ಶೋಷಿತರು ರಾಜಕೀಯ ಅಧಿಕಾರ ಪಡೆಯಲಿ

ಉತ್ತಮ ಶಿಕ್ಷಣ ಪಡೆದು ದೌರ್ಜನ್ಯ ದಬ್ಬಾಳಿಕೆಗೆ ಕಡಿವಾಣ ಹಾಕಲಿ: ಕೆ.ಎನ್.ರಾಜಣ್ಣ

113

Get real time updates directly on you device, subscribe now.


ತುಮಕೂರು: ನಮ್ಮ ಸಮಾಜದಲ್ಲಿ ಇಂದಿಗೂ ದಿನ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯ ದಬ್ಬಾಳಿಕೆ ಶೋಷಣೆ ಕಿತ್ತೋಗೆಯ ಬೇಕೇಂದರೆ ಶೋಷಣೆಗೆ ಒಳಗಾದವರು ಶಿಕ್ಷಣ ಪಡೆದು ಒಗ್ಗಟ್ಟಾಗಬೇಕು ಹಾಗಾದರೆ ಮಾತ್ರ ಸಮಾಜದಲ್ಲಿ ಜೀವಂತವಾಗಿರುವ ಶೋಷಣೆ ದೂರ ಮಾಡಬಹುದು ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಕರೆ ನೀಡಿದರು.

ನಗರದ ಅಮಾನಿಕೆರೆ ರಸ್ತೆಯ ಕನ್ನಡ ಭವನದಲ್ಲಿ ಗೌತಮ ಬುದ್ಧ ಸಾಮಾಜಿಕ ಸಾಂಸ್ಕೃತಿಕ ಟ್ರಸ್ಟ್ ಹಾಗೂ ಅರುಣೋದಯ ಶೈಕ್ಷಣಿಕ ಮತ್ತು ಗ್ರಾಮೀಣ ಅಭಿವೃದ್ಧಿ ಟ್ರಸ್ಟ್ ಸಹಯೋಗದಲ್ಲಿ ನಡೆದ ನಾಡಿನ ಪ್ರಭುದ್ಧ ಪ್ರಾಮಾಣಿಕ, ರಾಜಕೀಯ ಮುತ್ಸದ್ಧಿಗಳಾದ ಮಾಜಿ ಲೋಕಸಭಾ ಸದಸ್ಯರು ದಿ.ವೈ.ರಾಮಕೃಷ್ಣ ಹಾಗೂ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಹಿರಿಯ ರಾಜಕಾರಣಿ ದಿ.ಆರ್.ಚೆನ್ನಿಗರಾಮಯ್ಯ ಅವರ ಜನ್ಮ ದಿನಾಚರಣೆ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ಶೋಷಿತ ಸಮುದಾಯಗಳ ರಾಜಕೀಯ ಮತ್ತು ನಾಡಿನ ಅಭಿವೃದ್ಧಿಯೆಂಬ ರಾಜ್ಯಮಟ್ಟದ ವಿಚಾರ ಸಂಕಿರರ್ಣ ಉದ್ಘಾಟಿಸಿ ಮಾತನಾಡಿದರು.

ಘೋಷಿತ ಸಮುದಾಯಗಳಲ್ಲಿ ಒಗ್ಗಟ್ಟಿನ ಕೊರತೆಯಿಂದಾಗಿ ರಾಜಕೀಯ ಅಧಿಕಾರ ಹಿಡಿಯುವಲ್ಲಿ ವಿಫಲವಾಗಿದ್ದು ಎಲ್ಲಿಯವರೆಗೂ ಶೋಷಿತರು ರಾಜಕೀಯಅಧಿಕಾರವನ್ನು ಹೊಂದುವುದಿಲ್ಲ ಅವರಿಗೂ ಶೋಷಣೆ ನಿಲ್ಲುವುದಿಲ್ಲ ಶೋಷಿತರ ಬೇಡಿಕೆಗಳು ಮತ್ತು ನಿರೀಕ್ಷೆಗಳು ಫಲಪ್ರದ ಆಗುವುದಿಲ್ಲವೆಂದ ಅವರು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಶೋಷಿತರ ಬಗ್ಗೆ ಹೋರಾಟ ಮಾಡಿ ಸಂವಿಧಾನ ರಚನಾ ಕರಡು ಸಮಿತಿಯ ಅಧ್ಯಕ್ಷರಾಗಿ ಶೋಷಿತ ಸಮುದಾಯಗಳ ಪರ ನಿಂತು ಮಾತನಾಡಿ ಶೋಷಿತ ಸಮುದಾಯಗಳಿಗೆ ಹಕ್ಕು ಬಾಧ್ಯತೆಗಳನ್ನ ನೀಡದೇ ಹೋಗಿದ್ದರೆ ನಮಗೆಲ್ಲ ಕಷ್ಟವಾಗುತ್ತಿತ್ತು ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯದಲ್ಲಿರುವ ಶೋಷಿತ ಸಮುದಾಯ ಸೇರಿದಂತೆ ಎಲ್ಲಾರೂ ಕೂಡ ಭೂಮಿ ವಂಚಿತರಾಗಬಾರದೆಂದು ರಾಜ್ಯದ ದಲಿತ ಮುಖಂಡರ ಸಲಹೆಯಂತೆ ಪಿಟಿಸಿಎಲ್ ಕಾಯ್ದೆ ಜಾರಿಗೆ ತಂದಿದ್ದು ಸದ್ಯದಲ್ಲಿ ಸಂಪುಟ ಸಭೆಯಲ್ಲಿ ಅನುಮೋದನೆಗೊಂಡು ಜಾರಿಯಾಗಲಿದೆ ಎಂದರು.

ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಶೋಷಣೆ ಖಂಡನೀಯವಾಗಿದ್ದು ನಮ್ಮ ಸಮಾಜದಲ್ಲಿ ಅಂದು ದಲಿತರು, ಶೋಷಿತರು ಈಶ್ವರನ ಹೆಸರು ಹೇಳಿದರೆ ಹಾಗೂ ಓಂ ನಮಃ ಶಿವಾಯ ಮಂತ್ರ ಜಪಿಸಿದರೆ ಶಿವನಿಗೆ ಮಲಿನವಾಯಿತು ಎಂದು ನಾಲಿಗೆ ಕತ್ತರಿಸುತ್ತಿದ್ದರು ಎಂಬುದನ್ನ ಕೇಳಿದರೆ ಮೈ ಜುಮ್ ಅನ್ನಿಸುತ್ತದೆ. ದಿಗ್ಬ್ರಮೆಯಾಗುತ್ತದೆ ಎಂದರು.

ಶೋಷಣೆಯ ಕಾಲಘಟ್ಟದಲ್ಲಿ ತಳ ಸಮುದಾಯಗಳ ವೈ.ರಾಮಕೃಷ್ಣ, ಚೆನ್ನಿಗರಾಮಯ್ಯ ಅಂತಹವರು ಎಷ್ಟರ ಮಟ್ಟಿಗೆ ಶೋಷಣೆ ವಿರುದ್ಧ ಹೋರಾಡಿ ರಾಜಕೀಯ ರಂಗದಲ್ಲಿ ಬೆಳೆದು ನಿಂತವರು ಗಾಂಧಿ, ನೆಹರು ಅವರಿಗೆ ಸಹಾಯಕರಾಗಿ ರಾಜಕೀಯದಲ್ಲಿ ಬೆಳೆದವರು, ಹೀಗಾಗಿ ಶೋಷಿತರು ಇತಂಹವರನ್ನ ಉದಾಹರಣೆಯಾಗಿ ಇಟ್ಟುಕೊಂಡು ಬೆಳೆಯಬೇಕು, ನಾವು ಬಾಲ್ಯ ವಯಸ್ಸಿನಲ್ಲಿ ಶೋಷಣೆಯನ್ನ ಹತ್ತಿರದಿಂದ ಕಂಡಿದ್ದು ಇಂದು ಸಿದ್ದರಾಮಯ್ಯನರು ಬಡವರ, ಶೋಷಿತರ ಹಸಿವು ನೀಗಿಸಲು ಅನ್ನಭಾಗ್ಯ ಯೋಜನೆ ಜಾರಿ ಮಾಡಿದ್ದಾರೆ ಎಮದರು.

ಕಾಂಗ್ರೆಸ್ ಪಕ್ಷದ ರಾಜ್ಯ ವಕ್ತಾರ ನಿಕೇತರಾಜ್ ಮೌರ್ಯ ಕಾರ್ಯಕ್ರಮದಲ್ಲಿ ಶೋಷಿತರ ಬದುಕಿನ ಬಗ್ಗೆ ದಿಕ್ಸೂಚಿ ಭಾಷಣ ಮಾಡುತ್ತಾ ವೈ.ರಾಮಕೃಷ್ಣ, ಚೇನಿಗರಾಮಯ್ಯ ಅವರು ದಲಿತ ಸಮುದಾಯದಲ್ಲಿ ಹುಟ್ಟಿ ಬಲಿತರ ಜೊತೆಗೆ ರಾಜಕೀಯದ ವಿವಿಧ ಮಜಲುಗಳನ್ನು ಅನುಕರಿಸಿ ಶೋಷಿತ ಸಮುದಾಯವರು ರಾಜಕೀಯ ಅಧಿಕಾರ ಹೊಂದುಬಹುದು ಎಂಬ ಆತ್ಮವಿಶ್ವಾಸ ತುಂಬಿದ್ದು ಈ ಹಿನ್ನೆಲೆಯಲ್ಲಿ ಸಮಾಜ ಮುಖಿ ಚಿಂತನೆಯುಳ್ಳ ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರು ಶೋಷಿತರ ಸಮುದಾಯದಲ್ಲಿ ಹುಟ್ಟಿ ಚುನಾವಣೆಯಲ್ಲಿ ಮಧುಗಿರಿ ಸಾಮಾನ್ಯ ಕ್ಷೇತ್ರದಲ್ಲಿ ನಿಂತು ಗೆದಿದ್ದಾರೆ. ಶೋಷಿತರು ಸಮಾಜದಲ್ಲಿ ಸಾಧಿಸಿದ್ದಾರೆ ಎಂಬ ಉದಾಹರಣೆಗೆ ರಾಜಣ್ಣ ಅವರು ಪಾತ್ರರಾಗಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ವೈ.ರಾಮಕೃಷ್ಣಅವರ ಸುಪುತ್ರ, ಮಾತಂಗ ಪೌಂಡೇಶನ್ ರಾಜ್ಯಾಧ್ಯಕ್ಷ ಸಮುದಾಯದ ಚಿಂತಕ ಆರ್.ಲೋಕೇಶ್ ಮಾತನಾಡಿ, ತಳಸಮುದಾಯದ ನಾವುಗಳು ನಮ್ಮಲ್ಲಿ ಇರುವ ವೈರತ್ವ ಹಗೆ ಸಾಧನೆ ಬಿಟ್ಟು ಬಲಿತವರೊಂದಿಗೆ ಸೇರಿ ನಮ್ಮವರ ಹಿತ ಕಾಪಾಡುವ ಸಲುವಾಗಿ ಅನಿವಾರ್ಯವಾಗಿ ರಾಜಕೀಯ ಅಧಿಕಾರ ಹೊಂದಲೇಬೇಕು. ವೈಭವಿಕೃತ ರಾಜಕೀಯ ಶೋಷಣೆಯಿಂದ ದೂರ ಉಳಿಯಬೇಕು ಎಂದು ಕಿವಿಮಾತು ಹೇಳಿದರು.

ಸ್ವಾತಂತ್ರ್ಯ ಹೋರಾಟಗಾರ ಚೆನ್ನಿಗರಾಮಯ್ಯನವರ ಮೊಮ್ಮಗ ಹಾಗೂ ರಾಜವರ್ಧನ್ ಪ್ರತಿಷ್ಠಾನದ ರಾಜ್ಯಾಧ್ಯಕ್ಷ ಅಶೋಕ್ ರಾಜ್ ವರ್ಧನ್, ಮಹಾನಗರ ಪಾಲಿಕೆಯ ಮಹಾಪೌರರಾದ ಪ್ರಭಾವತಿ ಸುಧೀಶ್ವರ್, ಮುಖಂಡರಾದ ರಾಯಸಂದ್ರ ರವಿಕುಮಾರ್, ಮಾಜಿ ಶಾಸಕ ಗಂಗನಮಯ್ಯ, ಉದ್ಯಮಿ ಡಿ.ಟಿ.ವೆಂಕಟೇಶ್, ಚಿಂತಕ ವಿರೂಪಾಕ್ಷ ಡ್ಯಾಗೇರಹಳ್ಳಿ, ಕೊಟ್ಟಶಂಕರ್, ಜೆ.ಸಿ.ರಂಗಧಾಮಯ್ಯ ಇನ್ನಿತರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!