ತುಮಕೂರು: ಹೃದ್ರೋಗ ವಿಭಾಗದಲ್ಲಿ ವೇಗ ಹಾಗೂ ನಿಖರ ಚಿಕಿತ್ಸೆ ನೀಡಲು ಸಿದ್ಧಗಂಗಾ ಆಸ್ಪತ್ರೆಯ ಹೃದ್ರೋಗ ವಿಭಾಗಕ್ಕೆ ಇದೇ ಆಗಸ್ಟ್6 ರಂದು ಆಪ್ಟಿಕಲ್ ಕೋಹೆರ್ಸ್ ಟೆಮೋಗ್ರಫಿ ಪರಿಚಯಿಸುತ್ತಿದ್ದು ಈ ಸೌಲಭ್ಯ ಒಳಗೊಂಡ ಜಿಲ್ಲೆಯ ಏಕೈಕ ಆಸ್ಪತ್ರೆ ನಮ್ಮದಾಗಲಿದೆ ಎಂದು ಸಿದ್ಧಗಂಗಾ ಆಸ್ಪತ್ರೆ ನಿರ್ದೇಶಕ ಡಾ.ಎಸ್.ಪರಮೇಶ್ ತಿಳಿಸಿದರು.
ನಗರದ ಸಿದ್ಧಗಂಗಾ ಆಸ್ಪತ್ರೆಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು ಈ ಟೆಕ್ನಾಲಜಿ ಬಳಕೆಯಿಂದ ರೋಗಿಗಳ ಚೇತರಿಕೆ ಹಾಗೂ ಹೃದಯದ ತುರ್ತು ಚಿಕಿತ್ಸೆಯಲ್ಲಿ ನಿಖರ ಫಲಿತಾಂಶ ದೊರೆಯಲಿದೆ, ಆಗಸ್ಟ್ 6 ಭಾನುವಾರ ನಡೆಯುವ ಕಾರ್ಯಕ್ರಮದಲ್ಲಿ ಒಸಿಟಿ ಮೂಲಕ ನಡೆಯುವ ಶಸ್ತ್ರಚಿಕಿತ್ಸೆ ನೇರ ಪ್ರಸಾರ ಹಾಗೂ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿದೆ, ಸಾರ್ವಜನಿಕರು ನೂತನ ತಂತ್ರಜ್ಞಾನದ ಉಪಯೋಗ ಪಡೆದುಕೊಳ್ಳಬೇಕು ಎಂದರು.
.
ಸಿದ್ಧಗಂಗಾ ಸೂಪರ್ ಸ್ಪೆಷಾಲಿಟಿ ವಿಭಾಗದ ಮುಖ್ಯಸ್ಥರು, ಹಿರಿಯ ಹೃದ್ರೋಗ ತಜ್ಞ ಡಾ.ಭಾನುಪ್ರಕಾಶ್.ಹೆಚ್.ಎಂ. ಟೆಕ್ನಾಲಜಿ ಕುರಿತು ಮಾತನಾಡಿ, ಸಾಮಾನ್ಯವಾಗಿ ನಾವು ಹೃದ್ರೋಗಿಗಳಿಗೆ ಕ್ಯಾಥಲ್ಯಾಬ್ಗಳಲ್ಲಿ ಆಂಜಿಯೋಗ್ರಾಂ, ಆಂಜಿಯೋ ಪ್ಲಾಸ್ಟಿ, ಸ್ಟಂಟ್ ಅಳವಡಿಸುವುದು ಸೇರಿದಂತೆ ಅನೇಕ ಚಿಕಿತ್ಸೆ ನೀಡುತ್ತೇವೆ, ಈ ಸಮಯದಲ್ಲಿ ಲಭ್ಯವಿರುವ ಎಲ್ಲಾ ತಂತ್ರಜ್ಞಾನ ಬಳಸಿಯೂ ಕೂಡ ಚಿಕಿತ್ಸೆಯಲ್ಲಿ ಸಣ್ಣಪುಟ್ಟ ತೊಡಕುಗಳಿಂದ ವೈದ್ಯರಾದ ನಾವು ಪ್ರಯಾಸ ಪಡುತ್ತಲೇ ಇರುತ್ತೇವೆ, ತಪ್ಪು ಗ್ರಹಿಕೆ ತಪ್ಪು ನಿರ್ಣಯ ಕೆಲವೊಮ್ಮೆ ರೋಗಿಯ ಜೀವಕ್ಕೂ ಅಪಾಯ ತರುವಂತಹದ್ದಾಗಿರುತ್ತದೆ, ಹಾಗಾಗಿ ಈ ಒಸಿಟಿ ಟೆಕ್ನಾಲಜಿ ಬಳಕೆಯಿಂದ ಈ ಎಲ್ಲಾ ತಪ್ಪುಗಳಿಗೆ ಒಂದು ಪೂರ್ಣವಿರಾಮ ನೀಡಬಹುದಾಗಿದೆ ಎಂದರು. ಹೃದ್ರೋಗ ತಜ್ಞ ಡಾ.ಶರತ್ ಕುಮಾರ್.ಜೆ.ವಿ. ಹಾಜರಿದ್ದರು.
ಸಿದ್ಧಗಂಗಾ ಮಠಾಧ್ಯಕ್ಷರಾದ ಸಿದ್ಧಲಿಂಗ ಮಹಾ ಸ್ವಾಮೀಜಿಯವರು ಸದಾ ಹೊಸ ಹೊಸ ತಂತ್ರಜ್ಞಾನಗಳ ಬಳಕೆಗೆ ಮಾರ್ಗದರ್ಶನ ನೀಡುತ್ತಲೇ ಅವರ ಪ್ರೋತ್ಸಾಹದ ಫಲವಾಗಿ ರಾಜ್ಯದಲ್ಲಿ ಬೆರಳೆಣಿಕೆಯಷ್ಟು ಆಸ್ಪತ್ರೆಗಳಲ್ಲಿ ಮಾತ್ರ ಕಂಡು ಬರುವ ಓಸಿಟಿ ಟೆಕ್ನಾಲಜಿ ನಮ್ಮ ಹೃದ್ರೋಗ ವಿಭಾಗಕ್ಕೆ ಸೇರ್ಪಡೆಯಾಗಿರುವುದು ವಿಭಾಗದ ಕಾರ್ಯ ಕ್ಷಮತೆ ಹೆಚ್ಚಿಸುತ್ತಿದೆ.
-ಡಾ.ಎಸ್.ಪರಮೇಶ್, ನಿರ್ದೇಶಕರು, ಸಿದ್ಧಗಂಗಾ ಆಸ್ಪತ್ರೆ.
Comments are closed.