ್ನ್ನು ಮೊಬೈಲ್ನಲ್ಲಿ ಸ್ಥಾಪಿಸುವಂತೆ (ಇನ್ಸ್ಸ್ಟಾಲ್) ಮಾಡುವಂತೆ ಹೇಳಿ ಹತ್ತು ರೂ. ದಂಡ ಕಟ್ಟುವಂತೆ ಹೇಳಿ ಕಟ್ಟುವ ಲಿಂಕನ್ನು ವೈದ್ಯೆಯ ಮೊಬೈಲ್ಗೆ ಕಳಿಸಿದ್ದು, ಅದರಂತೆ ವೈದ್ಯೆ ಫೈನ್ ಕಟ್ಟಿದ ನಂತರ ವೈದ್ಯೆಯ ಮೊಬೈಲ್ಗೆ ಬರುವ ಎಲ್ಲಾ ಕರೆ, ಮೆಸೇಜ್ನ್ನು ಹ್ಯಾಕ್ ಮಾಡಿ ವೈದ್ಯೆಯ ಖಾತೆಯಿಂದ 46,550 ರೂ. ದೋಚಿಸಿದ್ದು ಘಟನೆಗೆ ಸಂಬಂಧಿಸಿದಂತೆ ವೈದ್ಯೆ ಸೈಬರ್ ಕ್ರೈಂ ಹಾಗೂ ಹುಲಿಯೂರು ದುರ್ಗ ಪೊಲೀಸರಿಗೆ ದೂರು ನೀಡಿದ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ವೈದ್ಯೆ ಖಾತೆಗೆ ಕನ್ನ
Get real time updates directly on you device, subscribe now.
Prev Post
Comments are closed.