ಗ್ರಾಮ ಲೆಕ್ಕಿಗರ ಕೊಠಡಿ ಶಿಥಿಲ- ತೆರವಿಗೆ ಆಗ್ರಹ

416

Get real time updates directly on you device, subscribe now.


ಕುಣಿಗಲ್: ತಾಲೂಕಿನ ಹುಲಿಯೂರು ದುರ್ಗ ಹೋಬಳಿಯ ಎಲೆಕಡಕಲು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾವರಣದಲ್ಲಿ ಗ್ರಾಮ ಲೆಕ್ಕಿಗರ ಕೊಠಡಿ ಶಿಥಿಲವಾಗಿ ಕ್ರಿಮಿ, ಕೀಟ, ವಿಷ ಜಂತುಗಳ ವಾಸಸ್ಥಾನವಾಗಿದ್ದು ಯಾವುದೇ ಆನಾಹುತವಾಗುವ ಮುನ್ನ ಶಿಥಿಲ ಕಟ್ಟಡ ತೆರವುಗೊಳಿಸುವಂತೆ ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಶಿಕ್ಷಕರು ಆಗ್ರಹಿಸಿದ್ದಾರೆ.

ಎಲೆಕಡಕಲು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಮೂವತ್ತು ವರ್ಷಗಳ ಹಿಂದೆ ಗ್ರಾಮ ಲೆಕ್ಕಿಗರ ವಸತಿ ಗೃಹ ನಿರ್ಮಾಣ ಮಾಡಲಾಗಿತ್ತು, ವಸತಿ ಗೃಹದಲ್ಲಿ ಯಾರೂ ವಾಸ ಮಾಡದ ಕಾರಣ ಕಾಲ ಕ್ರಮೇಣ ವಸತಿ ಗೃಹ ಪಾಳು ಬೀಳುವಂತಾಗಿ ಛಾವಣಿ ಕುಸಿದು, ಗಿಡ ಗೆಂಟೆ ಬೆಳೆದು ಪಾಳು ಬೀಳುವಂತಾಗಿದೆ, ಅಲ್ಲದೆ ಕ್ರಿಮಿ, ಕೀಟ, ವಿಷ ಜಂತುಗಳ ವಾಸಸ್ಥಾನವೂ ಅಗಿದೆ, ಶಾಲಾವರಣದಲ್ಲಿ ಮಕ್ಕಳು ಆಟವಾಡಲು ಹೋದಾಗ ಯಾವುದೇ ಅನಾಹುತ ಸಂಭವಿಸುವ ಮುನ್ನ ಸದರಿ ಕಟ್ಟಡವನ್ನು ತೆರವುಗೊಳಿಸುವಂತೆ ಶಾಲಾಭಿವೃದ್ಧಿ ಸಮಿತಿ ಸದಸ್ಯ ಕೃಷ್ಣಪ್ಪ ಹಾಗೂ ಶಾಲೆಯ ಮುಖ್ಯ ಶಿಕ್ಷಕರು ತಹಶೀಲ್ದಾರ್ಗೆ ಪತ್ರ ಬರೆದು ಮನವಿ ಮಾಡಿ ಸುಮಾರು ಒಂದು ವರ್ಷವೆ ಕಳೆದಿದ್ದರೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಾಗಲಿ ಸಂಬಂಧಪಟ್ಟ ಕಂದಾಯ ಇಲಾಖೆ ಅಧಕಾರಿಗಳಾಗಲಿ ಶಿಥಿಲಗೊಂಡ ಕೊಠಡಿ ತೆರವುಗೊಳಿಸಲು ಮುಂದಾಗಿಲ್ಲ, ಸದರಿ ಕಟ್ಟಡದಿಂದ ಮಕ್ಕಳಿಗೆ ಅನಾನುಕೂಲ ವಾಗುತ್ತಿದ್ದು ಇನ್ನಾದರೂ ಎಚ್ಚೆತ್ತು ಸಂಬಂಧಿಸಿದ ಅಧಿಕಾರಿಗಳು ತುರ್ತು ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!