ಇಂದ್ರ ಧನುಷ್ ಯಶಸ್ಸಿಗೆ ಶ್ರಮಿಸಿ: ತಹಶೀಲ್ದಾರ್

167

Get real time updates directly on you device, subscribe now.


ಕುಣಿಗಲ್: ರಾಷ್ಟ್ರೀಯ ಲಸಿಕಾ ಕಾರ್ಯುಕ್ರಮದ ಯಶಸ್ಸಿಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವ ಮೂಲಕ ಲಸಿಕಾ ಕಾರ್ಯಕ್ರಮ ಇಂದ್ರ ಧನುಷ್ ಯಶಸ್ವಿಗೆ ಶ್ರಮಿಸಬೇಕೆಂದು ತಹಶೀಲ್ದಾರ್ ವಿಶ್ವನಾಥ ಹೇಳಿದರು.
ತಾಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ಇಂದ್ರಧನುಶ್ ರಾಷ್ಟ್ರೀಯ ಲಸಿಕಾ ಕಾರ್ಯಕ್ರಮ, ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮ ಹಾಗೂ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಪ್ರಗತಿ ಸಭೆ ನಡೆಸಿ ಮಾತನಾಡಿ, ಐದು ವರ್ಷದೊಳಗಿರುವ ಮಕ್ಕಳನ್ನು ಮಾರಾಣಾಂತಿಕ ಖಾಯಿಲೆಯಿಂದ ರಕ್ಷಿಸಲು ಲಸಿಕಾ ಕಾರ್ಯಕ್ರಮ ಯಶಸ್ವಿಗೆ ಅಗತ್ಯ ಸಿದ್ದತೆ ಜೊತೆ ಅರ್ಹ ಮಕ್ಕಳನ್ನು ಗುರುತಿಸಿ ಮೂರು ತಿಂಗಳ ಪ್ರತ್ಯೇಕ ದಿನದಂದು ನಡೆಯುವ ಲಸಿಕಾ ಕಾರ್ಯಕ್ರಮದಲ್ಲಿ ಲಸಿಕೆ ಪಡೆಯುವಂತೆ ಶ್ರಮ ವಹಿಸಬೇಕೆಂದರು.

ತಾಲೂಕು ಆರೋಗ್ಯಾಧಿಕಾರಿ ಮರಿಯಪ್ಪ ಮಾತನಾಡಿ, ತಾಲೂಕಿನ ಎರಡು ವರ್ಷದೊಳಗಿನ 189, 02-05ರ ವರೆಗಿನ ಆರು ಮಕ್ಕಳು ಹಾಗೂ 38 ಗರ್ಭಿಣಿಯರಿದ್ದು ಎಲ್ಲರನ್ನು ಆಯಾ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಗುರುತಿಸಿ ಲಸಿಕೆ ನೀಡಲು ಆಗಸ್ಟ 07 ರಿಂದ 12, ಸೆಪ್ಟಂಬರ್ 11 ರಿಂದ 16 ಹಾಗೂ ಅಕ್ಟೋಬರ್ 9 ರಿಂದ 14ನೇ ತಾರೀಕಿನಂದು ಗುರುತಿಸಿ ಸಿದ್ಧತೆ ನಡೆಸಲಾಗಿದೆ ಎಂದರು.

ತಂಬಾಕು ನಿಯಂತ್ರಣ ಕಾರ್ಯಕ್ರಮದಲ್ಲಿ ಕೆಲಪ್ರೌಢಶಾಲೆಯಲ್ಲಿ ಶಾಲಾ ಮಕ್ಕಳು ಧೂಮಪಾನಕ್ಕೆ ಒಳಗಾಗಿರುವ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದಾಗ ಕಳವಳಗೊಂಡ ತಹಶೀಲ್ದಾರ್, ವ್ಯಸನ ಮುಕ್ತ ಸಮಾಜ ನಿರ್ಮಾಣ ಮನೆಯ ಪೋಷಕರಿಂದಲೆ ಆಗಬೇಕಿದೆ, ಪೋಷಕರು ಅಪ್ರಾಪ್ತರ ಕೈಯಲ್ಲಿ ತಂಬಾಕು ಸೇರಿದಂತೆ ಇತರೆ ಮಾದಕ ವಸ್ತು ತರಿಸುವ ಪ್ರವೃತ್ತಿ ಒಳ್ಳೆಯದಲ್ಲ, ಮಕ್ಕಳಲ್ಲಿ ಇಂತಹ ಪ್ರವೃತ್ತಿ ನಿಯಂತ್ರಿಸಲು ಆರೋಗ್ಯ ಇಲಾಖಾಧಿಕಾರಿಗಳು ಮಕ್ಕಳಲ್ಲಿ ಕೌನ್ಸಿಲಿಂಗ್ ನಡೆಸಿ, ಶಿಕ್ಷಕರು, ಪೋಷಕರಿಗೆ ಹೊಣೆಗಾರಿಕೆ ನೀಡಬೇಕಿದೆ, ಶೀಕ್ಷಣ ಸಂಸ್ಥೆಯಿಂದ 300 ಮೀಟರ್ ಅಂತರದಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು, ಚಹಾ ಅಂಗಡಿಗಳ ಬಳಿ ಪ್ರತ್ಯೇಕವಾಗಿ ನಿರ್ಮಿಸಲಾಗಿರುವ ಗೂಡುಗಳ ತೆರವಿಗೆ ಕ್ರಮ ಕೈಗೊಳ್ಳಬೇಕಿದೆ, ಸಾರ್ವಜನಿಕ ಪ್ರದೇಶದಲ್ಲಿ ಧೂಮಪಾನ ನಿಯಂತ್ರಣಕ್ಕೆ ಎಲ್ಲಾ ಕ್ರಮ ಕೈಗೊಳ್ಳಬೇಕಿದೆ, ಈ ನಿಟ್ಟಿನಲ್ಲಿ ಅಧಿಕಾರಿಗಳೊಂದಿಗೆ ತಾವು ಬರುವುದಾಗಿ ಹೇಳಿದರು.

ರಾಷ್ಟ್ರೀಯ ಆರೋಗ್ಯ ಯೋಜನೆಯಡಿಯಲ್ಲಿ 404 ಅಂಗನವಾಡಿ ಕೇಂದ್ರದ 11059 ಮಕ್ಕಳ ಆರೋಗ್ಯ ತಪಾಸಣೆ ವರ್ಷಕ್ಕೆ ಎರಡು ಬಾರಿ ಮಾಡಿ, ಗಂಭೀರ ಸಮಸ್ಯೆಯಿಂದ ಬಳಲುತ್ತಿರುವ ಎಂಟಕ್ಕೂ ಹೆಚ್ಚು ಮಕ್ಕಳಿಗೆ ಅತ್ಯಾಧುನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ, 392 ಸರ್ಕಾರಿ, ಅನುದಾನಿತ ಶಾಲೆಗಳ ಮಕ್ಕಳ ಆರೋಗ್ಯ ತಪಾಸಣೆ ಪ್ರಸಕ್ತ ತಿಂಗಳಿನಿಂದ ನಡೆಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದರು, ಸಿಡಿಪಿಒ ಶಶಿಧರ, ಎಎಸೈ ಪ್ರಶಾಂತ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!