14ನೇ ವರ್ಷದ ಆಚಾರ್ಯ ನೃತ್ಯೋತ್ಸವ ಇಂದು

138

Get real time updates directly on you device, subscribe now.


ತುಮಕೂರು: ನಗರದ ರೇವತಿ ನೃತ್ಯ ಕಲಾ ಮಂದಿರ ತುಮಕೂರು ಇದರ 14ನೇ ವರ್ಷದ ಆಚಾರ್ಯ ನೃತ್ಯೋತ್ಸವ ಕಾರ್ಯಕ್ರಮ ಆಗಸ್ಟ್ 05ರ ಸಂಜೆ 4.30ಕ್ಕೆ ಬಾಳನಕಟ್ಟೆಯ ಡಾ.ಗುಬ್ಬಿವೀರಣ್ಣ ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿದೆ ಎಂದು ರೇವತಿ ನೃತ್ಯ ಕಲಾಮಂದಿರದ ಕಾರ್ಯದರ್ಶಿ ಸಹನಾ ಓಹಿಲೇಶ್ವರ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ 14 ವರ್ಷಗಳಿಂದ ತುಮಕೂರು ನಗರದ ಶಿರಾಗೇಟ್ ಮತ್ತು ವಿದ್ಯಾನಗರ, ಗುಬ್ಬಿಯಲ್ಲಿ ಶಾಖೆಗಳನ್ನು ತೆರದು ಭರತನಾಟ್ಯ ಮತ್ತು ಶಾಸ್ತ್ರೀಯ ಸಂಗೀತ ಕಲಿಸುತ್ತಿರುವ ರೇವತಿ ನೃತ್ಯ ಕಲಾ ಮಂದಿರ ಪ್ರತಿ ವರ್ಷ ಪೌರಾಣಿಕ ಹಿನ್ನೆಲೆಯುಳ್ಳ ಕಥಾವಸ್ತುಗಳನ್ನು ಆಯ್ಕೆ ಮಾಡಿಕೊಂಡು ಮಕ್ಕಳಿಂದ ಆಚಾರ್ಯ ನೃತ್ಯೋತ್ಸವ ಕಾರ್ಯಕ್ರಮ ಏರ್ಪಡಿಸಿಕೊಂಡು ಬರಲಾಗುತ್ತಿದೆ, ಕಳೆದ ವರ್ಷ ಸರ್ವಂ ಶಿವಂಮಯ ಎಂಬ ನೃತ್ಯ ರೂಪಕ ಪ್ರಸ್ತುತ ಪಡಿಸಲಾಗಿತ್ತು, ಈ ವರ್ಷ ಶ್ರೀನಿವಾಸ ಕಲ್ಯಾಣ ಎಂಬ ಕಥಾವಸ್ತುವನ್ನು ಒಳಗೊಂಡ ಸುಮಾರು 1.30 ಗಂಟೆಗಳ ಕಾಲದ ನೃತ್ಯ ಕಾರ್ಯಕ್ರಮಗಳ ನಡೆಯಲಿದೆ ಎಂದರು.

ಆಗಸ್ಟ್ 05ರ ಸಂಜೆ 4.30ಕ್ಕೆ ರೇವತಿ ನೃತ್ಯ ಕಲಾ ಮಂದಿರದ ನಾಲ್ಕುವರೆ ವರ್ಷದಿಂದ ನಲವತ್ತು ವರ್ಷದ ವರೆಗಿನ ಸುಮಾರು 250 ಮಕ್ಕಳಿಂದ ನಟರಾಜ ಪೂಜೆಯೊಂದಿಗೆ ಆರಂಭವಾಗುವ ಕಾರ್ಯಕ್ರಮದಲ್ಲಿ, ಮಂತ್ರಪುಷ್ಪ, ಭರತ ಮಾರ್ಗ ಪದ್ಧತಿ ರೂಪಕಗಳ ಪ್ರದರ್ಶನ ನಡೆಯಲಿದೆ, ನಂತರ ನಿರಂತರ 90 ನಿಮಿಷಗಳ ಕಾಲ ಶ್ರೀನಿವಾಸ ಕಲ್ಯಾಣದ ಪ್ರತಿ ಹಂತವನ್ನು ಪ್ರೇಕ್ಷಕರ ಮುಂದಿಡುವ ನೃತ್ಯ ನಾಟಕ ಶ್ರೀನಿವಾಸ ಕಲ್ಯಾಣದ ಪ್ರದರ್ಶನ ನಡೆಯಲಿದೆ, ಮಕ್ಕಳಿಗೆ ಪೌರಾಣಿಕ ಪಾತ್ರಗಳ ಪರಿಚಯ ಮತ್ತು ಮಹತ್ವವನ್ನು ಮನದಟ್ಟು ಮಾಡಿಕೊಡುವ ಹಿನ್ನೆಲೆಯಲ್ಲಿ ಪೌರಾಣಿಕ ಕಥಾ ವಸ್ತುಗಳನ್ನು ಆಯ್ದುಕೊಳ್ಳಲಾಗುತ್ತಿದೆ, ಶಾಸ್ತ್ರೀಯ, ಲಘು ಸಂಗೀತ ಹಾಗೂ ಜಾನಪದ ಸಂಗೀತ ಈ ಮೂರನ್ನು ಬೆರೆತ ಸಂಗೀತ ದಾಟಿಯಲ್ಲಿ ಇಡೀ ನೃತ್ಯ ರೂಪಕ ರಂಗದ ಮೇಲೆ ಪ್ರದರ್ಶನಗೊಳ್ಳಲಿದೆ ಎಂದು ತಿಳಿಸಿದರು.

ನೃತ್ಯ ಕಾರ್ಯಕ್ರಮದ ನಂತರ ನಡೆಯುವ ವೇದಿಕೆ ಕಾರ್ಯಕ್ರಮದ ಸಾನಿಧ್ಯವನ್ನು ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ವಹಿಸಲಿದ್ದಾರೆ, ಅಧ್ಯಕ್ಷತೆಯನ್ನು ರೇವತಿ ನೃತ್ಯ ಕಲಾ ಮಂದಿರದ ಅಧ್ಯಕ್ಷ ಸಿದ್ದಲಿಂಗಪ್ಪ ವಹಿಸುವರು, ಇದೇ ವೇಳೆ ಹಿರಿ, ಕಿರುತೆರೆಯ ಕಲಾವಿದೆಯಾದ ಶ್ರೀಗುರು ವಿದ್ವಾನ್ ದೇವು ರೂಪಾಂತರ ಹಾಗೂ ನಂದಿನಿ ನೃತ್ಯಾಲಯ ಮೈಸೂರು ಇದರ ಮುಖ್ಯಸ್ಥ ಕಣ್ಣನ್ ಅವರಿಗಳಿಗೆ ಗುರುವಂದನೆ ಕಾರ್ಯಕ್ರಮ ಏರ್ಪಡಿಸಲಾಗಿದೆ, ಕಾರ್ಯಕ್ರಮದಲ್ಲಿ ಫಾರ್ಮ್ ಪುಡ್ಸ್ನ ಎಂ.ಡಿ. ಜೆಫಿನ್ ಜಾಯ್, ಲಿಮ್ಕಾ ರೇಕಾರ್ಡ್ ಹೋಲ್ಡರ್ ಜನಾರ್ಧನ್ ಜಿ.ಎನ್. ಅವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಸಹನಾ ಓಹಿಲೇಶ್ವರ್ ವಿವರ ನೀಡಿದರು.

ಸುದ್ದಿಗೋಷ್ಠಿಯಲ್ಲಿ ರೇವತಿ ನೃತ್ಯ ಕಲಾಮಂದಿರದ ನಿರ್ದೇಶಕಿ ನಂದಿನಿ, ಹಿರಿಯ ವಿದ್ಯಾರ್ಥಿಗಳಾದ ಜಯಂತ್, ರೋಷಿನಿ ಮತ್ತಿತರರು ಪಾಲ್ಗೊಂಡಿದ್ದರು.

Get real time updates directly on you device, subscribe now.

Comments are closed.

error: Content is protected !!