ಕುಣಿಗಲ್: ಪಟ್ಟಣದಲ್ಲಿ ಲಾಂಗ್ ಹಿಡಿದು ಅಬ್ಬರಿಸಿದ್ದ ಪುಂಡರನ್ನು ಕುಣಿಗಲ್ ಪೊಲೀಸರು ಬಂಧಿಸಿ ಮುಂದಿನ ಕ್ರಮ ಜರುಗಿಸಿದ್ದಾರೆ.
ಪಟ್ಟಣದಲ್ಲಿ ಕೆಲ ದಿನಗಳ ಕೆಳಗೆ ಹಾಡಹಗಲೆ ಲಾಂಗ್ ಹಿಡಿದು ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ನಡೆಸಿ ಸಾರ್ವಜನಿಕರಲ್ಲಿ ಭಯ ಉಂಟಾಗುವಂತೆ ಮಾಡಿದ್ದಲ್ಲದೆ ಲಾಂಗ್ ಹಿಡಿದು ಹಲ್ಲೆ ನಡೆಸಿದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು ಪಟ್ಟಣದ ನಾಗರಿಕರಲ್ಲಿ ಆತಂಕ ಮನೆ ಮಾಡಿತ್ತು.
ಲಾಂಗ್ ಹಿಡಿದು ಅಬ್ಬರಿಸಿದ್ದ ಪುಂಡರು ಘಟನೆ ನಡೆದ ನಂತರ ಪರಾರಿಯಾಗಿದ್ದರು, ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಕುಣಿಗಲ್ ಸಿಪಿಐ ನವೀನ್ ಗೌಡ ಹಿರಿಯಾಧಿಕಾರಿಗಳ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿ ಪುಂಡರನ್ನು ಬಂಧಿಸಿ ಮುಂದಿನ ಕ್ರಮ ಜರುಗಿಸಿದ್ದಾರೆ. ಬಂಧಿತರನ್ನು ಕೂತಾರಹಳ್ಳಿಯ ಆಕಾಶ, ಪಟ್ಟಣದ ಜನತಾ ಕಾಲೋನಿಯ ಸಾಗರ್, ಪ್ರಸಾದ್, ಮಾಗಡಿ ತಾಲೂಕು ಚಿಕ್ಕಕಲ್ಯದ ರಾಜ ಅಲಿಯಾಸ್ ಮಚ್ ರಾಜ ಎಂದು ಗುರುತಿಸಲಾಗಿದೆ.
Comments are closed.