ಆಕಸ್ಮಿಕ ಬೆಂಕಿಗೆ 2 ಎಮ್ಮೆ ಸಾವು

172

Get real time updates directly on you device, subscribe now.


ಗುಬ್ಬಿ: ತಾಲೂಕಿನ ಕಡಬ ಹೋಬಳಿಯ ಪೆರಮಸಂದ್ರ ಗ್ರಾಮದಲ್ಲಿ ಆಕಸ್ಮಿಕವಾಗಿ ಬೆಂಕಿ ತಗಲಿ ಎರಡು ಎಮ್ಮೆ ಸಾವನ್ನಪ್ಪಿದರೆ ಇನ್ನೂ ಮೂರು ಎಮ್ಮೆಗಳಿಗೆ ಸಾಕಷ್ಟು ಗಾಯಗಳಾಗಿರುವಂತಹ ಘಟನೆ ನಡೆದಿದೆ.
ಹಾಲು ಹಾಕಿಕೊಂಡು ಜೀವನ ಮಾಡುತ್ತಿದ್ದ ಯೋಗೇಶ್ ಕುಟುಂಬ ಈಗ ಬೀದ್ದಿಗೆ ಬೀಳುವ ಸ್ಥಿತಿ ತಲುಪಿದ್ದು ಕನಿಷ್ಠ 60 ರಿಂದ 70 ಸಾವಿರಕ್ಕೂ ಹೆಚ್ಚು ಮೌಲ್ಯದ ಎಮ್ಮೆಗಳನ್ನು ಕಳೆದುಕೊಂಡಿರುವ ಕುಟುಂಬ ಸಾಕಷ್ಟು ನಷ್ಟ ಅನುಭವಿಸುವಂತಾಗಿದೆ.
ಮಧ್ಯರಾತ್ರಿ ಎರಡು ಗಂಟೆಯ ವೇಳೆಯಲ್ಲಿ ಈ ಘಟನೆ ನಡೆದಿದ್ದು ಎರಡು ಎಮ್ಮೆ ಸಾವನ್ನಪ್ಪಿದ್ದು ಇನ್ನೂ ಮೂರು ಎಮ್ಮೆ ಗಾಯಗಳಿಂದ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿವೆ.

Get real time updates directly on you device, subscribe now.

Comments are closed.

error: Content is protected !!