ಇಂದ್ರ ಧನುಷ್ ಕಾರ್ಯಕ್ರಮಕ್ಕೆ ಚಾಲನೆ

285

Get real time updates directly on you device, subscribe now.


ಮಧುಗಿರಿ: ಇಂದ್ರಧನುಷ್ ಲಸಿಕೆ ಸಪ್ತಾಹದ ಅಡಿಯಲ್ಲಿ ತಾಲೂಕಿನ 25 ಗರ್ಭಿಣಿಯರಿಗೆ, 202 ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ ಎಂದು ತಾಲೂಕು ಆರೋಗ್ಯ ಅಧಿಕಾರಿ ಡಾ.ರಮೇಶ್ ಬಾಬು ತಿಳಿಸಿದರು.

ಲಿಂಗೇನಹಳ್ಳಿ ಬಡಾವಣೆಯ ನಮ್ಮ ಕ್ಲಿನಿಕ್ ನಲ್ಲಿ ಇಂದ್ರ ಧನುಷ್ ಲಸಿಗೆ ನೀಡುವ ಸಪ್ತಾಹ, ಪೌಷ್ಟಿಕ ಆಹಾರ ಮತ್ತು ಸ್ತನಪಾನ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಲಸಿಕೆ ಹಾಕುವುದರಿಂದ ಆರೋಗ್ಯವಂತ ಮಕ್ಕಳನ್ನು ಕಾಣಲು ಸಾಧ್ಯ ಎಂದರು.

ಮಕ್ಕಳು ಆರೋಗ್ಯವಂತರಾಗಲು ಮತ್ತು ಸದೃಢರಾಗಲು ಮಕ್ಕಳಿಗೆ ಸ್ತನಪಾನ ಅಗತ್ಯ, ಈ ಬಗ್ಗೆ ಮಹಿಳೆಯರಲ್ಲಿ ಅರಿವು ಮೂಡಿಸಲು ಸ್ತನಪಾನ ಸಪ್ತಾಹ ನಡೆಸಲಾಗುತ್ತಿದೆ ಎಂದರು.
ಬಾಟಲ್ ಹಾಲಿನಿಂದ ಮಕ್ಕಳ ಬೆಳವಣಿಗೆ ಕುಂಠಿತ ಆಗಲಿದೆ ಇದೇ ಅಲ್ಲದೆ ತಾಯಂದಿರಿಗೆ ಗರ್ಭಿಣಿಯರಿಗೆ, ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವತಿಯಿಂದ ಅನ್ನಪೂರ್ಣ ಯೋಜನೆ ಅಡಿಯಲ್ಲಿ ನೀಡುವ ಪೌಷ್ಟಿಕ ಆಹಾರ ನೀಡುತ್ತಿದ್ದು ಅದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಸಂಪನ್ಮೂಲ ವ್ಯಕ್ತಿ ಧರಣೀಶ್ ಗೌಡ ಮಾತನಾಡಿ ಮಹಿಳೆಯರಲ್ಲಿ ಅಕ್ಷರ ಜ್ಞಾನ ಹೆಚ್ಚಾದಂತೆಲ್ಲ ಆಚಾರ ವಿಚಾರ ಮರೆಯುತ್ತಿದ್ದಾರೆ. ಅವೈಜ್ಞಾನಿಕತೆಯಿಂದಾಗಿ ಶಿಶುಮರಣ ಹೆಚ್ಚಾಗುತ್ತಿದೆ. ಕಡ್ಡಾಯವಾಗಿ ಎರಡು ವರ್ಷ ಮಕ್ಕಳಿಗೆ ಸ್ನಾನ ಮಾಡಿಸಬೇಕು, ಇಲ್ಲದಿದ್ದರೆ ಮಕ್ಕಳಲ್ಲಿ ಬೊಜ್ಜುತನ ಬರುತ್ತದೆ, ಪೌಷ್ಟಿಕ ಆಹಾರ ಆರೋಗ್ಯವಂತ ಮಕ್ಕಳ ಭದ್ರಬುನಾದಿ ಎಂದರು.

ಈ ಸಂದರ್ಭದಲ್ಲಿ ಪುರಸಭಾ ಸದಸ್ಯರಾದ ಶಹೀನಾ ಕೌಸರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ನಾಗಭೂಷಣ್, ಆರೋಗ್ಯ ಇಲಾಖೆಯ ಸಿಬ್ಬಂದಿ ಪುಟ್ಟಮ್ಮ, ಭಾರತಿ, ನವೀನ್, ಮಕ್ಕಳ ತಜ್ಞರಾದ ಇಂದಿರಾ, ಪ್ರಜ್ವಲ್ ಮತ್ತಿತರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!