ಎಂಟಿಕೆ ಮತ್ತೆ ಗರಂ

413

Get real time updates directly on you device, subscribe now.

ತುರುವೇಕೆರೆ : ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ  ಎಲ್ಲೆ  ಮೀರುತ್ತಿರುವ ಶಾಸಕ ಮಸಾಲಜಯರಾಮ್ ಅವರ ಹಿಂಬಾಲಕರುಗಳ ಗೂಂಡಾಪ್ರವೃತ್ತಿಗೆ ಜಿಲ್ಲಾ ಎಸ್.ಪಿ. ಬ್ರೇಕ್ ಹಾಕಬೇಕು, ಇಲ್ಲವಾದಲ್ಲಿ ಜನಸಾಮಾನ್ಯರ ರಕ್ಷಣೆಗಾಗಿ ಜೆ.ಡಿ.ಎಸ್. ಪಕ್ಷ ಕೋವಿಡ್ ಮಾರ್ಗ ಸೂಚಿ ಪಾಲನೆ ಮಾಡುವ ಮೂಲಕವೇ ಬೀದಿಗಿಳಿಯಬೇಕಾಗುತ್ತದೆ  ಎಂದು ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಎಚ್ಚರಿಸಿದರು.

ಪತ್ರಿಕಾಗೋಷ್ಟಿನ್ನುದ್ದೇಶೀಸಿ ಮಾತನಾಡಿ, ಕ್ಷೇತ್ರ ವ್ಯಾಪ್ತಿಯಲ್ಲಿ ಶಾಸಕ ಮಸಾಲಜಯರಾಮ್ ಅವರ ಹಿಂಬಾಲಕರುಗಳಿಗೆ ಕಾನೂನಿನ ನಿಯಮವೇ ಇಲ್ಲದಂತಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಶಾಸಕರು ಹಾಗೂ ಜಿ.ಪಂ. ಸದಸ್ಯೆಯ ಪತಿ  ನಾಗರಾಜು ಅವರುಗಳ ಕುಮ್ಮಕ್ಕಿನಿಂದ ಸಿ.ಎಸ್.ಪುರ ಹೋಬಳಿ  ಇಡಗೂರಿನ  ಜೆಡಿಎಸ್ ಕಾರ್ಯಕರ್ತ ಆನಂದ್‌ನನ್ನು  ವೃತ್ತಿಪರ ಕೊಲೆಗಾರರು ಬಳಸುವ ಬಾಕುನಿಂದ ಇರಿದು  ಕೊಲೆಗೆ ಯತ್ನಿಸಲಾಗಿದೆ. ಮಸಾಲ ಜಯರಾಮ್ ಶಾಸಕರಾದ ನಂತರ ಕ್ಷೇತ್ರ ವ್ಯಾಪ್ತಿಯಲ್ಲಿ ಇಂತಹ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇಂತಹ ಕೃತ್ಯಗಳಿಗೆ ಶಾಸಕರು ಕುಮ್ಮಕ್ಕು ನೀಡುವ ಮೂಲಕ ಸಮಾಜದ ಶಾಂತಿಗೆ ಭಂಗ ತರುತ್ತಿದ್ದಾರೆ ಎಂದು ಆರೋಪಿಸಿದರು.

ಸಿ.ಎಸ್.ಪುರ. ಠಾಣೆಯಲ್ಲಿ ಇಡಗೂರಿನ ಆನಂದ್ ಕೊಲೆಗೆ ಯತ್ನ ಸಂಬಂಧಿಸಿದಂತೆ ಇಗಾಗಲೇ ಪ್ರಕರಣ ದಾಖಲಾಗಿದೆ.  ಆದರೆ  ಪೊಲೀಸರು ಶಾಸಕ ಮಸಾಲಜಯರಾಮ್ ಒತ್ತಡಕ್ಕೆ ಮಣಿದು ಆರೋಪಿಗಳನ್ನು ಬಂಧಿಸುವಲ್ಲಿ ನಿರ್ಲಕ್ಷ್ಯ ತೋರುತ್ತಿದ್ದಾರೆ, ಜನತೆ ತಮಗೆ ನೀಡಿದ ಅಧಿಕಾರವನ್ನು ಶಾಸಕರು ದುರ್ಬಳಕೆ ಮಾಡಿಕೊಂಡು, ತಮ್ಮ ಹಾಗೂ ದ್ವನಿ ಎತ್ತಿದವರ ವಿರುದ್ಧ ಸೇಡು ತೀರಿಸಿಕೊಳ್ಳುತ್ತಿದ್ದಾರೆ. ವಿನಾಕಾರಣ ಎಸ್.ಸಿ. ಸಮುದಾಯದವರನ್ನು ಬಹು ಸಂಖ್ಯಾತರ ಮೇಲೆ ಎತ್ತಿ ಕಟ್ಟುವ ಮೂಲಕ ಅಟ್ರಾಸಿಟಿ ಪ್ರಕರಣ ದಾಖಲಿಸುವ ಹುನ್ನಾರ ನೆಡೆಸುತ್ತಿದ್ದಾರೆ,  ಎಸ್‌.ಸಿ ಮತ್ತು ಎಸ್‌.ಟಿ, ಕಾಯ್ದೆಯನ್ನು ತಮ್ಮ ರಾಜಕೀಯ ಹಿತಾಸಕ್ತಿಗೆ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

Get real time updates directly on you device, subscribe now.

Comments are closed.

error: Content is protected !!