ಹಸಿರು ಕ್ರಾಂತಿಯ ಹರಿಕಾರ ಬಾಬೂಜಿ: ರಂಗಶಾಮಣ್ಣ

553

Get real time updates directly on you device, subscribe now.

ಮಧುಗಿರಿ:  ಶೋಷಿತರ ಹಕ್ಕಿಗಾಗಿ ಹೋರಾಡಿದ  ಧೀಮಂತ ನಾಯಕ, ಬಡವರ ಹಸಿವು ನಿಗಿಸಿದ ಹಸಿರು ಕ್ರಾಂತಿಯ ಹರಿಕಾರ ಬಾಬೂಜಿ ಎಂದು ಮಾದಿಗ ದಂಡೊರ ಸಂಘಟನೆಯ ತಾಲೂಕು ಅಧ್ಯಕ್ಷ ಸಿದ್ದಾಪುರ ರಂಗಶಾಮಣ್ಣ ತಿಳಿಸಿದರು.

ಬಾಬಾ ಸಾಹೇಬ್ ಅಂಬೇಡ್ಕರ್ ಭವನದಲ್ಲಿ ಮಾದಿಗ ದಂಡೊರ ಸಂಘಟನೆ ವತಿಯಿಂದ ಅಯೊಜಿಸಿದ್ದ ಮಾಜಿ ಉಪ ಪ್ರಧಾನಿ ಬಾಬು ಜಗಜೀವನ ರಾಮ್ ರವರ 114 ನೆಯ ಜನ್ಮ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ತಾಲೂಕು ಮಾದಿಗ ದಂಡೊರ ಉಪಾಧ್ಯಕ್ಷ ಬೇಡತ್ತೂರು ತಿಪ್ಪೇಸ್ವಾಮಿ  ಮಾತನಾಡಿ, ಮಧುಗಿರಿ ತಾಲೂಕಿನ ಪ್ರತಿ ಗ್ರಾಮದಲ್ಲಿ ಶೋಷಿತರ ದ್ವನಿಯಾಗಿ ದಂಡೊರ ಕಾರ್ಯ ನಿರ್ವಹಿಸಲಿದೆ. ಬಾಬೂಜಿ ಅವರು ನಿರಂತರವಾಗಿ ಶೋಷಿತರ ಮತ್ತು ದುರ್ಬಲರ ಎಳ್ಗೆಗೆ, ನವಭಾರತ ನಿರ್ಮಾಣಕ್ಕಾಗಿ ಶ್ರಮಿಸಿದ ಧೀಮಂತ ನಾಯಕ, ಶೋಷಿತ ಸಮುದಾಯದಲ್ಲಿ ಜನಿಸಿ, ನೊಂದವರ ದ್ವನಿಯಾಗಿ, ದೇಶಕ್ಕೆ ನೀಡಿದ ಸೇವೆ ಅವಿಸ್ಮರಣೀಯ ಎಂದು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಮಾದಿಗ ದಂಡೊರ ರಾಜ್ಯ ಉಪಾದ್ಯಕ್ಷ ತಂಡೊಟಿ ರಾಮಾಂಜಿನಪ್ಪ, ಯುಕ್ತ  ಪೌಡೇಶನ್ ವ್ಯವಸ್ಥಾಪಕ ನಿರ್ದೇಶಕ ದಿಲೀಪ್, ಮಾತಂಗ ತಮಟೆ ಚಳುವಳಿಯ ಚಳುವಳಿ ಶ್ರೀನಿವಾಸ್, ತಾಲೂಕು ಮಾದಿಗ ದಂಡೊರದ ಪದಾಧಿಕಾರಿಗಳಾದ ಗೌರವದ್ಯಕ್ಷ ಹನುಮಂತರಾಯಪ್ಪ, ಪ್ರಧಾನ ಕಾರ್ಯದರ್ಶಿ ದೆವರಾಜು, ತಾಲೂಕು ಸಂಘಟನಾ ಕಾರ್ಯದರ್ಶಿ ದೊಡ್ಡೇರಿ ಮಹಾಲಿಂಗಪ್ಪ, ಚಂದ್ರಕುಮಾರ್,  ಸಹ  ಕಾರ್ಯದರ್ಶಿ ರಮೇಶ್, ವಿಜಯ್ ನೆರಳಕೆರೆ, ನಿರಕಲ್ಲು ನಾಗೇಶ್ ಹಾಗು ಮಿಡಿಗೆಶಿ ಹೋಬಳಿ ಅಧ್ಯಕ್ಷ  ಬಾಬುಕುಮಾರ್, ದೊಡ್ಡೇರಿ ಹೋಬಳಿ ಅಧ್ಯಕ್ಷ  ಹನುಮಂತ ರಾಯಪ್ಪ, ಚಿಕ್ಕರಂಗ, ಶ್ರೀರಾಮಪ್ಪ, ನರಸಿಂಹ ಮೂರ್ತಿ, ಹನುಮಂತ, ರವಿಕಿರಣ ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!