ಅಪಘಾತದಲ್ಲಿ ದಂಪತಿ ಸಾವು

1,063

Get real time updates directly on you device, subscribe now.


ಗುಬ್ಬಿ: ರಸ್ತೆ ಅಪಘಾತದಲ್ಲಿ ದಂಪತಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ತಾಲೂಕಿನ ಕಡಬ ಹೋಬಳಿಯ ಕಲ್ಲೂರು ಗ್ರಾಮದ ನಾಗರಾಜು ಹಾಗೂ ಪುಟ್ಟಮ್ಮ ಅಕ್ಕ ಪಕ್ಕದಲ್ಲಿ ಸಂತೆ ನಡೆಯುವ ಭಾಗದಲ್ಲಿ ಬೋಂಡಾ ಬಜ್ಜಿ ವ್ಯಾಪಾರ ಮಾಡುವ ಸಲುವಾಗಿ ಮಂಗಳವಾರ ಬೆಳಗ್ಗೆ ಕಲ್ಲೂರಿನಿಂದ ಕೆ.ಜಿ.ಟೆಂಪಲ್ ಗೆ ಸಂತೆಗೆ ವ್ಯಾಪಾರಕ್ಕೆಂದು ತೆರಳುತ್ತಿದ್ದರು. ಮಾರ್ಗ ಮಧ್ಯೆ ಅರಿವೇಸಂದ್ರದ ಬಳಿ ಆಟೋ ಹಾಗೂ ಕಾರಿನ ನಡುವೆ ಡಿಕ್ಕಿ ಸಂಭವಿಸಿ ಆಟೋದಲ್ಲಿದ್ದ ನಾಗರಾಜು (60) ಸ್ಥಳದಲ್ಲೇ ಮೃತಪಟ್ಟರೆ ಪತ್ನಿ ಪುಟ್ಟಮ್ಮ (55) ತುಮಕೂರು ಸಾರ್ವಜನಿಕ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಕರೆದುಕೊಂಡು ಹೋಗುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ. ಇವರಿಗೆ ಒಬ್ಬ ಮಗ, ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ತಾಲೂಕಿನ ಸಿ.ಎಸ್.ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ, ಸ್ಥಳಕ್ಕೆ ಸಿಪಿಐ ಹಾಗೂ ಎಸ್ಐ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!