ಮನೆಗಳ ಪೂರ್ಣಗೊಳಿಸಲು 2450 ಕೋಟಿ ಮೀಸಲು

123

Get real time updates directly on you device, subscribe now.


ಶಿರಾ: ರಾಜ್ಯದಲ್ಲಿ ಅಪೂರ್ಣಗೊಂಡಿರುವ ಸುಮಾರು 3 ಲಕ್ಷ ಮನೆಗಳನ್ನು ಪೂರ್ಣಗೊಳಿಸಲು ಸುಮಾರು 2450 ಕೋಟಿ ರೂ. ಅನುದಾನವನ್ನು ಬಜೆಟ್ ನಲ್ಲಿ ನೀಡಲಾಗಿದೆ ಎಂದು ವಸತಿ ಸಚಿವ ಬಿ.ಜೆಡ್.ಜಮೀರ್ ಅಹಮದ್ ಹೇಳಿದರು.

ಮಂಗಳವಾರ ನಗರದ ಜೆಡ್ ಬಿಎಸ್ ಗ್ರೂಪ್ ವತಿಯಿಂದ ದಿವಂಗತ ಅಲ್ಲಾಬಕಶ್ ಎಂ.ಎಲ್.ಎ.ಕೆ.ಪ್ಯಾರು ಅವರ ಸ್ಮರಣಾರ್ಥವಾಗಿ ನೀಡಿದ ಆ್ಯಂಬುಲೆನ್ಸ್, ಹವಾನಿಯಂತ್ರಿತ ಶವಪೆಟ್ಟಿಗೆಗಳನ್ನು ಹಸ್ತಾಂತರ ಮಾಡಿ ಮಾತನಾಡಿ, ರಾಜ್ಯದ ವಸತಿ ರಹಿತರಿಗೆ ಕಾಂಗ್ರೆಸ್ ಸರ್ಕಾರದಿಂದ 5 ವರ್ಷದ ಆಡಳಿತದಲ್ಲಿ 15 ಲಕ್ಷ ಮನೆ ನೀಡಲು ಯೋಜನೆ ರೂಪಿಸಲಾಗಿದೆ ಹಾಗೂ ಶಿರಾ ನಗರದಲ್ಲಿ 1008 ಗುಂಪು ಮನೆಗಳನ್ನು ಶೀಘ್ರವಾಗಿ ಪೂರ್ಣಗೊಳಿಸಲಾಗುವುದು ಹಾಗೂ 10 ಸಾವಿರ ನಿವೇಶನಗಳನ್ನು ಅರ್ಹ ಫಲಾನುಭವಿಗಳಿಗೆ ನೀಡಲಾಗುವುದು ಎಂದರು.

ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಕಾಂಗ್ರೆಸ್ ಸರ್ಕಾರದ ಮೇಲೆ ಭ್ರಷ್ಟಾಚಾರದ ಆರೋಪ ಮಾಡುತ್ತಿದ್ದಾರೆ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಜಮೀರ್ ಅಹಮದ್ ಖಾನ್, ಹೆಚ್.ಡಿ.ಕುಮಾರಸ್ವಾಮಿಯವರು ಯಾವಾಗಲೂ ಹಿಟ್ ಅಂಡ್ ರನ್ ಕೆಲಸವನ್ನೇ ಮಾಡುತ್ತಾರೆ. ಅವರು ನಿರೀಕ್ಷೆ ಮಾಡಿರಲಿಲ್ಲ ಕಾಂಗ್ರೆಸ್ ಅತಿ ಹೆಚ್ಚು ಬಹುಮತ ಬರುತ್ತದೆ ಎಂದು, ಸಮ್ಮಿಶ್ರ ಸರ್ಕಾರ ಬರುತ್ತದೆ, ನಮ್ಮನ್ನು ಬಿಟ್ಟು ಯಾರು ಸರ್ಕಾರ ರಚನೆ ಮಾಡಲು ಆಗುವುದಿಲ್ಲ ಎಂಬ ಆಸೆ ಇಟ್ಟುಕೊಂಡಿದ್ದರು. ಆದರೆ ದೇವರು ಅವರಿಗೆ ಅವಕಾಶ ಕೊಟ್ಟಿಲ್ಲ. ಹಾಗಾಗಿ ಈ ರೀತಿ ಆರೋಪ ಮಾಡುತ್ತಿದ್ದಾರೆ ಎಂದರು.

ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಹಾಗೂ ಶಾಸಕ ಟಿ.ಬಿ.ಜಯಚಂದ್ರ ಮಾತನಾಡಿ ಅಲ್ಲಾಬಕಶ್ ಕೆ.ಪ್ಯಾರು ಅವರು ಪ್ರತಿ ಸಂದರ್ಭದಲ್ಲಿ ಕೂಡ ಬಡವರ ಪರ ಕಾರ್ಯ ನಿರ್ವಹಿಸುವ ಮೂಲಕ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದ್ದರು. ತಂದೆಯಂತೆ ಅವರ ಮಕ್ಕಳಾದ ಜೀಷಾನ್ ಮೊಹಮದ್, ಬುರಾನ್ ಮೊಹಮದ್ ಅವರೂ ಕೂಡ ಸಮಾಜ ಸೇವೆ ಮಾಡುತ್ತಿರುವುದು ಶ್ಲಾಘನೀಯ ಕಾರ್ಯ, ಎಲ್ಲಾ ಸ್ಥಿತಿವಂತರೂ ಸಹ ಈ ರೀತಿ ಜನಸೇವೆ ಮಾಡುವುದನ್ನು ರೂಢಿಸಿಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಪೂಜಾ ಪೆದ್ದರಾಜು, ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಎಲ್.ರಂಗನಾಥ್, ಸದಸ್ಯರಾದ ಜೀಷಾನ್ ಮೊಹಮದ್, ಬುರಾನ್ ಮೊಹಮದ್, ಅಜಯ್ ಕುಮಾರ್, ಜಾಫರ್, ಲಕ್ಷ್ಮಿಕಾಂತ್, ಕಾಂಗ್ರೆಸ್ ಕಾನೂನು ಮತ್ತು ಮಾನವ ಹಕ್ಕುಗಳ ಘಟಕದ ಅಧ್ಯಕ್ಷ ಹೆಚ್.ಗುರುಮೂರ್ತಿಗೌಡ, ಮುಖಂಡರಾದ ವಾಜರಹಳ್ಳಿ ರಮೇಶ್, ಗೋಣಿಹಳ್ಳಿ ದೇವರಾಜು, ಹೆಚ್.ಎಲ್. ರಂಗನಾಥ್, ಸುಧಾಕರ್ ಗೌಡ, ದಿವಾಕರ್, ಇರ್ಷಾದ್, ಸಾಲೇಹ, ಅಜರ್ ಇತರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!